ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಜೂಪಿಟರ್ ಸ್ಕೂಟರ್ ಬೆಲೆಯನ್ನು ಮತೊಮ್ಮೆ ಹೆಚ್ಚಿಸಲಾಗಿದೆ. ಈ ಹೊಸ ಜೂಪಿಟರ್ ಸ್ಕೂಟರ್‌ನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.1,040ಗಳವರೆಗೆ ಹೆಚ್ಚಿಸಲಾಗಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಬೆಲೆ ಏರಿಕೆಯ ಬಳಿಕ, ಈ ಬಿಎಸ್-6 ಜೂಪಿಟರ್ ಸ್ಕೂಟರ್ ಪ್ರಾರಂಭಿಕ ಬೆಲೆಯು ರೂ.63,102 ಗಳಾಗಿದೆ. ಇನ್ನು ಜೂಪಿಟರ್ ಸ್ಕೂಟರ್‌ನ ಝಡ್ಎಕ್ಸ್ ಬೆಲೆಯು ರೂ.65,102 ಗಳಾದರೆ ಜೂಪಿಟರ್ ಕ್ಲಾಸಿಕ್ ರೂಪಾಂತರದ ಬೆಲೆಯು ರೂ.69,602 ಗಳಾಗಿದೆ. ಈ ಎಲ್ಲಾ ಬೆಲೆಗಳ ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಳೆದ ತಿಂಗಳು ಟಿವಿಎಸ್ ಕಂಪನಿಯು ಈ ಜೂಪಿಟರ್ ಸ್ಕೂಟರ್‌ನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.651 ಗಳೆವರೆಗೆ ಹೆಚ್ಚಿಸಲಾಗಿತ್ತು.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಬಿಎಸ್-6 ಜೂಪಿಟರ್ ಸ್ಕೂಟರ್ ಫ್ಯೂಲ್ ಇಂಜೆಕ್ಷಡ್ 109ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಬಿಎಸ್-6 ಟಿವಿಎಸ್ ಜೂಪಿಟರ್ ಮಾದರಿಯು ಈಗ ಬ್ರಾಂಡ್‌ನ ಇಟಿ ಫೈ ಅಂದರೆ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸಿದ ಇಟಿ-ಫೈ ಹಾಗೂ ಆರ್‌ಟಿ-ಫೈ ಎಂಬ ಫೈ ತಂತ್ರಜ್ಞಾನದ ಭಾಗವಾಗಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಮೊದಲ ಆವೃತ್ತಿಯಾದ ಇಟಿ ಫೈ ಹೆಚ್ಚಿನ ರಿಫೈನ್‍‍ಮೆಂಟ್, ಸುಧಾರಿತ ಮೈಲೇಜ್ ಹಾಗೂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಒದಗಿಸುತ್ತದೆ. ಇನ್ನು ಆರ್‍‍ಟಿ ಫೈ (ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್) ಟೆಕ್ನಾಲಜಿಯು ಎಲ್ಲಾ ಪರಿಸ್ಥಿತಿಗಳಲ್ಲೂ ರೇಸಿಂಗ್ ಅನುಭವವನ್ನು ನೀಡುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಬಿಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಜೂಪಿಟರ್ ಕ್ಲಾಸಿಕ್, ಇಟಿ ಫೈ ಟೆಕ್ನಾಲಜಿಯನ್ನು ಹೊಂದಿದ ಮೊದಲ ಸ್ಕೂಟರ್ ಆಗಿದೆ. ಬಿಎಸ್ 6 ಎಂಜಿನ್ ಅಪ್‌ಡೇಟ್‌ನೊಂದಿಗೆ ಇತರ ಎಲ್ಲ ಮಾದರಿಗಳಲ್ಲೂ ಈ ಟೆಕ್ನಾಲಜಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುತ್ತದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಜೂಪಿಟರ್ ಕ್ಲಾಸಿಕ್ ಹಳೆಯ ಮಾದರಿಗಳಿಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಈ ಅಪ್‍‍ಡೇಟ್‍‍ಗಳ ಹೊರತಾಗಿ, ಹೊಸ ಟಿವಿಎಸ್ ಜುಪಿಟರ್ ಬಿಎಸ್ 6 ಸ್ಕೂಟರ್ ಅನ್ನು ಈಗ ಇಂಡಿ ಬ್ಲೂ ಎಂಬ ಹೊಸ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ಚಾಲನಾ ಸಾಮರ್ಥ್ಯ ಮತ್ತು ಒಟ್ಟಾರೆ ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ. ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ರೂಪಾಂತರದ ಮುಂಭಾಗದ ಮೊಬೈಲ್ ಫೋನ್ ಕ್ಯೂಬಿ, ಯುಎಸ್‌ಬಿ ಚಾರ್ಜರ್ ಹಾಗೂ ಹೊಸ ಟಿಂಟೆಡ್ ವೀಸರ್ ಅನ್ನು ಹೊಂದಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್

ಜೂಪಿಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿರುವ ಟಿವಿ‍ಎಸ್ ಕಂಪನಿಯ ಜನಪ್ರಿಯ ಸ್ಕೂಟರ್‍‍ಗಳಲ್ಲಿ ಒಂದಾಗಿದೆ. ಜೂಪಿಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 5 ಜಿ ಹಾಗೂ ಹೀರೋ ಪ್ಲೆಶರ್ 110 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, July 24, 2020, 12:36 [IST]
English summary
TVS BS6 Jupiter Gets A Price Hike For The Second Time. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+