Just In
- 1 hr ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- 1 hr ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 1 hr ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 2 hrs ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ಎಕ್ಸ್ಪೋ 2020: ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಪ್ರದರ್ಶಿಸಲಿದೆ ಸುಜುಕಿ
ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಲಿಮಿಟೆಡ್ ತನ್ನ ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಅನ್ನು ಮುಂದಿನ ತಿಂಗಳು ನಡೆಯಲಿರುವ 2020ರ ಆಟೊ ಎಕ್ಸ್ ಪೋದಲ್ಲಿ ಪ್ರದರ್ಶಿಸುವ ನಿರೀಕ್ಷೆಗಳಿವೆ. ಸುಜುಕಿ ಕಂಪನಿಯು, ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಜನಪ್ರಿಯ ದ್ವಿ ಚಕ್ರ ಕಂಪನಿಗಳು ಅಡ್ವೆಂಚರ್ ಬೈಕ್ಗಳನ್ನು ಇತ್ತೀಚಿನ ವರ್ಷದಲ್ಲಿ ಬಿಡುಗಡೆಗೊಳಿಸಿವೆ. ಅಡ್ವೆಂಚರ್ ಬೈಕ್ ಪ್ರಿಯರನ್ನು ಈ ಬೈಕ್ಗಳು ಸೆಳೆಯುವಲ್ಲಿ ಯಶ್ವಸಿಯಾಗಿವೆ. ಇದರಲ್ಲಿ ಹೀರೋ ಎಕ್ಸ್ಪಲ್ಸ್ 200 ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಕೂಡ ತನ್ನ ಉತ್ತಮ ಕಾರ್ಯಕ್ಷಮತೆಯಿಂದ ಹೆಚ್ಚಿನ ಗ್ರಾಹಕರ ಗಮನಸೆಳೆದಿದೆ.
ವಿ-ಸ್ಟ್ರೋಮ್ ಸರಣಿಯ ಅಡ್ವೆಂಚರ್ ಬೈಕ್ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಗಳಿಸಿವೆ. ವಿ-ಸ್ಟ್ರೋಮ್ 650 ಎಕ್ಸ್ಟಿ ಬೈಕ್ ಅನ್ನು ಈಗಾಗಲೇ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಜಿಎಸ್ಎಕ್ಸ್ -ಆರ್ 250 ಬೈಕ್ ಅನ್ನು ಚೀನಾದಲ್ಲಿ ಪ್ರದರ್ಶಿಸಿದ ನಂತರ 2016ರ ಇಐಸಿಎಂಎಂನಲ್ಲಿಯೂ ಕೂಡ ವಿ-ಸ್ಟ್ರೋಮ್ 250ಯನ್ನು ಪ್ರದರ್ಶಿಸಲಾಗಿತ್ತು.
ವಿ-ಸ್ಟ್ರೋಮ್ 250 ಈ ಹಿಂದೆ ಭಾರತದಲ್ಲಿ ಮಾರಾಟವಾಗಿದ್ದ ಇನಾಝಮಾ 250 ಬೈಕಿನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಹೊಸ ವಿ-ಸ್ಟ್ರೋಮ್ 250 ಬೈಕ್ ತನ್ನ ಸರಣಿಯಲ್ಲಿರುವ ವಿ-ಸ್ಟ್ರೋಮ್ 650 ಮತ್ತು ವಿ-ಸ್ಟ್ರೋಮ್ ಬೈಕ್ಗಳ ಮಾದರಿಯ ವಿನ್ಯಾಸವನ್ನು ಹೊಂದಿದೆ.
ಹೊಸ ವಿ-ಸ್ಟ್ರೋಮ್ 250 ಬೈಕಿನಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್ ಫೋರ್-ಸ್ಟ್ರೋಕ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,000 ಆರ್ಪಿಎಂನಲ್ಲಿ 25 ಬಿಹೆಚ್ಪಿ ಪವರ್ ಮತ್ತು 6,500 ಆರ್ಪಿಎಂನಲ್ಲಿ 23.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ವಿ-ಸ್ಟ್ರೋಮ್ 250 ಬೈಕ್ ಹಲವಾರು ಫೀಚರ್ಸ್ಗಳನ್ನು ಹೊಂದಿರಲಿದೆ. ಇದರಲ್ಲಿ ಲಾಂಗ್ ಟ್ರಾವೆಲ್ ಸಸ್ಪೆಂಷನ್, ಸ್ಟ್ಯಾಂಡರ್ಡ್ ಎಬಿಎಸ್, ಅಲಾಯ್ ವ್ಹೀಲ್ 110/80-17 ಫ್ರಂಟ್ ಮತ್ತು 140/70-17 ರೇರ್ ಟಯರ್ ಅನ್ನು ಹೊಂದಿರುತ್ತದೆ.
ಇನ್ನೂ ಹೆಡ್ಲ್ಯಾಂಪ್, ಸಿಗ್ನೇಚರ್ ಫ್ರಂಟ್ ಕೌಲ್, ಸ್ಟಿಪ್ ಫ್ರಂಟ್ ವಿಂಡ್ ಷೀಲ್ಡ್, 15 ಲೀಟರ್ ಫ್ಯೂಯಲ್ ಟ್ಯಾಂಕ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಅನೇಕ ಫೀಚರ್ಸ್ಗಳನ್ನು ವಿ-ಸ್ಟ್ರೋಮ್ 250 ಬೈಕಿನಲ್ಲಿ ಅಳವಡಿಸಲಾಗುವುದು.
ಕೆಟಿಎಂ ಇಂಡಿಯಾ ಇತ್ತೀಚೆಗೆ 390 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಕೆಟಿಎಂ 390 ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.99 ಲಕ್ಷಗಳಾಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಹಾಗೂ ಬಿಎಂಡಬ್ಲ್ಯು ಮೋಟೊರಾಡ್ ಜಿ310ಜಿಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.
ವಿ-ಸ್ಟ್ರೋಮ್ 250 ಬೈಕ್ ಅನ್ನು ಹೆಚ್ಚು ಸ್ಥಳೀಯವಾಗಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸುತ್ತಿರುವುದರಿಂದ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುವ ಸಾಧ್ಯತೆಗಳಿವೆ. ಹೊಸ ವಿ-ಸ್ಟ್ರೋಮ್ 250 ಬೈಕ್ ಬಿಡುಗಡೆಯಾದ ಬಳಿಕ ಬೆನೆಲ್ಲಿ ಟಿಆರ್ಕೆ 251 ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ.