ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನ ದರ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಬಿಎಸ್-6 ಹಿಮಾಲಯನ್ ಬೈಕ್ ಈಗಾಗಲೇ ಡೀಲರ್‍ಗಳ ಬಳಿ ತಲುಪಿದೆ. ಹೊಸ ಬಿಎಸ್-6 ಹಿಮಾಲಯನ್ ಬೈಕ್ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಬಿಎಸ್-6 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್‍ಗೆ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಇದರೊಂದಿಗೆ ಹೊಸ ಬಿಎಸ್-6 ಹಿಮಾಲಯನ್ ಬೈಕಿನ ಬೆಲೆಯು ಬಹಿರಂಗವಾಗಿದೆ. ಈ ಹೊಸ ಬೈಕಿನ ಆಯ್ದ ಬಣ್ಣಗಳ ಮೇಲೆ ಬೆಲೆ ನಿರ್ಧರಿಸಿದೆ. ಬಿಎಸ್-6 ಹಿಮಾಲಯನ್ ಸ್ನೋ ವೈಟ್ ಮತ್ತು ಗ್ರ್ಯಾನೈಟ್ ಬ್ಲಾಕ್ ಬಣ್ಣದ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದ್ದು, ಆನ್‍ರೋಡ್ ಬೆಲೆಯು ರೂ2.23 ಲಕ್ಷಗಳಾಗಿದೆ.

ಹಿಮಾಲಯನ್ ಸ್ಲೀಟ್ ಗ್ರೇ ಬಣ್ಣದ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.89 ಲಕ್ಷಗಳಾದರೆ, ಆನ್‍ರೋಡ್ ಬೆಲೆಯು ರೂ.2.26 ಲಕ್ಷಗಳಾಗಿದೆ. ಇನ್ನೂ ಹಿಮಾಲಯನ್ ಡ್ಯುಯಲ್ ಟೋನ್‍ಬಣ್ಣಗಳಾದ ರಾಕ್ ರೆಡ್ ಮತ್ತು ಗ್ರೇವೆಲ್ ಗ್ರೇ ಬಣ್ಣದ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.91 ಲಕ್ಷಗಳಾದರೆ, ಅನ್‍ರೋಡ್ ರೂ.2.28 ಲಕ್ಷಗಳಾಗಿದೆ. ಈ ಆನ್‍ರೋಡ್ ಬೆಲೆಗಳು ಚೆನ್ನೈ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಬೈಕ್ ಸ್ಪೋಕ್ ವ್ಹೀಲ್, ಎಂಆರ್‍ಎಫ್ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್, ರೇರ್ ಲಗೇಜ್ ರ್‍ಯಾಕ್‍ನ ಮೇಲಿರುವ ರಾಕಿ ರೆಡ್ ಅಸೆಂಟ್‍ನೊಂದಿಗಿರುವ ಕಪ್ಪು ಬಣ್ಣವನ್ನು ಹೊಂದಿದೆ.

ಕೆಲವು ಭಾಗಗಳಿಗೆ ಕ್ರೋಮ್ ಬಣ್ಣವನ್ನು ಸಹ ನೀಡಲಾಗಿದೆ. ಇದರ ಜೊತೆಗೆ ಬ್ಲೂ ಹಾಗೂ ವೈಟ್ ಬಣ್ಣವನ್ನು ಹೊಂದಿರುವ ಮಾದರಿಗಳಿವೆ. ಬಾಡಿ ಪ್ಯಾನೆಲ್‍ಗಳು ಗ್ರಾವೆಲ್ ಗ್ರೇ ಬ್ಲಾಕ್ ಬಣ್ಣವನ್ನು ಹೊಂದಿವೆ.

ಹಿಮಾಲಯನ್ ಬಿಎಸ್-6 ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 24.5 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗುವುದು.

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಂಗಳಿವೆ. ಇವುಗಳೊಂದಿಗೆ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ಗಳಿವೆ.

ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್‍ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್‌ಗಳನ್ನು ಹೊಂದಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್‍ಗಳಿವೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ ಹಿಮಾಲಯನ್ ಬೈಕ್ ತನ್ನ ಸೆಗ್‍ಮೆಂಟಿನಲ್ಲಿ ಉತ್ತಮವಾದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-4 ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.81 ಲಕ್ಷಗಳಾಗಿದೆ.

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್‍ನಲ್ಲಿ ಹೊಸ ಫೀಚರ್ಸ್‍ಗಳನ್ನು ಹೊಂದಿರುವುದರಿಂದ ಅಳವಡಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications