ಜೇಮ್ಸ್ ಬಾಂಡ್ ಶೈಲಿಯಲ್ಲಿ ಮಿಂಚಿದ ಮಾಡಿಫೈ ರಾಯಲ್ ಎನ್‍ಫೀಲ್ಡ್ ಬೈಕ್
ಭಾರತದಲ್ಲಿ ಅತಿ ಹೆಚ್ಚು ಮಾಡಿಫೈ ಮಾಡಲಾಗುವ ಬೈಕ್ ರಾಯಲ್ ಎನ್‍ಫೀಲ್ಡ್ ಆಗಿದೆ. ಇಂದಿಗೂ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿವೆ ರಾಯಲ್ ಎನ್‍ಫೀಲ್ಡ್ ಬೈಕ್‍ಗಳು. ರಾಯಲ್ ಎನ್‍ಫೀಲ್ಡ್ ಯುವಕರ ಕನಸಿನ ಬೈಕ್. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ರಾಯಲ್ ಎನ್‍ಫೀಲ್ಡ್ ಬೈಕ್ ಮೇಲೆ ಕುಳಿತು ರೈಡ್ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್, ಅದೇ ಟ್ರೆಂಡ್ ಉಳಿಸಿಕೊಂಡು ಬಂದಿರುವುದು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹೆಗ್ಗಳಿಕೆ. ಕಾಲೇಜು ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಅಭಿಮಾನಿಗಳು. ಇಷ್ಟು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಜೇಮ್ಸ್ ಬಾಂಡ್ ಸ್ಟೈಲ್‍ನಲ್ಲಿ ಮಾಡಿಫೈ ಮಾಡಲಾಗಿದೆ.

ಬೆಂಗಳೂರು ಮೂಲದ ಬುಲೆಟರ್ ಕಸ್ಟಮ್ಸ್ ಅವರು ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಎಕ್ಸ್ ಬೈಕ್ ಅನ್ನು ಮಾಡಿಫೈ ಮಾಡಿದ್ದಾರೆ. ಇವರು ರಾಯಲ್ ಎನ್‍ಫೀಲ್ಡ್ ಥಂಡರ್ ಬರ್ಡ್ ಎಕ್ಸ್ ಬೈಕ್ ಅನ್ನು ಬೆರಗುಗೊಳಿಸುವ ರೀತಿಯಲ್ಲಿ ಆಕರ್ಷಕವಾಗಿ ಮಾಡಿಫೈ ಮಾಡಿದ್ದಾರೆ.

ಥಂಡರ್‍ಬರ್ಡ್ ಎಕ್ಸ್ ಬೈಕ್ ಅನ್ನು ಬುಲೆಟರ್ ಕಸ್ಟಮ್ಸ್ ಅವರು ಜೇಮ್ಸ್ ಬಾಂಡ್ ಪ್ಲಿಕ್ ಶೈಲಿಯಲ್ಲಿ ಮಾಡಿಫೈ ಮಾಡಿದ್ದಾರೆ. ಆಕರ್ಷಕವಾಗಿ ಮಾಡಿಫೈ ಮಾಡಿರುವುದಕ್ಕೆ ಹಲವು ಬೈಕ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಡಿಫೈ ಮಾಡಲಾದ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಎಕ್ಸ್ ಬೈಕಿನ ಮುಂಭಾಗದಲ್ಲಿ ಹೊಸ ಪ್ಯಾನೆಲ್‍ನೊಂದಿಗೆ ಟ್ವಿನ್ ಹೆಡ್‍ಲೈಟ್‍ಗಳನ್ನು ಅಳವಡಿಸಲಾಗಿದೆ. ಇನ್ನೂ ಮುಂಭಾಗದ 120 ಎಂಎಂ ಫ್ರಂಟ್ ಟಯರ್‍ನ ಸುತ್ತಲೂ ಸ್ಪೋಕ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಈ ಬೈಕಿನಲ್ಲಿ ಯುಎಸ್‍ಡಿ ಫ್ರಂಟ್ ಸಸ್ಪೆಂಷನ್ ಸೆಟಪ್ ಅನ್ನು ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ಈ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಎಕ್ಸ್ ಬೈಕಿಗೆ ಫ್ಯೂಯಲ್ ಟ್ಯಾಂಕ್‍ಗಾಗಿ ಹೊಸ ಬಣ್ಣವನ್ನು ಅಳವಡಿಸಲಾಗಿದೆ. ಇನ್ನೂ ಟ್ವಿನ್ ಸ್ಟ್ರೀಪ್ಸ್ ಡೆಕಲ್‍ಗಳ ಮೇಲೆ ರಬ್ಬರ್ ಪ್ಯಾಡಿಂಗ್ ಅನ್ನು ಹೊಂದಿದೆ.

ಬೈಕಿನ ಸೈಡ್ ಪ್ಯಾನಲ್‍ನಲ್ಲಿ ಬಿಆರ್‍ಎಟಿ ಬ್ರ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿರುವ ಬೆಂಚ್ ಮಾದರಿಯ ಸೀಟ್ ಸ್ಕ್ರ್ಯಾಂಬ್ಲರ್ ಬ್ಲ್ಯಾಕ್ ಫಿನಿಶಿಂಗ್‍ನಲ್ಲಿ ಅಪ್‍ಸ್ವೆಪ್ಟ್ ಯುನಿಟ್ ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ.

ಟೇಲ್ ಎಂಡ್‍ನಲ್ಲಿ 140 ರೇರ್ ಟಯರ್ ಜೊತೆಗೆ ಟಯರ್ ಹಗ್ಗರ್ ಅನ್ನು ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಎಕ್ಸ್ ಬೈಕಿನಲ್ಲಿ ಲೆದರ್ ಸೀಟ್ ಕವರ್, ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟೇಶನ್ ಮತ್ತು ಗ್ಲಾಸ್‍ವುಲ್ ಎಕ್ಸಾಸ್ಟ್ ವಾರ್ಪಿಂಗ್‍ಗಳಿವೆ.

ಈ ಮಾಡಿಫೈ ಮಾಡಲಾದ ಥಂಡರ್‍ಬರ್ಡ್ ಎಕ್ಸ್ ಬೈಕಿನಲ್ಲಿ 499 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5250 ಆರ್‍ಪಿಎಂನಲ್ಲಿ 27.2 ಬಿಹೆಚ್‍ಪಿ ಪವರ್ ಮತ್ತು 4000 ಆರ್‍ಪಿಎಂನಲ್ಲಿ 41.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಏರ್ ಕೂಲ್ಡ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಒಳಗೊಂಡಿದೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.64 ಲಕ್ಷಗಳಾಗಿದೆ. ಹೊಸ ಬಿಎಸ್-6 ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಬೆಲೆಯು ತುಸು ಹೆಚ್ಚಾಗಿರಲಿದೆ. ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಹೀಂದ್ರಾ ಮೊಜೊ 300 ಎಬಿಎಸ್, ಬಜಾಜ್ ಡೊಮಿನಾರ್ 400 ಮತ್ತು ಇಂಪೀರಿಯಲ್ 400 ಬೈಕುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








