ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಭಾರತ ಹಾಗೂ ವಿಶ್ವದ್ಯಾಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೊಸ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರವನ್ನು ಪ್ರವೇಶಿಸುತ್ತಿವೆ. ಓಲಾ ಕಂಪನಿಯು ಸಹ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಓಲಾ ಕಂಪನಿಯು ಆಮ್‌ಸ್ಟರ್‌ಡ್ಯಮ್ ಮೂಲದ ಅಟಾರ್ಗೊ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಓಲಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2021ರಲ್ಲಿ ಭಾರತದಲ್ಲಿ ಹಾಗೂ ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಅಟಾರ್ಗೊ ಆಪ್‌ಸ್ಕೂಟರ್ ಎಂದು ಹೆಸರಿಡಲಾಗಿದ್ದು, ಇದು ಹೆಚ್ಚಿನ ಪ್ರಮಾಣದ ಬ್ಯಾಟರಿಯಲ್ಲಿ ಚಲಿಸಲಿದ್ದು, 240 ಕಿ.ಮೀ ವ್ಯಾಪ್ತಿಯ ಮೈಲೇಜ್ ನೀಡುತ್ತದೆ. ಓಲಾ ಕಂಪನಿಯು ದೇಶದ ಹಲವಾರು ನಗರಗಳಲ್ಲಿ ಎಲೆಕ್ಟ್ರಿಕ್ ವಾಹನ ಹಾಗೂ ಚಾರ್ಜಿಂಗ್ ಸೆಂಟರ್‌ಗಳ ಸೇವೆಯನ್ನು ನೀಡುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದೆ. ಕರೋನಾ ವೈರಸ್‌ನ ಉಪಟಳ ಮುಗಿದ ನಂತರ ಕಂಪನಿಯು ಇವುಗಳ ಅಭಿವೃದ್ಧಿಯತ್ತ ಗಮನಹರಿಸಲಿದೆ. ಓಲಾ ಮುಂದಿನ ವರ್ಷ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಈ ಆಪ್‌ಸ್ಕೂಟರ್‌ನಲ್ಲಿ 240 ಕಿ.ಮೀಗಳವರೆಗೆ ಚಲಿಸುವ ಪೋರ್ಟಬಲ್ ಬ್ಯಾಟರಿಯನ್ನು ಅಳವಡಿಸಲಾಗುವುದು. ಈ ಬ್ಯಾಟರಿಯನ್ನು ಎರಡೂವರೆ ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಬ್ಯಾಟರಿ ಪ್ಯಾಕ್‌ನಲ್ಲಿ ಮೂರು ಮಾದರಿಗಳನ್ನು ನೀಡಲಾಗುವುದು. ಪ್ರತಿ ಮಾದರಿಯು 80 ಕಿ.ಮೀಗಳವರೆಗೆ ಚಲಿಸಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಈ ಮೂರು ಬ್ಯಾಟರಿಗಳನ್ನು ಒಟ್ಟುಗೂಡಿಸಿದರೆ ಹೆಚ್ಚು ದೂರದವರೆಗೆ ಚಲಿಸಬಹುದು. ಈ ಸ್ಕೂಟರ್‌ನಲ್ಲಿ 50 ಲೀಟರ್ ಸ್ಟೋರೇಜ್ ಸ್ಪೇಸ್ ನೀಡಲಾಗುವುದು. ಈ ಸ್ಕೂಟರ್ ಕೇವಲ 3.9 ಸೆಕೆಂಡುಗಳಲ್ಲಿ ಗಂಟೆಗೆ 0 - 45 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಸ್ಕೂಟರ್‌ನಲ್ಲಿರುವ ಕಲರ್ ಡಿಸ್‌ಪ್ಲೇಯಲ್ಲಿ ನ್ಯಾವಿಗೇಷನ್, ಅಪ್ಲಿಕೇಶನ್‌ ಹಾಗೂ ಮ್ಯೂಸಿಕ್ ಕೇಳಬಹುದು.

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಈ ಎಲೆಕ್ಟ್ರಿಕ್ ಸ್ಕೂಟರ್ 50 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲ್ಲಾ ಮೂರು ಬ್ಯಾಟರಿ ಮಾದರಿಗಳೊಂದಿಗೆ, ಈ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 95 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಅತ್ಯುನ್ನತವಾದ ಎಲೆಕ್ಟ್ರಿಕ್ ಸ್ಕೂಟರ್ ಆಗುವ ಸಾಧ್ಯತೆಗಳಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಎಲೆಕ್ಟ್ರಿಕ್ ಸ್ಕೂಟರ್‌ ಮಾರುಕಟ್ಟೆಗೆ ಕಾಲಿಟ್ಟ ಓಲಾ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಲಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಓಲಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಕುತೂಹಲದಿಂದ ಕಾಯಲಾಗುತ್ತಿದೆ.

More from DriveSpark

Article Published On: Thursday, May 28, 2020, 18:38 [IST]
English summary
Ola Electric Scooter under consideration acquires Etergo BV. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+