ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಇದೇ ಮೊದಲ ಬಾರಿಗೆ ಟಿವಿ‍ಎಸ್ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ಮಾಡುವಾಗ ಕಣ್ಣಿಗೆ ಬಿದ್ದಿದೆ. ಹೊಸೂರಿನಲ್ಲಿರುವ ಟಿವಿ‍ಎಸ್ ಕಂಪನಿಯ ಉತ್ಪಾದನಾ ಘಟಕದಿಂದ ಕೆಲವೇ ದೂರಗಳ ಅಂತರದಲ್ಲಿ ಈ ಸ್ಕೂಟರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಟಿವಿ‍ಎಸ್ ಕಂಪನಿಯು ಹಲವು ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಟಿವಿ‍ಎಸ್ ಕಂಪನಿಯು ಮೊದಲ ಬಾರಿಗೆ 2008ರಲ್ಲಿ ಸ್ಕೂಟಿ ಟೀನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿತ್ತು. ಟಿವಿ‍ಎಸ್ ಕಂಪನಿಯ ರಾಧಾಕೃಷ್ಣನ್‍‍ರವರು ಕಳೆದ ವರ್ಷ ಮಾತನಾಡಿ, 2020ರ ಮಾರ್ಚ್ ವೇಳೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗುವುದೆಂದು ತಿಳಿಸಿದ್ದರು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಟಿವಿ‍ಎಸ್ ಕಂಪನಿಯು ಎರಡು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅಭಿವೃದ್ಧಿಪಡಿಸುತ್ತಿರುವುದನ್ನು ಖಚಿತಪಡಿಸಿತ್ತು. ಟಿವಿ‍ಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಪಾಟ್ ಟೆಸ್ಟ್ ಮಾಡುತ್ತಿರುವ ಸ್ಪೈ ವೀಡಿಯೊವನ್ನು ಎಲೆಕ್ಟ್ರಿಕ್ ವೆಹಿಕಲ್ ವೆಬ್.ಇನ್ ಬಿಡುಗಡೆಗೊಳಿಸಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಈ ಸ್ಪೈ ವೀಡಿಯೊದಲ್ಲಿ ಕಾಣುವ ಎಲೆಕ್ಟ್ರಿಕ್ ಸ್ಕೂಟರ್ ಟಿವಿ‍ಎಸ್ ಕ್ರೆಯೊನ್ ಕಾನ್ಸೆಪ್ಟ್ ಸ್ಕೂಟರಿನಲ್ಲಿರುವಂತಹ ಶಾರ್ಪ್ ಫ್ರಂಟ್ ಎಂಡ್ ಏಪ್ರಾನ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಪೆಂಷನ್, ರೂಮಿ ಫ್ಲೋರ್‍‍ಬೋರ್ಡ್‍‍‍ಗಳನ್ನು ಹೊಂದಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಇದರಿಂದಾಗಿ ಸ್ಕೂಟರ್ ಸವಾರನು ನೇರವಾದ ಭಂಗಿಯಲ್ಲಿ ಆರಾಮದಾಯಕವಾಗಿ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ಸ್ಪೈ ವೀಡಿಯೊದಲ್ಲಿರುವ ಸ್ಕೂಟರ್ ಅನ್ನು ಸಂಪೂರ್ಣವಾಗಿ ಮರೆಮಾಡಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಈ ಸ್ಕೂಟರ್ ಚಲಿಸುವಾಗ ಎಲೆಕ್ಟ್ರಿಕ್ ಮೋಟರಿನ ಶಬ್ದವನ್ನು ಕೇಳಬಹುದು. ಇದರಿಂದಾಗಿ ಇದು ಎಲೆಕ್ಟ್ರಿಕ್ ಸ್ಕೂಟರ್ ಎಂದು ಖಚಿತವಾಗುತ್ತದೆ. ಟಿವಿ‍ಎಸ್ ಕಂಪನಿಯು 2018ರ ಆಟೋ ಎಕ್ಸ್ ಪೋದಲ್ಲಿ ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರಿನ ಕಾನ್ಸೆಪ್ಟ್ ಆವೃತ್ತಿಯನ್ನು ಪ್ರದರ್ಶಿಸಿತ್ತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಕಾನ್ಸೆಪ್ಟ್ ಸ್ಕೂಟರ್ ದೊಡ್ಡ ಗಾತ್ರದ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 80 ಕಿ.ಮೀವರೆಗೂ ಚಲಿಸುತ್ತದೆ ಎಂದು ಹಾಗೂ ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 70 ಕಿ.ಮೀಗಳೆಂದು ಹೇಳಲಾಗಿತ್ತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಟಿವಿಎಸ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಅಳವಡಿಸಲಾಗುವುದು. ಇದರಿಂದಾಗಿ ಈ ಸ್ಕೂಟರ್ 1 ಗಂಟೆಯಲ್ಲಿ 80%ನಷ್ಟು ಚಾರ್ಜ್ ಆಗಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಹೊಸ ಟಿವಿ‍ಎಸ್ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಫೀಚರ್‍‍ಗಳನ್ನು ಹೊಂದಿರಲಿದೆ. ಈ ಸ್ಪೈ ವೀಡಿಯೊದಲ್ಲಿರುವ ಸ್ಕೂಟರ್‍‍‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಾಗಿ ದೊಡ್ಡ ಗಾತ್ರದ ಟಿ‍ಎಫ್‍ಟಿ ಸ್ಕ್ರೀನ್ ನೀಡಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಇದರಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರ್, ಟಿವಿ‍ಎಸ್‍ ಕಂಪನಿಯ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದುವ ಸಾಧ್ಯತೆಗಳಿವೆ. ಇದು ಎನ್‍‍ಟಾರ್ಕ್ 125 ಸ್ಕೂಟರಿನಲ್ಲಿ ಅಳವಡಿಸಿರುವ ಎಕ್ಸ್ ಕನೆಕ್ಟ್ ಟೆಕ್ನಾಲಜಿ ಆಗಿರಬಹುದು ಅಥವಾ ಅದಕ್ಕಿಂತ ಸುಧಾರಿತ ಆವೃತ್ತಿಯಾಗಿರಬಹುದು.

ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸ್ಪೀಡೊಮೀಟರ್, ಟಾಚೋಮೀಟರ್, ಟ್ರಿಪ್ ಮೀಟರ್, ಬ್ಯಾಟರಿ ಲೆವೆಲ್ ಇಂಡಿಕೇಟರ್, ಬ್ಯಾಟರಿಯ ಸ್ಥಿತಿ, ಸ್ಮಾರ್ಟ್ ಫೋನಿಗೆ ಬ್ಲೂಟೂತ್ ಕನೆಕ್ಟಿವಿಟಿ ಬಗ್ಗೆ ಹಾಗೂ ಇನ್ನುಳಿದ ಫಂಕ್ಷನ್‍‍ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ರಿಜನರೇಟಿವ್ ಬ್ರೇಕಿಂಗ್, ರಿವರ್ಸ್ ಅಸಿಸ್ಟ್, ಯು‍ಎಸ್‍‍ಬಿ ಚಾರ್ಜರ್, ಸಿಂಗಲ್ ಚಾನೆಲ್ ಎ‍‍ಬಿ‍ಎಸ್, ನ್ಯಾವಿಗೇಶನ್, ಲೈವ್ ವೆಹಿಕಲ್ ಟ್ರಾಕಿಂಗ್, ಜಿಯೊ ಫೆನ್ಸಿಂಗ್‍‍ಗಳನ್ನು ಹೊಂದುವ ಸಾಧ್ಯತೆಗಳಿವೆ. ಈ ಮಾಹಿತಿಯನ್ನು ಟಿ‍‍ವಿ‍ಎಸ್ ಕಂಪನಿಯು ಖಚಿತಪಡಿಸಬೇಕಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟಿವಿ‍ಎಸ್ ಮೋಟಾರ್ ಕಂಪನಿಯು 2018ರ ಆಟೋ ಎಕ್ಸ್ ಪೋದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಇದರ ಹಿನ್ನೆಲೆಯಲ್ಲಿ ಕ್ರೆಯೊನ್ ಕಾನ್ಸೆಪ್ಟ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿತ್ತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಿವಿ‍ಎಸ್ ಎಲೆಕ್ಟಿಕ್ ಸ್ಕೂಟರ್

ಟಿವಿ‍ಎಸ್ ಕಂಪನಿಯು, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬುದನ್ನು ಖಚಿತಪಡಿಸಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಅಥೆರ್ 450 ಹಾಗೂ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New TVS Electric Scooter (Creon) Spied Testing In India For The First Time: Spy Pics & Details. Read in Kannada.
Story first published: Thursday, January 16, 2020, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X