ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಬಿ‍ಎಸ್ 6 ಎಂಜಿನ್ ಹೊಂದಿರುವ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗಳು ಈಗಾಗಲೇ ದೇಶಾದ್ಯಂತವಿರುವ ಡೀಲರ್‍‍ಗಳನ್ನು ತಲುಪಿವೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಕ್ಲಾಸಿಕ್ 350 ಬೈಕ್‍‍ಗಳು ಅನೇಕ ಬಾರಿ ಕಣ್ಣಿಗೆ ಬಿದ್ದಿವೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಈಗ ಈ ಹೊಸ ಬೈಕಿನ ಬಿಡುಗಡೆಯ ಬಗ್ಗೆ ಹೊಸ ಮಾಹಿತಿಯೊಂದು ಬಹಿರಂಗವಾಗಿದೆ. ರಾಯಲ್ ಎನ್‍‍ಫೀಲ್ಡ್ ಡೀಲರ್‍‍ಗಳು ಹೊಸ ಕ್ಲಾಸಿಕ್ 350 ಬೈಕಿನ ಬುಕ್ಕಿಂಗ್‍‍ಗಳನ್ನು ಆರಂಭಿಸಿದ್ದಾರೆ. ರೂ.10,000 ಪಾವತಿಸಿ ಈ ಹೊಸ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಈ ಹಣವನ್ನು ರಿಫಂಡ್ ಮಾಡಲಾಗುವುದು.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಕ್ಲಾಸಿಕ್ 350 ಬೈಕ್ ಅನ್ನು ಜನವರಿ 7ರಂದು ಬಿಡುಗಡೆಗೊಳಿಸಲಾಗುವುದೆಂದು ವರದಿಗಳಾಗಿವೆ. ಆದರೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಆದರೆ ಡೀಲರ್‍‍ಗಳು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಬೈಕ್ ಬಿಡುಗಡೆಯಾದ ತಕ್ಷಣ ಬೈಕಿನ ವಿತರಣೆಯನ್ನು ಆರಂಭಿಸುವುದಾಗಿ ರಾಯಲ್ ಎನ್‍‍ಫೀಲ್ಡ್ ಡೀಲರ್‍‍ಗಳು ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಹೊಸ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಹಳೆಯ ಬಿ‍ಎಸ್ 4 ಎಂಜಿನ್ ಬದಲಿಗೆ ಬಿ‍ಎಸ್ 6ನ ಕಾರ್ಬೊರೇಟೆಡ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಅಳವಡಿಸಲಾಗಿದೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿ ಸ್ಪೋಕ್ ವ್ಹೀಲ್‍‍ಗಳನ್ನು ಅಳವಡಿಸಲಾಗಿತ್ತು. ಬಿಡುಗಡೆಯಾಗಲಿರುವ ಹೊಸ ಬೈಕಿನಲ್ಲಿ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗುವುದು. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಇದರ ಹೊರತಾಗಿ ಹೊಸ ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಆದರೆ ಹೊಸ ಬೈಕ್ ಹೊಸ ವಿನ್ಯಾಸವನ್ನು ಹೊಂದಿರುವ ಸಾಧ್ಯತೆಗಳಿವೆ. ಹೊಸ ವಿನ್ಯಾಸದಲ್ಲಿ ಹೊಸ ಎಲ್‍ಇ‍‍ಡಿ ಡಿ‍ಆರ್‍ಎಲ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್‍‍ಗಳಿರಲಿವೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಇತ್ತೀಚಿಗೆ ಹಂಟರ್ ಎಂಬ ಹೆಸರನ್ನು ರಿಜಿಸ್ಟರ್ ಮಾಡಿಸಿದೆ. ಇದರಿಂದಾಗಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಚಿಕ್ಕ ಹಾಗೂ ಕಡಿಮೆ ಬೆಲೆಯ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿರುವುದು ಕಂಡು ಬರುತ್ತದೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಹೊಸ ಕ್ಲಾಸಿಕ್ 350 ಬೈಕಿನಲ್ಲಿರುವ ಬಿ‍ಎಸ್ 6 ಎಂಜಿನ್ ಅನ್ನು ಥಂಡರ್ ಬರ್ಡ್ 350 ಹಾಗೂ ಬುಲೆಟ್ 350 ಬೈಕ್‍‍ಗಳಲ್ಲಿಯೂ ಅತಿ ಶೀಘ್ರದಲ್ಲೇ ಅಳವಡಿಸುವ ಸಾಧ್ಯತೆಗಳಿವೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು 2020ರ ಏಪ್ರಿಲ್ 1ಕ್ಕೆ ಮುಂಚೆ ಈ ಎಂಜಿನ್‍‍ಗಳನ್ನು ಅಳವಡಿಸಲಿದೆ.

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಬಿ‍ಎಸ್ 6 ಆರ್‍ಇ ಕ್ಲಾಸಿಕ್ 350

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಕ್ಲಾಸಿಕ್ 350 ಬೈಕಿನಲ್ಲಿ ಹೊಸ ಬಿ‍ಎಸ್ 6 ಎಂಜಿನ್ ಅನ್ನು ಅಳವಡಿಸಿ ಬಿಡುಗಡೆಗೊಳಿಸುತ್ತಿದೆ. ಕಂಪನಿಯು ಬಿ‍ಎಸ್ 6 ಎಂಜಿನ್ ಹೊಂದಿರುವ ಕ್ಲಾಸಿಕ್ 350 ಬೈಕಿನ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

Source: Zigwheels

More from DriveSpark

Article Published On: Friday, January 3, 2020, 17:44 [IST]
English summary
BS6 Classic 350 Launch Details & Booking Amount Revealed - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+