Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Movies
ಸಾಯುವ ಮುನ್ನಾ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಜಯಶ್ರೀ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಂಗ್ಲಾದೇಶದಲ್ಲೂ ಸದ್ದು ಮಾಡಲಿದೆ ಟಿವಿಎಸ್ ಕಂಪನಿಯ ಬೈಕ್
ಹೊಸೂರು ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಹಲವಾರು ಬೈಕ್ ಗಳನ್ನು ಮಾರಾಟ ಮಾಡುತ್ತದೆ. ಟಿವಿಎಸ್ ಕಂಪನಿಯ ಜನಪ್ರಿಯ ಬೈಕುಗಳಲ್ಲಿ ಅಪಾಚೆ ಬೈಕ್ ಸಹ ಸೇರಿದೆ.

ಟಿವಿಎಸ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಬೈಕುಗಳನ್ನು ಮಾರಾಟ ಮಾಡುತ್ತದೆ. ಈಗ ಟಿವಿಎಸ್ ಕಂಪನಿಯು ತನ್ನ ಆರ್‌ಟಿಆರ್ 160 4 ವಿ ಬೈಕ್ ಅನ್ನು ಬಾಂಗ್ಲಾದೇಶದಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಬೈಕ್ ಅನ್ನು ವಿಶೇಷ ತಂತ್ರಜ್ಞಾನದ ಸ್ಮಾರ್ಟ್ ಕನೆಕ್ಟ್ ಫೀಚರ್'ನೊಂದಿಗೆ ಬಿಡುಗಡೆಗೊಳಿಸಿದೆ. ಈ ಫೀಚರ್ ಮೂಲಕ ಬೈಕ್ ಸವಾರರು ಬೈಕಿನಲ್ಲಿರುವ ಸ್ಕ್ರೀನ್ ಮೂಲಕ ಫೋನ್ ಕರೆಗಳನ್ನು ಹಾಗೂ ಎಸ್ಎಂಎಸ್ ಗಳನ್ನು ಸ್ವೀಕರಿಸಬಹುದು.

ಇದರ ಜೊತೆಗೆ ಬೈಕಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಬಹುದು. ಬೈಕಿರುವ ಸ್ಥಳ, ಎಲ್ಲಿಗೆ ಹೋಗಬೇಕು, ಬೈಕಿನಲ್ಲಿ ಪೆಟ್ರೋಲ್ ಎಷ್ಟಿದೆ ಎಂಬ ಮಾಹಿತಿಗಳನ್ನು ಮೊಬೈಲ್ ಮೂಲಕವೇ ತಿಳಿದು ಕೊಳ್ಳಬಹುದು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಬೈಕಿನಲ್ಲಿ ನ್ಯಾವಿಗೇಷನ್‌ನಂತಹ ವಿಶೇಷ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ. ಇದರಿಂದಾಗಿ ಮೊಬೈಲ್'ನಲ್ಲಿ ಬೈಕಿರುವ ಸರಿಯಾದ ಸ್ಥಳದ ಮಾಹಿತಿಯನ್ನು ಕೂಡಲೇ ಪಡೆಯಬಹುದು. ಇದರಿಂದ ಈ ಬೈಕ್ ಕಳ್ಳತನವಾದರೂ ಸುಲಭವಾಗಿ ಪತ್ತೆ ಹಚ್ಚಬಹುದು.

ಹಲವು ವಿಶೇಷ ಫೀಚರ್'ಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4 ವಿ ಬೈಕ್ ಅನ್ನು ಟಿವಿಎಸ್ ಕಂಪನಿಯು ಬಾಂಗ್ಲಾದೇಶದಲ್ಲಿ ಬಿಡುಗಡೆಗೊಳಿಸಿದೆ. ಈ ಫೀಚರ್'ಗಳಿಂದಾಗಿ ಆರ್‌ಟಿಆರ್ 160 4 ವಿ ಬೈಕ್ ಅನ್ನು ಪ್ರೀಮಿಯಂ ಮೋಟಾರ್ ಸೈಕಲ್ ಎಂದು ಪರಿಗಣಿಸಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಬೈಕ್ ಬಾಂಗ್ಲಾದೇಶದ ಯುವಕರನ್ನು ಆಕರ್ಷಿಸುತ್ತದೆ ಎಂಬ ವಿಶ್ವಾಸವನ್ನು ಟಿವಿಎಸ್ ಕಂಪನಿಯು ಹೊಂದಿದೆ. 2021ರ ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಬೈಕಿನಲ್ಲಿ ರೇಸ್ ಬೈಕ್‌ಗಳಲ್ಲಿರುವಂತಹ ಫೀಚರ್'ಗಳಿವೆ ಎಂದು ಟಿವಿಎಸ್ ಮೋಟಾರ್ ಕಂಪನಿಯ ಇಂಟರ್ ನ್ಯಾಷನಲ್ ಸೇಲ್ಸ್ ವಿಭಾಗದ ಉಪಾಧ್ಯಕ್ಷ ಆರ್.ಕೆ.ದಿಲೀಪ್ ಹೇಳಿದ್ದಾರೆ.

ಈ ಬೈಕ್ ಅನ್ನು ಚಾಲನೆ ಮಾಡುವಾಗ ರೇಸಿಂಗ್ ಬೈಕ್ ಚಾಲನೆ ಮಾಡಿದಂತಹ ಅನುಭವವನ್ನು ಪಡೆಯಬಹುದು ಎಂದು ಅವರು ಹೇಳಿದರು. ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ಕಾರಣಕ್ಕೆ ಈ ಬೈಕ್ ಅನ್ನು ಬಾಂಗ್ಲಾದೇಶದ ರೇಸಿಂಗ್ ಉತ್ಸಾಹಿಗಳು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಬೈಕಿನಲ್ಲಿ 159.7 ಸಿಸಿಯ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಆಯಿಲ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. 5 ಸ್ಪೀಡಿನ ಗೇರ್‌ಬಾಕ್ಸ್‌ನಿಂದ ನಿಯಂತ್ರಿಸಲ್ಪಡುವ ಈ ಎಂಜಿನ್ 15.82 ಬಿಹೆಚ್'ಪಿ ಪವರ್ ಉತ್ಪಾದಿಸುತ್ತದೆ.