ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ದಸರಾ ನಂತರ ದೀಪಾವಳಿ ಸಂಭ್ರಮಕ್ಕಾಗಿ ಹೊಸ ವಾಹನಗಳ ಖರೀದಿ ಭರಾಟೆಯು ಜೋರಾಗಿದ್ದು, ಇಂಧನ ಆಧರಿತ ವಾಹನಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕೂಡಾ ಹೆಚ್ಚಳವಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚಿರುವ ಹಿನ್ನಲೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆ ಪೂರೈಸಲು ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ್ದು, ಒಕಿನಾವ ಕೂಡಾ ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡುವುದರ ಜೊತೆಗೆ ಮಾರಾಟ ಪ್ರಮಾಣದಲ್ಲೂ ಕೂಡಾ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ದಸರಾ ಸಂಭ್ರಮ ನಂತರ ಇದೀಗ ದೀಪಾವಳಿಯ ವಿಶೇಷತೆಗಾಗಿ ಹೊಸ ವಾಹನ ಖರೀದಿ ಪ್ರಕ್ರಿಯೆಯು ಇತರೆ ದಿನಗಳಿಂತಲೂ ಸಾಮಾನ್ಯವಾಗಿ ಹೆಚ್ಚಿರಲಿದ್ದು, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಹೆಚ್ಚಿನ ಬೇಡಿಕೆ ದಾಖಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ವಿವಿಧ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಲಭ್ಯತೆಯ ಹೊರತಾಗಿಯೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯಿಂದ ಎಲೆಕ್ಟ್ರಿಕ್ ವಾಹನ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರು ಇದೀಗ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧಾರದ ಎಲೆಕ್ಟ್ರಿಕ್ ವಾಹನಗಳ ಮಾಲೀಕತ್ವ ಪಡೆದುಕೊಳ್ಳುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಜೊತೆಗೆ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ನಿಗದಿತ ಅವಧಿಗಾಗಿ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ವಿನಾಯ್ತಿ ನೀಡುತ್ತಿರುವುದು ಕೂಡಾ ಎಲೆಕ್ಟಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ಅಂಶವಾಗಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗಲಿವೆ. ಇನ್ನು ಜೆಸ್ಟ್ ಮನಿ ಕಂಪನಿಯೊಂದಿಗೆ ಕೈಜೋಡಿಸಿರುವ ಒಕಿನಾವ ಕಂಪನಿಯು ವಿವಿಧ ಇವಿ ಸ್ಕೂಟರ್‌ಗಳ ಮೇಲೆ ಆಕರ್ಷಕ ಸಾಲಸೌಲಭ್ಯಗಳೊಂದಿಗೆ ಅತಿ ಕಡಿಮೆ ಪ್ರಮಾಣದ ಇಎಂಐ ಮೊತ್ತಗಳನ್ನು ಪ್ರಕಟಿಸಿರುವುದು ಕೂಡಾ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಹೊಸ ಫೈನಾನ್ಸ್ ಸೌಲಭ್ಯದಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಸಾಲ ಮರುಪಾವತಿಗೆ ಹೆಚ್ಚಿನ ಅವಕಾಶ ದೊರೆಯಲಿದ್ದು, ಸ್ಕೂಟರ್ ಖರೀದಿ ಮಾಡಿದ ಮೊದಲ ಮೂರು ತಿಂಗಳು ಯಾವುದೇ ಇಎಂಐ ಪಾವತಿಸುವ ಅವಶ್ಯಕತೆಯಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಮೊದಲ ತಿಂಗಳ ಇಎಂಐ ವಿನಾಯ್ತಿ ಮೊತ್ತವನ್ನು ಉಳಿದ ಇಎಂಐ ಮೊತ್ತದಲ್ಲಿ ಸೇರ್ಪಡೆಗೊಂಡಿರಲಿದ್ದು, ಸದ್ಯಕ್ಕೆ ಹಣಕಾಸಿನ ತೊಂದರೆ ಕಾರಣಕ್ಕೆ ವಾಹನ ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಇದು ಸಾಕಷ್ಛು ಸಹಕಾರಿ ಎನ್ನಬಹುದು. ಇನ್ನು ಸರಳ ಹಣಕಾಸು ಆಯ್ಕೆಗಳ ಜೊತೆಗೆ ಕ್ಯಾಶ್ ಕೂಪನ್ ಮತ್ತು ಆಯ್ದ ಗ್ರಾಹಕರಿಗೆ ಲಕ್ಕಿ ಡ್ರಾ ಸಹ ಪರಿಚಯಿಸಿದ್ದು, ಗ್ರಾಹಕರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಲಿಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯ ರಿಡ್ಜ್ 30 ಜೊತೆಗೆ ಹೈ ಎಂಡ್ ಮಾದರಿಯಾಗಿ ಲೀಥಿಯಂ-ಅಯಾನ್ ಬ್ಯಾಟರಿ ಪ್ರೇರಿತ ಐ-ಪ್ರೈಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಪ್ರತಿ ಸ್ಕೂಟರ್ ಮಾದರಿಯ ಮೇಲೂ ಗ್ರಾಹಕರಿಗೆ ರೂ. 6 ಸಾವಿರ ಕ್ಯಾಶ್ ಕೂಪನ್ ನೀಡಲಾಗುತ್ತಿದ್ದು, 10 ಗ್ರಾಹಕರು ಲಕ್ಕಿ ಡ್ರಾ ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ 24ರಿಂದ ನವೆಂಬರ್ 15ರ ಅವಧಿಯಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರು ಹೊಸ ಆಫರ್‌ಗೆ ಅರ್ಹರಾಗಿದ್ದು, ನವೆಂಬರ್ 24ರಂದು ಲಕ್ಕಿ ಡ್ರಾ ಗ್ರಾಹಕರಿಗೆ ವಿಶೇಷ ಉಡುಗೊರೆ ಸಿಗಲಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ- ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ ಒಕಿನಾವ

ಲಕ್ಕಿ ಡ್ರಾ ಪಡೆದುಕೊಳ್ಳುವ 10 ಗ್ರಾಹಕರಲ್ಲಿ ಮೊದಲ ಗ್ರಾಹಕನಿಗೆ ಕಂಪನಿಯ ಲೋ ಸ್ಪೀಡ್ ಸ್ಕೂಟರ್ ಮಾದರಿಯಾದ ಆರ್ 30 ಗೆಲ್ಲುವ ಅವಕಾಶ ನೀಡಿದ್ದು, ಇನ್ನುಳಿದ ಒಂಬತ್ತು ಗ್ರಾಹಕರಿಗೆ ಟಿವಿ, ಪ್ರಿಡ್ಜ್, ಒವೆನ್, ಮೊಬೈಲ್ ಸೇರಿದಂತೆ ವಿವಿಧ ಬಹಮಾನಗಳು ದೊರಲಿವೆ.

More from DriveSpark

Article Published On: Tuesday, November 10, 2020, 21:01 [IST]
English summary
Okinawa Increase Electric Scooter Production. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+