ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಒಕಿನಾವಾ ಆಟೋಟೆಕ್, ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಹೊಸ ಮ್ಯಾಕ್ಸಿ ಸ್ಕೂಟರ್ ಹಲವಾರು ಫೀಚರ್‍‍ಗಳನ್ನು, ಸ್ಟ್ರೈಕಿಂಗ್ ಡಿಸೈನ್ ಹಾಗೂ ದೊಡ್ಡ ಗಾತ್ರವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪೆಟ್ರೋಲ್ ಸ್ಕೂಟರ್‍‍ನಂತೆ ಸರಾಗವಾಗಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಒಕಿನಾವಾ ಕ್ರೂಸರ್ ಸ್ಕೂಟರ್ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಹಾಗೂ ಎಪ್ರಿಲಿಯಾ ಎಸ್‍ಎಕ್ಸ್ ಆರ್ 16 ಸ್ಕೂಟರಿನಂತೆ ದೊಡ್ಡ ಗಾತ್ರವನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಹೊಸ ಒಕಿನಾವಾ ಮ್ಯಾಕ್ಸಿ ಸ್ಕೂಟರ್ 3 ಕಿ.ವ್ಯಾನ ಬ್ರಷ್‍‍ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಈ ಮೋಟರಿಗೆ 4 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಜೋಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 120 ಕಿ.ಮೀವರೆಗೆ ಚಲಿಸುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀಗಳಾಗಿದೆ.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಒಕಿನಾವಾ ಕ್ರೂಸರ್‍‍‍ನಲ್ಲಿರುವ ಬ್ಯಾಟರಿ ಪ್ಯಾಕ್‍‍ನೊಂದಿಗೆ ಸ್ಟಾಂಡರ್ಡ್ ಹಾಗೂ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಗಳನ್ನು ನೀಡಲಾಗುವುದು. ಸ್ಟಾಂಡರ್ಡ್ ಚಾರ್ಜರ್‍‍ನಲ್ಲಿ ಬ್ಯಾಟರಿಯು 3ರಿಂದ 8 ಗಂಟೆಗಳಲ್ಲಿ ಚಾರ್ಜ್ ಆದರೆ, ಫಾಸ್ಟ್ ಚಾರ್ಜರ್‍‍ನಲ್ಲಿ 2ರಿಂದ 3 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಒಕಿನಾವಾ ಕ್ರೂಸರ್ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್‍‍ನಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಸೇರಿದಂತೆ ಹಲವಾರು ಫೀಚರ್‍‍ಗಳಿವೆ. ಈ ಸ್ಕೂಟರ್ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್, ಕೀ ಲೆಸ್ ಎಂಟ್ರಿ, ಯು‍ಎಸ್‍‍ಬಿ ಚಾರ್ಜಿಂಗ್ ಪೋರ್ಟ್, ಆ್ಯಂಟಿ ಥೆಫ್ಟ್ ಅಲಾರಾಂ ಹಾಗೂ ಸೆಂಟ್ರಲ್ ಲಾಕಿಂಗ್‍ ಫೀಚರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಇದರ ಜೊತೆಗೆ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಮುಂಭಾಗದಲ್ಲಿರುವ ಎಪ್ರಾನ್‍‍ನ ಹಿಂದೆ ಹೆಚ್ಚುವರಿ ಸ್ಟೋರೇಜ್ ನೀಡಲಾಗಿದೆ. ಹೊಸ ಒಕಿನಾವಾ ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನ್ನು ಈ ವರ್ಷದ ಮಧ್ಯ ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಈ ಎಲೆಕ್ಟ್ರಿಕ್ ಸ್ಕೂಟರಿನ ಬುಕ್ಕಿಂಗ್‍‍ಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಹಲವಾರು ಬಣ್ಣಗಳನ್ನು ಹೊಂದಿರಲಿದೆ. ಈಗ ಪ್ರದರ್ಶನಗೊಂಡ ಸ್ಕೂಟರ್‍‍ನಲ್ಲಿರುವ ಬಣ್ಣದೊಂದಿಗೂ ಮಾರಾಟ ಮಾಡಲಾಗುವುದು.

ಆಟೋ ಎಕ್ಸ್‌ಪೋ 2020: ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಒಕಿನಾವಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಒಕಿನಾವಾ ಕ್ರೂಸರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್ ಆಗಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಒಕಿನಾವಾ ಕ್ರೂಸರ್ ಯಾವುದೇ ಪ್ರತಿಸ್ಪರ್ಧಿಯನ್ನು ಹೊಂದಿಲ್ಲದಿದ್ದರೂ, ಸ್ಪೆಸಿಫಿಕೇಶನ್‍‍ನಲ್ಲಿ ಎಥೆರ್ 450 ಸ್ಕೂಟರಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, February 7, 2020, 11:05 [IST]
English summary
Okinawa Cruiser Maxi-Scooter Unveiled in 2020 Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+