ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೋಮ್ ಆಕ್ಸೆಸ್ ಬೈಕ್ ಸರ್ವಿಂಗ್ ಸೇವೆಯನ್ನು ಆರಂಭಿಸಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಕ್‌ಗಳ ಮೂಲಕ ಗ್ರಾಹಕರಿಗೆ ಈ ಸೇವೆಯನ್ನು ನೀಡಲಾಗುತ್ತದೆ.

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಲಾಕ್‌ಡೌನ್‌ನಿಂದ ಹಲವಾರು ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ಸೇವೆಯನ್ನು ನೀಡುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಚೆನ್ನೈನಲ್ಲಿ ಈ ಸೇವೆಯನ್ನು ಆರಂಭಿಸಿದೆ. ಈ ಸೇವೆಯಡಿಯಲ್ಲಿ ಕಂಪನಿಯ ಗ್ರಾಹಕ ಸೇವಾ ಪ್ರತಿನಿಧಿ ಗ್ರಾಹಕರ ಮನೆಗೆ ಭೇಟಿ ನೀಡಿ ಬೈಕ್ ಗಳನ್ನು ಸರಿಪಡಿಸುತ್ತಾನೆ. ಇದಕ್ಕಾಗಿ ರಾಯಲ್ ಎನ್‌ಫೀಲ್ಡ್‌ ಕಂಪನಿಯ ವಿಶೇಷ ಬೈಕ್‌ ಗಳನ್ನು ಬಳಸಲಾಗುತ್ತದೆ. ಈ ಸೇವೆಗಾಗಿ ಅಗತ್ಯವಿರುವ ಎಲ್ಲ ಸಾಧನಗಳನ್ನು ಈ ಬೈಕ್‌ನಲ್ಲಿ ಇಡಬಹುದಾಗಿದೆ.

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಈ ಸೇವೆಯ ಮೂಲಕ 90%ನಷ್ಟು ಸರ್ವೀಸ್ ಹಾಗೂ ರಿಪೇರಿ ಕಾರ್ಯಗಳನ್ನು ಮಾಡಬಹುದು. ಈ ಸೇವೆಯಿಂದಾಗಿ ಕಂಪನಿಯ ರೋಡ್ ಸೈಡ್ ಅಸಿಸ್ಟೆನ್ಸ್ ವಾಹನಗಳ ಸಂಖ್ಯೆ ಹೆಚ್ಚಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ದೇಶಾದ್ಯಂತ ವಾಹನಗಳ ಸರ್ವೀಸ್ ಮಾಡಿಸಲು ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಬೇಕಾಗಿದೆ. ಆದರೆ ಸೀಮಿತ ಸಂಖ್ಯೆಯಲ್ಲಿ ಅಪಾಯಿಂಟ್ ಮೆಂಟ್ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ತಮ್ಮ ವಾಹನಗಳನ್ನು ಸರ್ವೀಸ್ ಮಾಡಿಸಲು ಸಾಧ್ಯವಾಗುತ್ತಿಲ್ಲ.

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಈ ಸೇವೆಯಿಂದಾಗಿ ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಸೇವೆ ನೀಡುವ ಸಿಬ್ಬಂದಿಯ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುತ್ತಿದೆ. ಕೆಲಸ ಮಾಡುವಾಗ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಸ್ಲಾಟ್‌ಗಳ ಕೊರತೆಯ ಕಾರಣಕ್ಕೆ ಸೀಮಿತ ಸಂಖ್ಯೆಯ ಅಪಾಯಿಂಟ್ ಮೆಂಟ್ ಗಳನ್ನು ನೀಡಲಾಗುತ್ತಿದೆ. ಲಾಕ್‌ಡೌನ್ ಕಾರಣದಿಂದಾಗಿ ಅನೇಕ ಡೀಲರ್ ಗಳು ಸೀಮಿತ ಸಂಖ್ಯೆಯಲ್ಲಿ ಬೈಕ್ ಸರ್ವೀಸ್ ಸೇವೆಯನ್ನು ನೀಡುತ್ತಿದ್ದಾರೆ.

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಈ ಕಾರಣಕ್ಕೆ ಸರ್ವೀಸ್ ಆನ್ ವ್ಹೀಲ್ ಸೇವೆಯನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ತಯಾರಿಸಿದ ಈ ಬೈಕ್‌ಗಳು ಜುಲೈನಿಂದ ಚೆನ್ನೈನಲ್ಲಿರುವ ಎಲ್ಲಾ ಡೀಲರ್ ಗಳಲ್ಲಿ ಲಭ್ಯವಿರುತ್ತವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಗ್ರಾಹಕರು ತಮ್ಮ ಬೈಕ್‌ಗಳೊಂದಿಗೆ ಡೀಲರ್ ಗಳ ಬಳಿಗೆ ಹೋಗುವ ಅವಶ್ಯಕತೆಯಿಲ್ಲ. ರಾಯಲ್ ಎನ್‌ಫೀಲ್ಡ್ ಕಂಪನಿಯ ಟೆಕ್ನಿಷಿಯನ್ ಗಳು ಗ್ರಾಹಕರ ಮನೆ ಬಾಗಿಲಲ್ಲೇ ಸೇವೆ ನೀಡಲಿದ್ದಾರೆ. ಈ ಸೇವೆಯನ್ನು ಪಡೆಯುವ ಗ್ರಾಹಕರು ಇ-ಪಾವತಿ/ಆನ್ ಲೈನ್ ಪಾವತಿ ಕೂಡ ಮಾಡಬಹುದಾಗಿದೆ.

ಸರ್ವೀಸ್ ಆನ್ ವ್ಹೀಲ್ ಆರಂಭಿಸಿದ ರಾಯಲ್ ಎನ್‌ಫೀಲ್ಡ್

ಈ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಗ್ರಾಹಕರ ನೆರವಿಗೆ ನಿಂತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಕ್ಸ್ ಟೆಂಡೆಡ್ ವಾರಂಟಿ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಎಲ್ಲಾ ಬಿಎಸ್ 4 ಹಾಗೂ ಬಿಎಸ್ 6 ಬೈಕುಗಳ ಗ್ರಾಹಕರು ಈ ಯೋಜನೆಯ ಲಾಭ ಪಡೆಯಬಹುದು. ಕಂಪನಿಯು ಈ ಯೋಜನೆಗೆ ರಾಯಲ್ ಎನ್‌ಫೀಲ್ಡ್ ಸೆಕ್ಯೂರ್ ಎಂಬ ಹೆಸರನ್ನಿಟ್ಟಿದೆ.

ಮೂಲ: ರಶ್ ಲೇನ್

Article Published On: Saturday, July 18, 2020, 16:14 [IST]
English summary
Royal Enfield to give service at door step through service on wheel. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+