ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಬೈಕ್ ಅನ್ನು ಸಿಂಗಲ್-ಚಾನೆಲ್ ಎಬಿಎಸ್ ಹಾಗೂ ಡ್ಯುಯಲ್-ಚಾನೆಲ್ ಎಬಿಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಬೆಲೆ ಏರಿಕೆಯ ಪರಿಣಾಮವು ಈ ಎರಡೂ ಮಾದರಿಗಳ ಮೇಲಾಗಲಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆಗಳನ್ನು ರೂ.1,500ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಅಪಾಚೆ ಆರ್‌ಟಿಆರ್ 200 4 ವಿ ಸಿಂಗಲ್-ಚಾನೆಲ್ ಎಬಿಎಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.25 ಲಕ್ಷಗಳಾದರೆ, ಡ್ಯುಯಲ್-ಚಾನೆಲ್ ಎಬಿಎಸ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.30 ಲಕ್ಷಗಳಾಗಿದೆ.

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಕಂಪನಿಯು ಅಪಾಚೆ ಆರ್‌ಟಿಆರ್ 200 4 ವಿ ಸರಣಿಯ ಬೈಕ್ ಹಾಗೂ ಮಾರುಕಟ್ಟೆಯಲ್ಲಿ ಮಾರಾಟವಾಗುವ ಇತರ ಮಾದರಿಗಳ ಮೇಲೆ ಹಬ್ಬದ ಹಿನ್ನೆಲೆಯಲ್ಲಿ ಕೊಡುಗೆಗಳನ್ನು ನೀಡಲಿದೆ. ಈ ಎರಡೂ ಮಾದರಿಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ರೂ.5,000ಗಳ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಇದರ ಜೊತೆಗೆ ಟಿವಿಎಸ್ ಕಂಪನಿಯು ಕಡಿಮೆ ಇಎಂಐ, ಫ್ಲೆಕ್ಸಿಬಲ್ ರಿಪೇಮೆಂಟ್ ಸ್ಕೀಮ್ ಸೇರಿದಂತೆ ಹಲವಾರು ಆಕರ್ಷಕ ಹಣಕಾಸು ಯೋಜನೆಗಳನ್ನು ನೀಡುತ್ತಿದೆ. ಗ್ರಾಹಕರು ಕಂಪನಿಯು ನೀಡುವ ರೂ.16,999 ಹಾಗೂ ರೂ.21,999 ಇಎಂಐ ಸ್ಕೀಮ್ ಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಕಂಪನಿಯ ಇತರ ಹಣಕಾಸು ಕೊಡುಗೆಗಳಲ್ಲಿ ರೂ.2,999ಗಳ ಕಡಿಮೆ ಇಎಂಐ, ಸ್ಟೆಪ್-ಅಪ್ ಇಎಂಐ ಸ್ಕೀಮ್ ಹಾಗೂ ಖರೀದಿಯ ದಿನಾಂಕದಿಂದ ಮೊದಲ ಮೂರು ತಿಂಗಳವರೆಗೆ 50%ನಷ್ಟು ಕಡಿಮೆ ಇಎಂಐಗಳು ಸೇರಿವೆ. ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಇಎಂಐ ಆಯ್ಕೆಗಳಿಗೆ ಕಂಪನಿಯು 10 ನಿಮಿಷಗಳಲ್ಲಿ ಅನುಮೋದನೆ ನೀಡಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಅಪಾಚೆ ಆರ್‌ಟಿಆರ್ 200 4 ವಿ ಬೈಕ್, ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌, ಫೆದರ್ ಟಚ್ ಸ್ಟಾರ್ಟ್, ಹೊಸ ಬಾಡಿ ಗ್ರಾಫಿಕ್ಸ್, ಸ್ಟಾಪ್-ಸ್ಟಾರ್ಟ್ ಗ್ಲೈಡ್ ಥ್ರೂ ಟೆಕ್ನಾಲಜಿ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಇದರ ಜೊತೆಗೆ ಈ ಬೈಕ್ ಟಿವಿಎಸ್ ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟ್ ಟೆಕ್ನಾಲಜಿ ಹೊಂದಿರುವ ಬ್ಲೂಬ್ಲೂಟೂತ್ ಎನೆಬಲ್ ಆಗಿರುವ ಎಲ್ ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ. ಈ ಕ್ಲಸ್ಟರ್ ರೈಡರ್ ಟೆಲಿಮೆಟ್ರಿ ಡೇಟಾ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಆರ್‌ಟಿಆರ್ 200 4 ವಿ ಬೈಕ್ ರೇಸ್-ಟ್ಯೂನ್ಡ್ ಸ್ಲಿಪ್ಪರ್ ಕ್ಲಚ್, ಹಿಂಭಾಗದ ಲಿಫ್ಟ್ ಮಿಟಿಗೇಷನ್ ಹೊಂದಿರುವ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಟೆಡ್ 197.75 ಸಿಸಿಯ ಸಿಂಗಲ್ ಸಿಲಿಂಡರ್, ನಾಲ್ಕು-ವಾಲ್ವ್, ಏರ್ / ಆಯಿಲ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 20.2 ಬಿಹೆಚ್‌ಪಿ ಪವರ್ ಹಾಗೂ 7,500 ಆರ್‌ಪಿಎಂನಲ್ಲಿ 16.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಪಾಚೆ ಆರ್‌ಟಿಆರ್ 200 4 ವಿ ಬೈಕಿನ ಬೆಲೆ ಏರಿಸಿದ ಟಿವಿಎಸ್ ಮೋಟಾರ್

ಆರ್‌ಟಿಆರ್ 200 4 ವಿ ಬೈಕ್ ಅನ್ನು ಗ್ಲಾಸ್ ಬ್ಲ್ಯಾಕ್ ಹಾಗೂ ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎನ್ಎಸ್ 200, ಕೆಟಿಎಂ 200 ಡ್ಯೂಕ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಹೋಂಡಾ ಹಾರ್ನೆಟ್ 2.0 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Motor company increases Apache RTR 200 4 V prices. Read in Kannada.
Story first published: Thursday, October 22, 2020, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X