ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ ಮತ್ತು ಎಂಎಸ್‌ಡಿ

ಟಿವಿಎಸ್ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ ದ್ವಿಚಕ್ರ ವಾಹನ ಮಾದರಿಯೊಂದನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ವಾಹನ ಕುರಿತಾಗಿ ಕುತೂಹಲಕಾರಿಯಾದ ಒಂದು ಜಾಹೀರಾತನ್ನು ಬಿಡುಗಡೆ ಮಾಡಿದೆ.

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ, ಎಂಎಸ್‌ಡಿ‌

ಹೊಸದಾಗಿ ಬಿಡುಗಡೆ ಮಾಡುವ ವಾಹನದ ಕುರಿತಾಗಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಟಿವಿಎಸ್ ಕಂಪನಿಯು ತನ್ನ ವಿವಿಧ ದ್ವಿಚಕ್ರವಾಹನಗಳ ರಾಯಾಭಾರಿಯಾಗಿರುವ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಕ್ರಿಕೆಟರ್ ಎಂಎಸ್ ಧೋನಿ ಜೊತೆಗೂಡಿ ಅಭಿನಯಿಸಿರುವ ಕುತೂಹಲಕಾರಿ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ಆದರೆ ಬಿಡುಗಡೆಯಾಗಲಿರುವ ಹೊಸ ವಾಹನದ ಕುರಿತಾಗಿ ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಟಿವಿಎಸ್ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗೆ ಮತ್ತಷ್ಟು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡವ ಸುಳಿವು ನೀಡಿದೆ.

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ, ಎಂಎಸ್‌ಡಿ‌

ದ್ವಿಚಕ್ರ ವಾಹನ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹಲವು ಹೊಸ ದ್ವಿಚಕ್ರ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಹೊಸ ಟೀಸರ್‌ನಲ್ಲಿ ಭಾರತದಲ್ಲೇ ಮೊದಲ ಎನ್ನುವ ಮೂಲಕವ ವಿಶೇಷ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಸುಳಿವು ಕೊಟ್ಟಿದೆ.

ಸದ್ಯಕ್ಕೆ ಟಿವಿಎಸ್ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ದ್ವಿಚಕ್ರ ವಾಹನಗಳ ಪೈಕಿ ಝೆಪ್ಲಿನ್ ಕಾನ್ಸೆಪ್ಟ್ ಕ್ರೂಸ್ ಬೈಕ್ ಕೂಡಾ ಒಂದಾಗಿದ್ದು, ಹೊಸ ಬೈಕ್ ಮಾದರಿಯು ಬಜಾಜ್ ಅವೆಂಜರ್ ಕ್ರೂಸ್ ಬೈಕ್ ಆವೃತ್ತಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ, ಎಂಎಸ್‌ಡಿ‌

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಝೆಪ್ಲಿನ್ ಹೆಸರಿನೊಂದಿಗೆ ಅನಾವರಣಗೊಂಡಿದ್ದ ಕ್ರೂಸರ್ ಬೈಕ್‌ನ್ನು ಇದೀಗ ಬಿಡುಗಡೆ ಮಾಡುತ್ತಿರುವ ಟಿವಿಎಸ್ ಕಂಪನಿಯು ರೊನಿನ್ ಹೆಸರನ್ನು ಅಧಿಕೃತವಾಗಿ ಕರೆಯುವ ಸಾಧ್ಯತೆಗಳಿದ್ದು, ಕೇಂದ್ರ ಸಾರಿಗೆ ಇಲಾಖೆಯಲ್ಲಿ ಸಲ್ಲಿಕೆ ಮಾಡಲಾಗಿರುವ ಟ್ರೆಡ್‌ಮಾರ್ಕ್ ಅರ್ಜಿಯಲ್ಲಿ ಹೊಸ ಬೈಕ್ ಮಾದರಿಯ ಹೆಸರು ಬಹಿರಂಗವಾಗಿದೆ.

MOST READ: ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗಲಿವೆ ಯಜ್ಡಿ ಹೊಸ ಕ್ಲಾಸಿಕ್ ಬೈಕ್

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ, ಎಂಎಸ್‌ಡಿ‌

ಆದರೆ ಹೊಸ ಬೈಕಿಗಾಗಿ ಪಡೆದುಕೊಳ್ಳಲಾಗಿರುವ ಅಧಿಕೃತ ಹೆಸರು ಕ್ರೂಸರ್ ಮಾದರಿಗಾಗಿಯೇ ಪಡೆದಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲವಾದರೂ ಬಿಡುಗಡೆಯ ಪಟ್ಟಿಯಲ್ಲಿ ಕಾನ್ಸಪ್ಟ್ ಬೈಕ್ ಮೊದಲ ಹಂತದಲ್ಲಿದೆ.

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ, ಎಂಎಸ್‌ಡಿ‌

ಹೀಗಾಗಿ ಹೊಸ ರೊನಿನ್ ಹೆಸರು ಹೊಸ ಕ್ರೂಸರ್ ಬೈಕಿಗೆ ಬಳಕೆ ಮಾಡಬಹುದು ಅಥವಾ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗೂಡಿ ಅಭಿವೃದ್ದಿಗೊಳಿಸುತ್ತಿರುವ ಮತ್ತೊಂದು ಹೊಸ ಅಡ್ವೆಂಚರ್ ಬೈಕ್ ಮಾದರಿಗಾದರೂ ಬಳಕೆ ಮಾಡಬಹುದಾದ ಸಾಧ್ಯತೆಗಳಿವೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಟಿವಿಎಸ್ ಹೊಸ ವಾಹನ ಬಿಡುಗಡೆಯ ಜಾಹೀರಾತಿನಲ್ಲಿ ಬಿಗ್ ಬಿ ಮತ್ತು ಎಂಎಸ್‌ಡಿ

ಆದರೆ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿರುವ ಕ್ರೂಸರ್ ಬೈಕ್ ಮಾದರಿಗಾಗಿಯೇ ಈ ಹೆಸರು ಬಳಕೆ ಮಾಡಬಹುದಾದ ಸಾಧ್ಯತೆ ಹೆಚ್ಚಿದ್ದು, ಸದ್ಯದರಲ್ಲೇ ರೊನಿನ್ ಹೆಸರು ಯಾವ ಬೈಕ್ ಮಾದರಿಗಾಗಿ ಎನ್ನುವುದು ಸ್ಪಷ್ಟವಾಗಲಿದೆ.

Most Read Articles

Kannada
English summary
TVS New Vehicle TVC Released. Read in Kannada.
Story first published: Monday, July 20, 2020, 18:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X