ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಹಬ್ಬದ ಹಿನ್ನೆಲೆಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಸ್ಕೂಟರ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಟಿವಿಎಸ್ ಕಂಪನಿಯು ತನ್ನ ಟಿವಿಎಸ್ ಜೂಪಿಟರ್, ಪೆಪ್ ಪ್ಲಸ್, ಸ್ಕೂಟಿ ಜೆಸ್ಟ್ 110 ಹಾಗೂ ಎನ್‌ಟಾರ್ಕ್ 125 ಸ್ಕೂಟರ್ ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಈ ಸ್ಕೂಟರ್‌ಗಳನ್ನು ಖರೀದಿಸುವವರಿಗೆ ಟಿವಿಎಸ್ ಕಂಪನಿಯು ಕ್ಯಾಶ್‌ಬ್ಯಾಕ್, ರಿಯಾಯಿತಿ ಹಾಗೂ ಇಎಂಐ ಕೊಡುಗೆಗಳನ್ನು ನೀಡುತ್ತಿದೆ. ಪೇಟಿಎಂ ಮೂಲಕ ಸ್ಕೂಟರ್ ಖರೀದಿಸುವಾಗ ಗ್ರಾಹಕರಿಗೆ ರೂ.4,500ಗಳ ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ.

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಸ್ಕೂಟರ್‌ಗಳ ಮೇಲಿನ ಡೌನ್ ಪೇಮೆಂಟ್ ಅನ್ನು ರೂ.10,900ಗಳಿಗೆ ಇಳಿಸಲಾಗಿದೆ. ಇಎಂಐನಲ್ಲಿ ಟಿವಿಎಸ್ ಸ್ಕೂಟರ್ ತೆಗೆದುಕೊಳ್ಳಲು ಬಯಸುವವರು ಜೂಪಿಟರ್ ಸ್ಕೂಟರ್ ಗಾಗಿ ರೂ.2,222, ಜೆಸ್ಟ್ ಹಾಗೂ ಪೆಪ್ ಪ್ಲಸ್ ಖರೀದಿಸುವವರು ಪ್ರತಿ ತಿಂಗಳು ರೂ.1,666ಗಳ ಇಎಂಐ ಪಾವತಿಸಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಗ್ರಾಹಕರಿಗೆ ಸ್ಕೂಟಿ ಜೆಸ್ಟ್ 110 ಹಾಗೂ ಪೆಪ್ ಪ್ಲಸ್‌ ಸ್ಕೂಟರ್ ಗಳ ಮೇಲೆ 100%ನಷ್ಟು ಹಣಕಾಸು ಸೌಲಭ್ಯವನ್ನು ನೀಡಲಾಗುತ್ತದೆ. ಬ್ಯಾಂಕ್ ಕೊಡುಗೆಗಳ ಬಗ್ಗೆ ಹೇಳುವುದಾದರೆ, ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವವರಿಗೆ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಐಸಿಐಸಿಐ ಹಾಗೂ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳ ಮೇಲೆ 5%ನಷ್ಟು ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ರೂ.10,999 ಡೌನ್ ಪೇಮೆಂಟ್ ಮಾಡಿ ಟಿವಿಎಸ್ ಎನ್‌ಟಾರ್ಕ್ 125 ಖರೀದಿಸಬಹುದು. ಎನ್‌ಟಾರ್ಕ್ ಸ್ಕೂಟರ್‌ಗಾಗಿ ಪ್ರತಿ ತಿಂಗಳು ರೂ.2,100 ಇಎಂಐ ಪಾವತಿಸಬೇಕಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಗಾಗಿ ಖರೀದಿಸಿ ನಂತರ ಪಾವತಿಸುವ ಆಯ್ಕೆಯನ್ನು ನೀಡಲಾಗುತ್ತಿದೆ. ಇದರಡಿಯಲ್ಲಿ ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿ, ವಿತರಣೆಯನ್ನು ಪಡೆದುಕೊಂಡ ನಂತರ ಇಎಂಐ ಪಾವತಿಸಬಹುದು.

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಇದರ ಜೊತೆಗೆ ಐಸಿಐಸಿಐ ಹಾಗೂ ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ನಿಂದ ಸ್ಕೂಟರ್ ಖರೀದಿಸಿದಾಗ 5%ನಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುವುದು. ಈ ಎಲ್ಲಾ ಕ್ಯಾಶ್‌ಬ್ಯಾಕ್ ಯೋಜನೆಗಳು ಹಾಗೂ ಕೊಡುಗೆಗಳನ್ನು ಕೆಲವು ನಿಯಮಗಳು ಹಾಗೂ ಷರತ್ತುಗಳೊಂದಿಗೆ ಜಾರಿಗೆ ತರಲಾಗಿದೆ ಎಂಬುದನ್ನು ಗಮನಿಸಬೇಕು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಟಿವಿಎಸ್ ಮಂಪನಿಯು ಇತ್ತೀಚೆಗೆ ತನ್ನ ಎನ್‌ಟಾರ್ಕ್ 125 ಸ್ಕೂಟರಿನ ಅವೆಂಜರ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಅವೆಂಜರ್ಸ್ ಆವೃತ್ತಿಯ ಸ್ಕೂಟರ್‌ಗಳನ್ನು ಹೊಸ ಗ್ರಾಫಿಕ್ಸ್ ಹಾಗೂ ಬಣ್ಣದೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ ಟಿವಿಎಸ್ ಮೋಟಾರ್

ಎನ್‌ಟಾರ್ಕ್ ಅವೆಂಜರ್ಸ್ ಆವೃತ್ತಿಯನು ಕಾಂಬ್ಯಾಟ್ ಬ್ಲೂ, ಇನ್ವಿಸಿಬಲ್ ರೆಡ್ ಹಾಗೂ ಸ್ಟೀಲ್ತ್ ಬ್ಲಾಕ್ ಎಂಬ ಮೂರು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಜೊತೆಗೆ ಈ ಈ ಸ್ಕೂಟರ್‌ನಲ್ಲಿ ಕ್ಯಾಪ್ಟನ್ ಅಮೇರಿಕಾ, ಐರನ್ ಮ್ಯಾನ್ ಹಾಗೂ ಬ್ಲ್ಯಾಕ್ ಪ್ಯಾಂಥರ್ ಗಳಿಂದ ಸ್ಫೂರ್ತಿ ಪಡೆದ ಗ್ರಾಫಿಕ್ಸ್ ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
TVS motor company offering big discounts on scooter purchase. Read in Kannada.
Story first published: Thursday, October 29, 2020, 9:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X