ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಮೆಟಿಯೋರ್ 350 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ಬಿಡುಗಡೆಯಾಗುವ ಮುನ್ನವೇ ಮಾಹಿತಿಗಳು ಬಹಿರಂಗವಾಗಿವೆ.

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ ಬೈಕನ್ನು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ವರದಿಗಳಾಗಿತ್ತು. ಆದರೆ ಕಾರೋನ ಸೋಂಕಿನ ಭೀತಿಯಿಂದ ಈ ಬೈಕಿನ ಬಿಡುಗಡೆಯು ವಿಳಂಬವಾಗಿದೆ. ಈ ಮೆಟಿಯೋರ್ 350 ಬೈಕ್ ಭಾರತದಲ್ಲಿ 2020ರ ಸೆಪ್ಟಂಬರ್ ತಿಂಗಳ 25-30ರ ದಿನಾಂಕದ ನಡುವೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ ಎಂದು ನಿರೀಕ್ಷಿಸುತ್ತೇವೆ.

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿಯನ್ನು ಯುಟ್ಯೂಬ್ ಚಾನೆಲ್ ರೈಡರ್ ಲಾಲ್ ಬಹಿರಂಗಪಡಿಸಿದೆ. ಇದರ ಪ್ರಕಾರ ಈ ಬೈಕಿನಲ್ಲಿ ಹೊಸ 350 ಸಿಸಿ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಬಿಎಸ್ 6 ಕ್ಲಾಸಿಕ್ 350 ಎಂಜಿನ್ಗೆ ಹೋಲಿಸಿದರೆ ಸುಮಾರು 0.4 ಬಿಹೆಚ್‌ಪಿ ಪವರ್ ಹೆಚ್ಚಾದರೆ, 1 ಎನ್‌ಎಂ ಟಾರ್ಕ್ ಕಡಿಮೆಯಾಗಿದೆ. ಎಂಜಿನ್‌ನಂತೆಯೇ, ಕ್ಲಚ್ ಮತ್ತು ಗೇರ್ ಬಾಕ್ಸ್ ಸಿಸ್ಟಂ ಅನ್ನು ಸಹ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಈ ಹೊಸ ಬೈಕ್ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಫೈರ್‌ಬಾಲ್ ರೂಪಾಂತರವು ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಬಣ್ಣದ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಎಂಜಿನ್ ಮತ್ತು ಬಣ್ಣದ ರಿಮ್ ಟೇಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಅನ್ನು ಪಡೆಯುತ್ತದೆ. ಇದು ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ. ಇನ್ನು ಸೂಪರ್‌ನೊವಾ ಎಂಬ ರೂಪಾಂತರವು ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ.

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಹೊಸ ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್, ಫೈರ್‌ಬಾಲ್ ಯೆಲ್ಲೋ, ಫೈರ್‌ಬಾಲ್ ರೆಡ್, ಸ್ಟೆಲ್ಲಾರ್ ರೆಡ್ ಮೆಟಾಲಿಕ್, ಸ್ಟೆಲ್ಲಾರ್ ಬ್ಲ್ಯಾಕ್ ಮ್ಯಾಟ್, ಸ್ಟೆಲ್ಲಾರ್ ಬ್ಲೂ ಮೆಟಾಲಿಕ್, ಸೂಪರ್‌ನೊವಾ ಬ್ರೌನ್ ಬ್ರೌನ್ ಡ್ಯುಯಲ್-ಟೋನ್ ಮತ್ತು ಸೂಪರ್‌ನೊವಾ ಬ್ಲೂ ಡ್ಯುಯಲ್-ಟೋನ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಈ ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಈ ಬೈಕಿನಲ್ಲಿ ಎರಡು ಡಿಸ್‌ಪ್ಲೇಯನ್ನು ಹೊಂದಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುವುದು ಬಹಿರಂಗವಾಗಿದೆ.

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ತಾಂತ್ರಿಕ ಮಾಹಿತಿ ಬಹಿರಂಗ

ಇದರಲ್ಲಿ ಕ್ಲಾಕ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಟ್ರಿಪ್ ಮೀಟರ್‌ನಂತಹ ಮಾಹಿತಿಯನ್ನು ಪ್ರದರ್ಶಿಸಿದರೆ, ಮತ್ತೊಂದು ಟಿಎಫ್‌ಟಿ ಯುನಿಟ್ ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮಾಹಿತಿಯನ್ನು ನೀಡುತ್ತದೆ. ಈ ಡಿಜಿಟಲ್ ಕ್ಲಸ್ಟರ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್ ಥಂಡರ್‌ಬರ್ಡ್ ಎಕ್ಸ್ 350 ಮಾದರಿಯ ರೆಟ್ರೂ-ಅರ್ಬನ್ ಕ್ರೂಸರ್ ವಿನ್ಯಾಸವನ್ನು ಹೊಂದಿದೆ.

Article Published On: Saturday, September 5, 2020, 15:54 [IST]
English summary
Royal Enfield Meteor 350 Engine Specs Leak. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+