ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಜನಪ್ರಿಯ ಬಿಎಸ್-6 ಹಿಮಾಲಯನ್ ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹೊಸ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನ ಎಲ್ಲಾ ರೂಪಾಂತರಗಳಿ ಅನುಗುಣವಾಗಿ ರೂ.2,700 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಬಿಎಸ್-6 ಹಿಮಾಲಯನ್ ಬೈಕಿನಲ್ಲಿ ಹೊಸ 3 ಬಣ್ಣಗಳನ್ನು ಸೇರಿಸಲಾಗಿದೆ. ಹೊಸ 3 ಬಣ್ಣಗಳನ್ನು ಸೇರಿಸಿ ಒಟ್ಟು 6 ಬಣ್ಣಗಳಲ್ಲಿ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಲಭ್ಯವಿರಲಿದೆ. ಈ ಬೈಕ್ ಸ್ಪೋಕ್ ವ್ಹೀಲ್, ಎಂಆರ್‍ಎಫ್ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಹೊಸ ಬೈಕ್ ಸ್ಪೋಕ್ ವ್ಹೀಲ್, ಎಂಆರ್‍ಎಫ್ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್, ರೇರ್ ಲಗೇಜ್ ರ್‍ಯಾಕ್‍‍ನ ಮೇಲಿರುವ ರಾಕ್ ರೆಡ್ ಅಸೆಂಟ್‍‍‍ನೊಂದಿಗಿರುವ ಕಪ್ಪು ಬಣ್ಣವನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಇದರ ಜೊತೆಗೆ ಬ್ಲೂ ಹಾಗೂ ವೈಟ್ ಬಣ್ಣವನ್ನು ಹೊಂದಿರುವ ಮಾದರಿಗಳಿವೆ. ಬಾಡಿ ಪ್ಯಾನೆಲ್‍‍ಗಳು ಗ್ರಾವೆಲ್ ಗ್ರೇ ಬ್ಲಾಕ್ ಬಣ್ಣವನ್ನು ಹೊಂದಿವೆ. ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈ‍‍‍ಟ್‍ಗಳನ್ನು ಹೊಂದಿವೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಈ ಫೀಚರ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಆಫ್ ರೋಡ್ ಪ್ರಿಯರನ್ನು ಸೆಳೆಯುತ್ತದೆ. ಈ ಸ್ವಿಚ್‍‍ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಬೆಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಬಹುದು.

MOST READ: ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಇದರೊಂದಿಗೆ ಸವಾರ ಸುಲಭವಾಗಿ ಎಬಿಎಸ್ ಅನ್ನು ಆಫ್ ಮಾಡಬಹುದು ಮತ್ತು ಸಂಕಷ್ಠದ ಸನ್ನಿವೇಷದಲ್ಲಿ ಬೈಕ್ ನಿಲ್ಲಿಸಲು ಹಿಂದಿನ ಟಯರ್‍‍ಗಳನ್ನು ಲಾಕ್ ಮಾಡಬಹುದು. ಹಜಾರ್ಡ್ ಲೈಟ್‍ಗಳು ಕಠಿಣವಾದ ಹವಮಾನ ಪರಿಸ್ಥಿತಿಯಲ್ಲೂ ಸವಾರಿ ಮಾಡಲು ಹೆಚ್ಚು ಸಹಕಾರಿಯಾಗಿವೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬಿಎಸ್-6 ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.3 ಬಿ‍‍ಹೆಚ್‍‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್‍‍ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್‌ಗಳನ್ನು ಹೊಂದಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍‍ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್‍‍ಗಳಿವೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿ‍ಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಆಫ್ ರೋಡ್ ಬೈಕ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Most Read Articles

Kannada
English summary
Getting Dirty With The Himalayan Just Got Dearer. Read in Kannada.
Story first published: Friday, May 15, 2020, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X