ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

2020ರ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ಕಡ್ಡಾಯವಾಗಿ ಜಾರಿಗೆ ಬಂದಿದ್ದು, ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ಬಿಎಸ್-6 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿರುವುದಲ್ಲದೆ ಇದೀಗ ಎರಡನೇ ಬಾರಿಗೆ ಬೆಲೆ ಹೆಚ್ಚಳ ಘೋಷಿಸುತ್ತಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಟಿವಿಎಸ್ ಕಂಪನಿಯು ಬಿಎಸ್-6 ಎಂಜಿನ್ ಪ್ರೇರಿತ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳನ್ನು ಕಳೆದ ನವೆಂಬರ್ ಅಂತ್ಯದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹೊಸ ಬೈಕ್‌ಗಳ ಬೆಲೆಯಲ್ಲಿ ಎರಡನೇ ಬಾರಿಗೆ ಬೆಲೆ ಹೆಚ್ಚಳ ಘೋಷಣೆ ಮಾಡಿದ್ದು, ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದುಬಾರಿ ಬೆಲೆ ಪಡೆದುಕೊಂಡಿವೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಬಿಎಸ್-4 ನಿಂದ ಎಂಜಿನ್‌ನಿಂದ ಬಿಎಸ್-6 ನಿಯಮಕ್ಕೆ ಉನ್ನತೀಕರಿಸುವಾಗ ರೂ.6 ಸಾವಿರದಿಂದ ರೂ.16 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳಲ್ಲಿ ಇದೀಗ ರೂ.2,500 ಹೆಚ್ಚಳ ಮಾಡಲಾಗಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಬಿಡಿಭಾಗಗಳ ಬೆಲೆ ಹೆಚ್ಚಳ ಮತ್ತು ಹೊಸ ತಂತ್ರಜ್ಞಾನ ಜೋಡಣೆಯಿಂದಾಗಿ ಉತ್ಪಾದನಾ ವೆಚ್ಚವು ಹೆಚ್ಚಳವಾಗಿರುವುದೇ ಬೆಲೆ ಏರಿಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಟಿವಿಎಸ್ ನಂತರ ಇನ್ನುಳಿದ ಆಟೋ ಉತ್ಪಾದನಾ ಕಂಪನಿಗಳು ಸಹ ಬೆಲೆ ಹೆಚ್ಚಳಕ್ಕೆ ಸಿದ್ದವಾಗಿವೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಇನ್ನು ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಟಿವಿಎಸ್ ಹೊಸ ಬೈಕ್ ಆವೃತ್ತಿಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನ್ನು ಪಡೆದುಕೊಂಡಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಹೊಸ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಆರಂಭಿಕವಾಗಿ ರೂ.1.03 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.1.06 ಬೆಲೆ ಹೊಂದಿದ್ದರೆ, ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ಆರಂಭಿಕವಾಗಿ ರೂ. 1.25 ಲಕ್ಷ ಬೆಲೆ ಹೊಂದಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 159.7ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 16-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಹಾಗೆಯೇ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಮಾದರಿಯು ಸಹ ಬಿಎಸ್-6 ಮಾದರಿಯ 197.75ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 16.8-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ ಬೆಲೆಗಳಲ್ಲಿ ಮತ್ತೆ ಹೆಚ್ಚಳ

ಇದರೊಂದಿಗೆ ಎರಡು ಬೈಕ್‌ಗಳಲ್ಲೂ ಈ ಬಾರಿ ಪರ್ಫಾಮೆನ್ಸ್ ಹೆಚ್ಚಳವಾಗಿರುವ ಸ್ಪಷ್ಟವಾಗಿದ್ದು, ಇಂಧನ ದಕ್ಷತೆ ಕೂಡಾ ಗಮನಸೆಳೆಯಲಿದೆ ಎನ್ನಲಾಗಿದೆ. ಜೊತೆಗೆ ಹೊಸ ಬೈಕ್‌ಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ದಟ್ಟಣೆಯಲ್ಲೂ ಕಡಿಮೆ ಇಂಧನ ದಹಿಸುವಿಕೆಯ ಹೊಸ ತಂತ್ರಜ್ಞಾನ(ಜಿಟಿಟಿ) ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
TVS Apache RTR 160 & RTR 200 4V Prices Hiked. Read in Kannada.
Story first published: Thursday, May 28, 2020, 20:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X