ಲಾಕ್‌ಡೌನ್ ತೆರವುಗೊಂಡ ನಂತರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳ ಮಾರಾಟದಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಕಳೆದ ಜೂನ್, ಜುಲೈ ಮತ್ತು ಅಗಸ್ಟ್ ಅವಧಿಯಲ್ಲಿ ಸತತ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೀಗ ಕಳೆದ ವರ್ಷದ ಅವಧಿಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬಂದಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತಲೂ ಶೇ. 32 ರಷ್ಟು ಹೆಚ್ಚು ಹೊಸ ಕ್ಲಾಸಿಕ್ 350 ಬೈಕ್‌ಗಳನ್ನು ಮಾರಾಟಗೊಳಿಸಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಸೆಪ್ಟೆಂಬರ್ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 38,827 ಯನಿಟ್ ಕ್ಲಾಸಿಕ್ 350 ಬೈಕ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 29,376 ಯುನಿಟ್ ಕ್ಲಾಸಿಕ್ 350 ಬೈಕ್ ಮಾರಾಟ ಮಾಡಿದ್ದ ಆರ್‌ಇ ಕಂಪನಿಯು ಶೇ.32 ರಷ್ಟು ಬೆಳವಣಿಗೆ ಸಾಧಿಸಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿರುವುದೇ ಹೊಸ ವಾಹನಗಳ ಮಾರಾಟದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಹೆಚ್ಚಳವಾಗಿದ್ದು, ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಇನ್ನಷ್ಟು ಹೊಸ ವಾಹನಗಳು ಮಾರಾಟಗೊಳ್ಳುವ ನೀರಿಕ್ಷೆಗಳಿವೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಕುಸಿದ್ದ ವಾಹನ ಮಾರಾಟವು ಕರೋನಾ ವೈರಸ್ ಪರಿಣಾಮದಿಂದಲೇ ಸ್ವಂತ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎನ್ನುವ ಬಗೆಗೆ ಈ ಹಿಂದೆಯೇ ಮಾರುಕಟ್ಟೆ ಅಧ್ಯಯನವನ್ನು ಸಹ ಪ್ರಕಟಿಸಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ಚಾಲನೆ ನೀಡಿದೆ. ಲಾಕ್‌ಡೌನ್ ಸಡಿಲಿಕೆ ನಂತರ ವಿವಿಧ ನಗರಗಳಲ್ಲಿ ರಾಯಲ್ ಎನ್‌ಫೀಲ್ಡ್ ಮಾರಾಟ ಮಳಿಗೆ ಆರಂಭಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಸೂಚನೆ ನೀಡಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಇನ್ನು ಗ್ರಾಹಕರ ಬೇಡಿಕೆ ಹಲವು ಹೊಸ ಬೈಕ್ ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಹೊಸ ಮೆಟಿಯೊರ್ 350 ಬೈಕ್ ಮಾದರಿಯನ್ನು ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಕ್ರೂಸರ್ ಬೈಕ್ ಮಾದರಿಯಾಗಿದ್ದ ಥಂಡರ್‌ಬರ್ಡ್ ಎಕ್ಸ್ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಥಂಡರ್‌ಬರ್ಡ್ ಸ್ಥಾನ ತುಂಬಲು ಮೆಟಿಯೊರ್ 350 ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಟೀಸರ್ ಚಿತ್ರದ ಮೂಲಕ ಹೊಸ ಬೈಕ್ ಮಾದರಿಯನ್ನು ಮುಂದಿನ ತಿಂಗಳು ನವೆಂಬರ್ 6ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಹೊಸ ಬೈಕ್ ಮಾದರಿಯನ್ನು ಇದೇ ತಿಂಗಳು ಜೂನ್ ಅಥವಾ ಜುಲೈ ವೇಳೆ ಬಿಡುಗಡೆಯ ಯೋಜನೆಯಲ್ಲಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಗೆ ಕರೋನಾ ವೈರಸ್ ಪರಿಣಾಮ ಹಿನ್ನಡೆ ಉಂಟಾಗಿದ್ದು, ಬೈಕ್ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ಕಂಪನಿಯು ಇದೀಗ ಅಂತಿಮವಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಭಾರೀ ಹೆಚ್ಚಳ

ಲಾಕ್‌ಡೌನ್ ಸಡಿಲಿಕೆ ನಂತರ ಹೊಸ ಬೈಕ್ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಇದೀಗ ಉತ್ಪಾದನಾ ಆವೃತ್ತಿಯ ಟೀಸರ್ ಚಿತ್ರವನ್ನು ಹಂಚಿಕೊಂಡಿದ್ದು, ಸ್ಥಗಿತಗೊಂಡಿರುವ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಹೊಸ ಬೈಕ್ ಹಲವು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

More from DriveSpark

Article Published On: Saturday, October 24, 2020, 8:45 [IST]
English summary
Royal Enfield Classic 350 Sales Up By 32 Percentage In September 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+