ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಮತ್ತೊಂದು ಹೊಸ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಬಿಎಸ್-6 ನಿಯಮದಂತೆ ಹೊಸ ಬೈಕ್‌ಗಳ ಉತ್ಪಾದನೆ ಮಹತ್ವದ ನಿರ್ಧಾರ ಪ್ರಕಟಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಿಮಾಲಯನ್ ಬೈಕ್ ಹೊರತುಪಡಿಸಿ ಇನ್ನುಳಿದ 500ಸಿಸಿ ಸಾಮರ್ಥ್ಯ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, 350 ಸಿಸಿ ಕ್ಲಾಸಿಕ್ ಬೈಕ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ. ಇದಕ್ಕಾಗಿ ಮತ್ತಷ್ಟು ಹೊಸ ಬೈಕ್ ಉತ್ಪನ್ನಗಳನ್ನು ಬಿಡುಗಡೆಗಾಗಿ ನಿರ್ಧರಿಸಿದ್ದು, ಹಂಟರ್ ಎನ್ನುವ ಹೊಸ ಬೈಕ್ ಮಾದರಿಯೊಂದು ಇದೀಗ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಹಂಟರ್ ಬೈಕ್ ಮಾದರಿಯು ಆರ್‌ಇ ಉತ್ಪಾದನೆಯ ಉಳಿದೆಲ್ಲಾ ಕ್ಲಾಸಿಕ್ ಬೈಕ್ ಮಾದರಿಗಳಿಂತಲೂ ವಿಭಿನ್ನವಾದ ವಿನ್ಯಾಸ ಹೊಂದಿದ್ದು, ಸ್ಟ್ರೀಟ್ ಬೈಕ್ ಡಿಸೈನ್‌ನೊಂದಿಗೆ ಅಲಾಯ್ ವೀಲ್ಹ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಹೊಸ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಮಾದರಿಯ ಎಂಜಿನ್ ಅನ್ನೇ ಪಡೆದುಕೊಂಡಿದ್ದು, ಹೊಸ ಬೈಕಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಹೊಸ ಹಂಟರ್ ಬೈಕಿನಲ್ಲಿ ಬಿಎಸ್-6 ಎಂಜಿನ್ ಮಾದರಿಯನ್ನೇ ಅಳವಡಿಸಲಾಗಿದ್ದು, ಹೊಸ ಬೈಕ್ ಮಾದರಿಯು ಮುಂಬರುವ ಮೇ ಅಥವಾ ಜೂನ್ ಹೊತ್ತಿಗೆ ಬಿಡುಗಡೆಯಾಗಲಿದೆ. ಹೊಸ ಬೈಕ್ ಮಾದರಿಯು ಜಾವಾ 42 ಬೈಕಿಗೆ ಉತ್ತಮ ಪೈಪೋಟಿ ನೀಡಲಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ವಿಭಿನ್ನವಾಗ ವಿನ್ಯಾಸವನ್ನು ಇಷ್ಟಪಡುವ ಗ್ರಾಹಕರನ್ನು ಇದು ಸೆಳೆಯಲಿದೆ. ಜೊತೆಗೆ ಹೊಸ ಬೈಕ್ ಬೆಲೆಯು ಕೂಡಾ ಕ್ಲಾಸಿಕ್ 350 ಬೈಕ್‌ಗಳಿಂತಲೂ ಕಡಿಮೆ ಇರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.40 ಲಕ್ಷದಿಂದ 1.60 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಸದ್ಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350 ಮಾದರಿಯು ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 1.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.1.80 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ ಹಂಟರ್ ಕೂಡಾ 346 ಸಿಸಿ ಎಂಜಿನ್‌ನೊಂದಿಗೆ ಕ್ಲಾಸಿಕ್ ಬೈಕ್ ವಿಭಾಗ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಸಾಮಾನ್ಯ ಮಾದರಿಯ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳ ಜೊತೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಎಮಿಷನ್ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ 500 ಸಿಸಿ ಎಂಜಿನ್ ಮಾದರಿಯ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಯೊಂದಿಗೆ ಬೃಹತ್ ಯೋಜನೆ ರೂಪಿಸಿರುವ ನೀತಿ ಆಯೋಗವು ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಇದರಿಂದ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, 2020ರ ಕೊನೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇವಿ ವಾಹನ ಮಾರಾಟವನ್ನು ಆರಂಭಗೊಳಿಸಲಿವೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ರಾಯಲ್ ಎನ್‌ಫೀಲ್ಡ್ ಸಹ ಈ ನಿಟ್ಟಿನಲ್ಲಿ ಹೊಸ ಯೋಜನೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಇಂಡಿಯಾ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಸಿಇಒ ವಿನೋದ್ ದಾಸರಿ ಅವರು ಸಹ ಸಂಸ್ಥೆಯ ಬೆಳವಣಿಗೆ ಹಲವು ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದಾರೆ.

ಜಾವಾ 42 ಬೈಕಿಗೆ ಪೈಪೋಟಿ ನೀಡಲಿದೆ ರಾಯಲ್ ಎನ್‌ಫೀಲ್ಡ್‌ ಹೊಸ ಹಂಟರ್ ಬೈಕ್

ಹೊಸ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಉತ್ಪನ್ನಗಳ ಅಭಿವೃದ್ದಿಯು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಜೊತೆ ಜೊತೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಬಹುದು.

Article Published On: Monday, February 17, 2020, 14:58 [IST]
English summary
New Royal Enfield Hunter bike spied testing in india details, Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+