ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯ ಮೂಲಕ ಮೊದಲ ಬಾರಿಗೆ ನ್ಯಾವಿಗೇಷನ್ ಸಹಾಯಕ್ಕಾಗಿ ಟ್ರಿಪ್ಪರ್ ಮೀಟರ್ ಪರಿಚಯಿಸಿದ್ದು, ಹೊಸ ತಾಂತ್ರಿಕ ಸೌಲಭ್ಯದ ಕಾರ್ಯನಿರ್ವಹಣೆ ಕುರಿತಾಗಿ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಟ್ರಿಪ್ಪರ್ ಮೀಟರ್ ಸೌಲಭ್ಯವು ಬೈಕ್ ರೈಡಿಂಗ್ ವೇಳೆ ಸಾಕಷ್ಟು ಸಹಕಾರಿಯಾಗಲಿದ್ದು, ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಮೂಲಕ ಟ್ರಿಪ್ರರ್ ಮೀಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಇದು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೇವೆ ಒದಗಿಸಲಿದ್ದು, ಬೈಕ್ ರೈಡಿಂಗ್ ಸುಲಭವಾಗಿಸುವುದಲ್ಲದೆ ಅನಗತ್ಯವಾಗಿ ಮೊಬೈಲ್ ಬಳಕೆಯನ್ನು ತಡೆಯಲು ಸಹಕಾರಿಯಾಗಿದೆ ಎನ್ನಬಹುದು.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಮೊದಲ ಬಾರಿಗೆ ಮಿಟಿಯೊರ್ 350 ಮಾದರಿಯಲ್ಲಿ ಹೊಸ ನ್ಯಾವಿಗೇಷನ್ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಹುತೇಕ ಬೈಕ್ ಮಾದರಿಗಳಲ್ಲಿ ಹೊಸ ಟ್ರಿಪ್ಪರ್ ಮೀಟರ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಿದೆ.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ಗೂಗಲ್ ನ್ಯಾವಿಗೇಷನ್ ಸೌಲಭ್ಯವು ಬಹುತೇಕ ವಾಹನಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ನಿರ್ದಿಷ್ಟ ಮಾರ್ಗವನ್ನು ತಲುಪಲು ಸರಿಯಾದ ಮಾರ್ಗಸೂಚಿಗಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸಾಕಷ್ಟು ಸಹಕಾರಿಯಾಗಿದೆ.

ಇನ್ನು ಮಿಟಿಯೊರ್ 350 ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ತಾಂತ್ರಿಕವಾಗಿ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿದೆ. ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಕರ್ಷಕ ಬೆಲೆ ಪಡೆದುಕೊಂಡಿದೆ.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಹೊಸ ಬೈಕ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ.2.18 ಲಕ್ಷ (ಫೈರ್‌ಬಾಲ್), ರೂ. 2.36 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.25 ಲಕ್ಷ ಬೆಲೆ ಹೊಂದಿದೆ.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಹೊಸ ಬೈಕಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ 6 ಕೆ.ಜಿ ಕಡಿಮೆ ತೂಕ ಹೊಂದಿರುವ ಹೊಸ ಮಿಟಿಯೊರ್ 350 ಬೈಕ್ ಮಾದರಿಯು 1,400-ಎಂಎಂ ವೀಲ್ಹ್‌ಬೆಸ್, 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ. ಹೊಸ ಮಿಟಿಯೊರ್ 350 ಬೈಕ್ ಮಾದರಿಯು ಹೊಸದಾಗಿ ಅಭಿವೃದ್ದಿಗೊಳಿಸಲಾದ ಜೆ-ಸೀರಿಸ್ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದ್ದು, ಹೊಸ ಎಂಜಿನ್‌ನಿಂದಾಗಿ ಬೈಕಿನ ವೈಬ್ರೆಷನ್ ಪ್ರಮಾಣವು ಸಾಕಷ್ಟು ಸುಧಾರಣೆಯಾಗಿದೆ.

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಎಂಜಿನ್ ಮತ್ತು ಪರ್ಫಾಮೆನ್ಸ್

ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಫಿಯರೊ 125 ಕಮ್ಯುಟರ್ ಬೈಕ್

ಟ್ರಿಪ್ಪರ್ ಮೀಟರ್ ಕಾರ್ಯನಿರ್ವಹಣೆ ಬಗೆಗೆ ವಿಡಿಯೋ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಮಿಟಿಯೊರ್ 350 ಆರಂಭಿಕ ಮಾದರಿಯಾದ ಫೈರ್‌ಬಾಲ್‌ನಲ್ಲಿ ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಟೋನ್ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಕಲರ್ ರಿಮ್ ಟೇಪ್ ಅಳವಡಿಸಲಾಗಿದ್ದು, ಎರಡನೇ ಮಾದರಿಯಾದ ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಪಡೆದುಕೊಂಡಿದ್ದು, ಇದರಲ್ಲಿ ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.

More from DriveSpark

Article Published On: Wednesday, November 11, 2020, 11:39 [IST]
English summary
Royal Enfield Explain How Tripper Navigation Works. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+