Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು ಜನಪ್ರಿಯ ಆಫ್-ರೋಡರ್ ಯಮಹಾ ಡಬ್ಲ್ಯುಆರ್ 155ಆರ್
ಯಮಹಾ ಕಂಪನಿಯು ಕಳೆದ ತಿಂಗಳು ಫಿಲಿಪೈನ್ಸ್‌ನಲ್ಲಿ ತನ್ನ ಎಕ್ಸ್‌ಎಸ್‌ಆರ್ 155 ಬೈಕನ್ನು ಬಿಡುಗಡೆಗೊಳಿಸಿದ್ದರು. ಇದೀಗ ಫಿಲಿಪೈನ್ಸ್‌ನಲ್ಲಿ ಡಬ್ಲ್ಯುಆರ್ 155ಆರ್ ಆಫ್ ರೋಡ್ ಬೈಕನ್ನು ಬಿಡುಗಡೆಗೊಳಿಸಿದೆ.

ಯಮಹಾ ಕಂಪನಿಯು ಈ ಆಫ್-ರೋಡ್ ಡಬ್ಲ್ಯುಆರ್ 155ಆರ್ ಬೈಕನ್ನು ಭಾರತದಲ್ಲಿಯು ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯಮಹಾ ಡಬ್ಲ್ಯುಆರ್ 155ಆರ್ ಬೈಕನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಯಮಹಾ ಡಬ್ಲ್ಯುಆರ್ 155ಆರ್ ಆಫ್-ರೋಡ್ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಅಳವಡಿಸಲಾಗಿದೆ.

ಯಮಹಾ ಡಬ್ಲ್ಯುಆರ್ 155ಆರ್ ಬೈಕಿನಲ್ಲಿ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 16 ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಯಮಹಾ ಡಬ್ಲ್ಯುಆರ್ 155ಆರ್ ಬೈಕ್ ಸಂಪೂರ್ಣವಾಗಿ ವಿಭಿನ್ನವಾದ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಬೈಕ್ 18 ಇಂಚಿನ ರೇರ್ ವ್ಹೀಲ್‍ಗಳೊಂದಿಗೆ ಸೆಮಿ-ಡಬಲ್ ಕ್ರೆಡಲ್ ಫ್ರೇಮ್ ಹೊಂದಿದೆ.

ಈ ಬೈಕ್ 41 ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಪ್ರಿಲೋಡ್-ಅಡ್ಜೆಸ್ಟೆಬಲ್ ಗ್ಯಾಸ್-ಚಾರ್ಜ್ಡ್ ರೇರ್ ಮೊನೊ-ಶಾಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಈ ಬೈಕಿನ 240 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಬೈಕ್ 41 ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಪ್ರಿಲೋಡ್-ಅಡ್ಜೆಸ್ಟೆಬಲ್ ಗ್ಯಾಸ್-ಚಾರ್ಜ್ಡ್ ರೇರ್ ಮೊನೊ-ಶಾಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಈ ಬೈಕಿನ 240 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ.

ಅಂತರರಾಷ್ಟ್ರೀಯ-ಸ್ಪೆಕ್ ಮಾದರಿಯು ಎಬಿಎಸ್ ಅನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕಿನಲ್ಲಿ ಸಿಂಗಲ್ ಚಾನೆಲ್ ಯುನಿಟ್ ಅನ್ನು ಹೊಂದಿರಬಹುದು.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಭಾರತದಲ್ಲಿ ಯಮಹಾ ಡಬ್ಲ್ಯೂಆರ್ 155ಆರ್ ಬೈಕ್ ಬಿಡುಗಡೆಯಾದ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿಗೆ ಪೈಪೋಟಿ ನೀಡಬಹುದು. ಈ ಬೈಕ್ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಗಿಂತ ಸ್ವಲ್ಪ ಹೆಚ್ಚಿನ ಪವರ್ ಮತ್ತು ಹಿಮಾಲಯನ್ ಬೈಕ್ ಗಿಂತ ತೂಕ ಹೆಚ್ಚಿರುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಆಫ್ ರೋಡ್ ಬೈಕುಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಭಾರತದಲ್ಲಿ ಆಫ್ ರೋಡ್ ಬೈಕ್ ಪ್ರಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯಮಹಾ ಡಬ್ಲ್ಯುಆರ್ 155ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.