ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಯಾದ ಆರ್‍ಇ ಕ್ಲಾಸಿಕ್ 350
ಬಿಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮವು ಜಾರಿಗೆ ಬಂದ ನಂತರ ಬಿಎಸ್ 4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ. ಈ ಕಾರಣಕ್ಕೆ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿಎಸ್ 6 ಎಂಜಿನ್‍ಗಳಿಗೆ ಅಪ್‍ಡೇಟ್‍ಗೊಳಿಸುತ್ತಿವೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಜನಪ್ರಿಯ ಬೈಕ್ ಆದ ಕ್ಲಾಸಿಕ್ 350 ಬೈಕ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಿದೆ. ಬಿಎಸ್ 4 ಎಂಜಿನ್ ಹೊಂದಿದ್ದ ಕ್ಲಾಸಿಕ್ 350 ಬೈಕಿನ ಬೆಲೆಗಿಂತ ಬಿಎಸ್ 6 ಎಂಜಿನ್ ಹೊಂದಿರುವ ಕ್ಲಾಸಿಕ್ 350 ಬೈಕಿನ ಬೆಲೆಯು ರೂ.11,000 ಹೆಚ್ಚಾಗಲಿದೆ. ಇದರಿಂದಾಗಿ ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.65 ಲಕ್ಷಗಳಾಗಲಿದೆ.

ಕ್ಲಾಸಿಕ್ 350 ಬೈಕಿನಲ್ಲಿ ಬಿಎಸ್ 6 ಎಂಜಿನ್‍ನೊಂದಿಗೆ ಹಲವಾರು ಅಪ್‍ಡೇಟ್‍ಗಳನ್ನು ಮಾಡಲಾಗಿದೆ. ಇವುಗಳಲ್ಲಿ ಹೊಸ ಫೀಚರ್‍ಗಳು, ಎಕ್ವಿಪ್‍ಮೆಂಟ್‍ಗಳು, ಹೊಸ ಬಣ್ಣಗಳು ಸೇರಿವೆ. ಹೊಸ ಬೈಕಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರಮುಖ ಬದಲಾವಣೆಯೆಂದರೆ ಹೊಸ ಬೈಕಿನಲ್ಲಿ 346 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಎಷ್ಟು ಪ್ರಮಾಣದ ಪವರ್ ಉತ್ಪಾದಿಸುತ್ತದೆ ಎಂಬುದನ್ನು ರಾಯಲ್ ಎನ್‍ಫೀಲ್ಡ್ ಕಂಪನಿಯು ಬಹಿರಂಗಪಡಿಸಿಲ್ಲ.

ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಬೈಕಿನಲ್ಲಿರುವ ಬಿಎಸ್ 4 ಎಂಜಿನ್ 19.8 ಬಿಹೆಚ್‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಹಳೆಯ ಬೈಕಿನಲ್ಲಿ ಕಾರ್ಬುರೇಟರ್‍ಗಳನ್ನು ಅಳವಡಿಸಲಾಗಿದ್ದರೆ, ಹೊಸ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ. ಇದರಿಂದಾಗಿ ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಲು ಸಹಾಯವಾಗಲಿದೆ. ಎಂಜಿನ್‍ನ ಹೊರತಾಗಿ ಹೊಸ ಬೈಕ್ ಅಲಾಯ್ ವ್ಹೀಲ್, ಸ್ಟೀಲ್ತ್ ಬ್ಲಾಕ್ ಹಾಗೂ ಕ್ರೋಮ್ ಬ್ಲಾಕ್ ಎಂಬ ಎರಡು ಹೊಸ ಬಣ್ಣಗಳನ್ನು ಹೊಂದಿರಲಿದೆ.

ಈ ಹೊಸ ಬಣ್ಣಗಳ ಜೊತೆಗೆ ಬಿಎಸ್ 6 ಕ್ಲಾಸಿಕ್ 350 ಬೈಕ್ ಅನ್ನು ಸಿಗ್ನಲ್ಸ್ ಏರ್ ಬೋರ್ನ್ ಬ್ಲೂ, ಸಿಗ್ನಲ್ಸ್ ಸ್ಟಾರ್ಮ್ ರೈಡರ್ ಸ್ಯಾಂಡ್, ಗನ್ ಮೆಟಲ್ ಗ್ರೇ ಹಾಗೂ ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಕ್ಲಾಸಿಕ್ 350 ಬೈಕಿನ ಬುಕ್ಕಿಂಗ್‍ಗಳನ್ನು ಆರಂಭಿಸಲಾಗಿದೆ.

ಈ ಬೈಕ್ ಅನ್ನು ಖರೀದಿಸ ಬಯಸುವ ಗ್ರಾಹಕರು ದೇಶಾದ್ಯಂತವಿರುವ ಡೀಲರ್‍ಗಳ ಬಳಿ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಬಹುದು. ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಜನಪ್ರಿಯ ಬೈಕ್‍ಗಳಾದ ಕ್ಲಾಸಿಕ್, ಬುಲೆಟ್ ಹಾಗೂ ಥಂಡರ್‍ಬರ್ಡ್‍ಗಳನ್ನು ಹೊಸ ತಲೆಮಾರಿನ ಬೈಕ್‍ಗಳಾಗಿ ಅಪ್‍ಡೇಟ್‍ಗೊಳಿಸಲು ಮುಂದಾಗಿದೆ.

ಅಪ್‍ಡೇಟ್ ಮಾಡಲಾದ ಬೈಕ್‍ಗಳನ್ನು 2020ರ ಜೂನ್ ನಂತರ ಬಿಡುಗಡೆಗೊಳಿಸಲಾಗುವುದು. ರಾಯಲ್ ಎನ್‍ಫೀಲ್ಡ್ ಕಂಪನಿಯು ಯುವ ಜನತೆಗಾಗಿ ಹಾಗೂ ಮಹಿಳೆಯರಿಗಾಗಿ ಕಡಿಮೆ ತೂಕದ ಬೈಕ್‍ಗಳನ್ನು ಬಿಡುಗಡೆಗೊಳಿಸಲಿದೆ. ಈ ಬೈಕ್‍ಗಳನ್ನು ಎಕ್ಸ್ ಪ್ಲೋರರ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕ್ಲಾಸಿಕ್ 350 ಬೈಕ್ ರಾಯಲ್ ಎನ್‍ಫೀಲ್ಡ್ ಕಂಪನಿಯ ಜನಪ್ರಿಯ ಬೈಕ್ ಆಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಹಾಗೂ ಬೆನೆಲ್ಲಿ ಇಂಪಿರಿಯಲ್ 400 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications