ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಸುಜುಕಿ ಮೋಟಾರ್‍‍ಸೈಕಲ್ಸ್ ಕಂಪನಿಯು 2020ರ ಆಟೋ ಎಕ್ಸ್‌ಪೋದಲ್ಲಿ ಹೊಸ ಕಟಾನಾ ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಬೈಕ್ ಜಪಾನ್ ತಯಾರಕ ಕಂಪನಿಯ ಜನಪ್ರಿಯ ಸ್ಪೋರ್ಟ್‍‍ಬೈ‍‍ಕ್‍ಗಳಲ್ಲಿ ಒಂದಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಕಟಾನಾ ಬೈಕಿಗೆ ತನ್ನದೆ ಆದ ದೊಡ್ಡ ಇತಿಹಾಸವಿದೆ. ಈ ಬೈಕ್ ಅನ್ನು 1981ರಲ್ಲಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಆಗ ಈ ಬೈಕ್ ವಿಶ್ವದ ಅತಿ ವೇಗದ ಉತ್ಪಾದನಾ ಬೈಕ್ ಆಗಿತ್ತು. ಹಲವು ವರ್ಷಗಳ ನಂತರ, ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಈ ಬೈಕ್ ಅನ್ನು ಮರುವಿನ್ಯಾಸಗೊಳಿಸಿ, ಹೊಸ ಕಟಾನಾ ಬೈಕ್ ಬಿಡುಗಡೆಗೊಳಿಸಿತು.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಕಟಾನಾ ಬೈಕಿನಲ್ಲಿ ಜಿಎಸ್ಎಕ್ಸ್-ಎಸ್ 1000 ಬೈಕಿನಲ್ಲಿರುವಂತಹ ಸುಜುಕಿಯ ಕೆ5 ಎಂಜಿನ್ ಅಳವಡಿಸಲಾಗಿದೆ. 999 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್‍‍ನ ಈ ಎಂಜಿನ್, 150 ಬಿ‍‍ಹೆಚ್‍‍ಪಿ ಪವರ್ ಮತ್ತು 108 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ಮಿಷನ್ ಜೊತೆಗೆ ಸ್ಲಿಪ್ಪರ್ ಕ್ಲಚ್ ಅನ್ನು ಜೋಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಈ ಬೈಕ್ ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಹಾಗೂ ಎಬಿಎಸ್ ಅನ್ನು ಹೊಂದಿದೆ. ಬೈಕ್ ಬಗೆಗಿನ ಮಾಹಿತಿಯನ್ನು ಟಿಎಫ್‌ಟಿ ಕಲರ್ ಸ್ಕ್ರೀನ್‍‍ನಲ್ಲಿ ಪಡೆಯಬಹುದು. ಈ ಬೈಕಿನಲ್ಲಿ ಸ್ವಿಂಗಾರ್ಮ್ ಜಿಎಸ್ಎಕ್ಸ್-ಆರ್ ನ ಅಪ್‍‍ಸೈಡ್ ಡೌನ್ ಫೋರ್ಕ್, ರೇಡಿಯಲ್ ಆಗಿ ಮೌಂಟ್ ಮಾಡಲಾದ ಫ್ರಂಟ್ ಕ್ಯಾಲಿಪರ್‍‍ಗಳಿವೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಹೊಸ ಕಟನಾ ಬೈಕಿನ ವಿನ್ಯಾಸವನ್ನು ಒರಿಜಿನಲ್ ಬೈಕಿನಿಂದ ಪಡೆಯಲಾಗಿದೆ. ಇದರಿಂದಾಗಿ ಹೊಸ ಕಟನಾ ಬೈಕ್ ಜಿಎಸ್ಎಕ್ಸ್-ಎಸ್ 1000 ಬೈಕಿಗಿಂತ 6 ಕೆ.ಜಿ ಹೆಚ್ಚು ತೂಕವನ್ನು ಹೊಂದಲಿದೆ. ಈಗ ಬೈಕಿನ ತೂಕವು 215 ಕೆ.ಜಿ.ಗಳಾಗಿದೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಸುಜುಕಿ ಕಟಾನಾ ಬೈಕ್ ನಿರ್ಮಾಣದ ಹಂತದಲ್ಲಿದ್ದು, ಈ ವರ್ಷದ ಜೂನ್ ತಿಂಗಳ ನಂತರ ಬಿಡುಗಡೆಗೊಳಿಸಲಾಗುವುದು. ಈ ಬೈಕಿನ ಬೆಲೆ 12 ಲಕ್ಷದಿಂದ 14 ಲಕ್ಷ ರೂಪಾಯಿಗಳಾಗುವ ಸಾಧ್ಯತೆಗಳಿವೆ. ಬೈಕ್ ಬಿಡುಗಡೆಯಾದ ನಂತರ ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸೃಷ್ಟಿಸಿ ಕೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಈ ಬೈಕಿನ ಮುಂಭಾಗ ಆಕರ್ಷಕ ಎಲ್‍ಇಡಿ ಹೆಡ್‍‍ಲೈಟ್ ಅನ್ನು ಹೊಂದಿದೆ. ಈ ಬೈಕ್ ಫ್ಯೂಯಲ್ ಟ್ಯಾಂಕ್ ಕೇವಲ 12 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಜಪಾನಿನ ತಯಾರಕರು ಈ ವರ್ಷ ಬೈಕನ್ನು ಸಿಕೆಡಿಯಾಗಿ ಭಾರತಕ್ಕೆ ಬರಬಹುದೆಂದು ಸುಳಿವು ನೀಡಿದ್ದಾರೆ.

ಆಟೋ ಎಕ್ಸ್‌ಪೋ 2020: ಹೊಸ ಸುಜುಕಿ ಕಟಾನಾ ಬೈಕ್ ಅನಾವರಣ

ಈ ಬೈಕ್ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿ 1000 ಆರ್, ಯಮಹಾ ಎಂಟಿ -10, ಕವಾಸಕಿ ಝಡ್‍1000, ಮತ್ತು ಬಿಎಂಡಬ್ಲ್ಯು ಎಸ್ 1000ಆರ್ ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Suzuki Katana could launch in India as CKD. Read in Kannada.
Story first published: Friday, February 7, 2020, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X