ಕರೋನಾ ವೈರಸ್ ಎಫೆಕ್ಟ್: ತೀವ್ರವಾಗಿ ಕುಸಿದ ಟಿವಿಎಸ್ ಮಾರಾಟ
ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂತದಲ್ಲಿ ದಿನದೂಡುವಂತಾಗಿದ್ದು, ವೈರಸ್ ಹರಡದಂತೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದಿನಬಳಕೆಯ ವಸ್ತುಗಳ ವ್ಯಾಪರ ವಹಿವಾಟು ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿರುವುದು ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿದೆ.

ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್ ಡೌನ್ ವಿಧಿಸಿದ್ದರಿಂದ ಕೈಗಾರಿಕೆ ವಲಯದಲ್ಲಿ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಟೋ ಕಂಪನಿಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಕರೋನಾ ವೈರಸ್‌ನಿಂದ ಉಂಟಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಟಿವಿಎಸ್ ಮೋಟಾರ್ ಕಂಪನಿಯು ಮಾರ್ಚ್ ತಿಂಗಳಿನ ತನ್ನ ವ್ಯವಹಾರದಲ್ಲಿ 55.5%ನಷ್ಟು ಕುಸಿತ ಕಂಡಿರುವುದಾಗಿ ಹೇಳಿದೆ.

ಕಂಪನಿಯು 2020ರ ಮಾರ್ಚ್ ತಿಂಗಳಿನ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯಂತೆ ಟಿವಿಎಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಾಗೂ ರಫ್ತು ಸೇರಿದಂತೆ ಒಟ್ಟು 1,44,739 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಟಿವಿಎಸ್ ಕಂಪನಿಯು 2019ರ ಮಾರ್ಚ್ ತಿಂಗಳಿನಲ್ಲಿ 3,25,323 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. 2020ರ ಮಾರ್ಚ್ ತಿಂಗಳಿನಲ್ಲಿ ಒಟ್ಟು 1,44,739 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, 2019ರ ಮಾರ್ಚ್‌ನಲ್ಲಿ 3,10,885 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ದೇಶೀಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟವು 2019ರ ಮಾರ್ಚ್ ತಿಂಗಳಿನಲ್ಲಿ 2,47,694 ಯುನಿಟ್‌ಗಳಾಗಿದ್ದರೆ, 2020ರ ಮಾರ್ಚ್ ತಿಂಗಳಿನಲ್ಲಿ 62%ನಷ್ಟು ಕುಸಿದು 94,103 ಯೂನಿಟ್ ಗಳಿಗೆ ತಲುಪಿದೆ.

2019ರ ಮಾರ್ಚ್‌ನಲ್ಲಿ 1,41,086 ಯುನಿಟ್‌ಗಳಿದ್ದ ಬೈಕ್ ಮಾರಾಟವು 52.7%ನಷ್ಟು ಕುಸಿದು 66,673 ಯುನಿಟ್‌ಗಳಿಗೆ ತಲುಪಿದೆ. ಸ್ಕೂಟರ್ ಮಾರಾಟವು 65.28%ನಷ್ಟು ಇಳಿಕೆಯಾಗಿ 34,191 ಯೂನಿಟ್ ಗಳು ಮಾರಾಟವಾಗಿವೆ. 2019ರ ಮಾರ್ಚ್ ತಿಂಗಳಿನಲ್ಲಿ 98,477 ಯೂನಿಟ್ ಸ್ಕೂಟರ್ ಗಳು ಮಾರಾಟವಾಗಿದ್ದವು.

ತ್ರಿಚಕ್ರ ವಾಹನಗಳ ಮಾರಾಟವೂ 25.53%ನಷ್ಟು ಕುಸಿದಿದೆ. 2020ರ ಮಾರ್ಚ್ ತಿಂಗಳಿನಲ್ಲಿ 50,197 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ರಫ್ತು ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ 34%ನಷ್ಟು ಕಡಿಮೆಯಾಗಿದೆ.


Click it and Unblock the Notifications








