ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಆಟೋ ಮೊಬೈಲ್ ಉದ್ಯಮವು ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಕಠಿಣ ಸಮಯದಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ನೌಕರರ ವೇತನವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. 6 ತಿಂಗಳ ವೇತನವನ್ನು ಕಡಿತಗೊಳಿಸಲಾಗುವುದೆಂದು ಕಂಪನಿ ತಿಳಿಸಿದೆ.

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಮೇ 23ರಂದು ನೌಕರರನ್ನು ಉದ್ದೇಶಿಸಿ ಮಾತನಾಡಿದ ಟಿವಿಎನ್ ಮೋಟಾರ್ ಸಿಇಒ ಕೆ.ಎನ್. ರಾಧಾಕೃಷ್ಣನ್‌ರವರು ಈ ಮಾಹಿತಿಯನ್ನು ನೀಡಿದರು. 2020ರ ಮೇ ತಿಂಗಳಿನಿಂದ 2020ರ ಅಕ್ಟೋಬರ್‌ವರೆಗೆ ಕಂಪನಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ನೌಕರರ ವೇತನವನ್ನು ಕಡಿತಗೊಳಿಸುವಂತೆ ಕಂಪನಿ ಸೂಚಿಸಿದೆ. ವ್ಯವಹಾರವನ್ನು ಮೌಲ್ಯಮಾಪನ ಮಾಡಿದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿರುವ ಕಂಪನಿಯು ಎಷ್ಟು ಪ್ರಮಾಣದಲ್ಲಿ ಸಂಬಳವನ್ನು ಕಡಿತಗೊಳಿಸಲಾಗುವುದೆಂದು ತಿಳಿಸಿಲ್ಲ.

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಕಂಪನಿಯ ಕೆಲವು ಉದ್ಯೋಗಿಗಳು ಕೆಲವು ತಿಂಗಳುಗಳ ವೇತನವನ್ನು ಕಡಿತಗೊಳಿಸುವಂತೆ ಸ್ವಯಂಪ್ರೇರಣೆಯಿಂದ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಏಪ್ರಿಲ್ ತಿಂಗಳ ಪೂರ್ಣ ಸಂಬಳವನ್ನು ನೀಡಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಬಜಾಜ್ ಆಟೋ ಕಂಪನಿಯು ಕೂಡ ತನ್ನ ಉದ್ಯೋಗಿಗಳ ಏಪ್ರಿಲ್‌ ತಿಂಗಳ ವೇತನವನ್ನು ಕಡಿತಗೊಳಿಸುವ ಪ್ರಸ್ತಾಪ ಮಾಡಿತ್ತು. ಆದರೆ ಈ ಪ್ರಸ್ತಾಪವನ್ನು ಕೆಲವು ತಿಂಗಳುಗಳ ಕಾಲ ಮುಂದೂಡಲಾಗಿದೆ. ಟಾಟಾ ಮೋಟಾರ್ಸ್ ಉನ್ನತ ಹುದ್ದೆಗಳಲ್ಲಿರುವ ನೌಕರರ ವೇತನವನ್ನು 20%ನಷ್ಟು ಕಡಿತಗೊಳಿಸಿದೆ.

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಆಟೋಮೊಬೈಲ್ ಕಾಂಪೊನೆಂಟ್ ತಯಾರಕ ಕಂಪನಿಯಾದ ರಿಕೋಹ್ ಗ್ರೂಪ್ ತನ್ನ ಹಿರಿಯ ಉದ್ಯೋಗಿಗಳ ವೇತನವನ್ನು 3 ತಿಂಗಳವರೆಗೆ 100%ನಷ್ಟು ಕಡಿತಗೊಳಿಸಿದೆ. ಕರೋನಾ ವೈರಸ್‌ ಹರಡದಂತೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಆಟೋ ಮೊಬೈಲ್ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಟಿವಿಎಸ್ ಮೋಟಾರ್ ದೇಶದ ಗ್ರೀನ್ ಝೋನ್‌ಗಳಲ್ಲಿ ಹಂತ ಹಂತವಾಗಿ ಶೋರೂಂಗಳನ್ನು ತೆರೆಯುತ್ತಿದೆ. ಇತರ ಕಂಪನಿಗಳಂತೆ ಟಿವಿಎಸ್ ಕಂಪನಿಯು ಸಹ ತನ್ನ ಮಾರಾಟವನ್ನು ಆರಂಭಿಸಿದೆ. ಮಾರಾಟದ ವೇಳೆಯಲ್ಲಿ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ.

ನೌಕರರ ವೇತನ ಕಡಿತಕ್ಕೆ ಮುಂದಾದ ಖ್ಯಾತ ವಾಹನ ತಯಾರಕ ಕಂಪನಿ

ಟಿವಿಎಸ್ ಕಂಪನಿಯು ತನ್ನ ಹೊಸೂರು, ಮೈಸೂರು ಹಾಗೂ ನಲಗಢಗಳಲ್ಲಿರುವ ಘಟಕಗಳಲ್ಲಿ ಉತ್ಪಾದನೆಯನ್ನು ಆರಂಭಿಸಿದೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಕಂಪನಿಯು ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಉದ್ಯೋಗಿಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸುವಂತೆ ಹಾಗೂ ಸ್ಯಾನಿಟೈಜರ್‌ಗಳನ್ನು ಬಳಸುವಂತೆ ಸೂಚನೆ ನೀಡಿದೆ.

More from DriveSpark

Article Published On: Monday, May 25, 2020, 18:00 [IST]
English summary
TVS employees take salary cuts for six months. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+