ಝೆಪ್ಲಿನ್ ಆರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟಿವಿಎಸ್ ಹೊಸ ಕ್ರೂಸರ್ ಬೈಕ್
ಟಿವಿಎಸ್ ಮೋಟಾರ್ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಕ್ರೂಸರ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಬೈಕ್ ಮಾದರಿಯು ಹೊಸ ಹೆಸರಿನೊಂದಿಗೆ ಪ್ರಮುಖ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಝೆಪ್ಲಿನ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದ ಟಿವಿಎಸ್ ಕಂಪನಿಯು ಬಹುದಿನಗಳ ನಂತರ ಕಾನ್ಸೆಪ್ಟ್ ಮಾದರಿಯನ್ನು ಉತ್ಪಾದನೆಯತ್ತ ಗಮನಹರಿಸಿದ್ದು, ಹೊಸ ಬೈಕ್ ಮಾದರಿಯು ಮಾಹಿತಿಗಳ ಪ್ರಕಾರ ಝೆಪ್ಲಿನ್ ಆರ್ ಹೆಸರಿನೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಕ್ರೂಸರ್ ಮತ್ತು ಕ್ಲಾಸಿಕ್ ಬೈಕ್‌ಗಳಿಗೆ ಪೈಪೋಟಿ ನೀಡುವ ಸಿದ್ದತೆಯಲ್ಲಿದೆ.

ಟಿವಿಎಸ್ ಕಂಪನಿಯು ಹೊಸ ಬೈಕ್ ಬಿಡುಗಡೆಗಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಅಧಿಕೃತ ಹೆಸರು ಸೂಚಿಸಲು ಟ್ರೆಡ್‌ಮಾರ್ಕ್ ಸಲ್ಲಿಕೆ ಮಾಡಿದ್ದು, ಹೊಸ ಬೈಕ್ ಮಾದರಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಬೈಕ್ ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಿರುವ ಟಿವಿಎಸ್ ಕಂಪನಿಯು ಕಾನ್ಸೆಪ್ಟ್ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಉತ್ಪಾದನಾ ಆವೃತ್ತಿಯಲ್ಲಿ ಬದಲಾವಣೆಗೊಳಿಸಬಹುದಾಗಿದ್ದು, ಹೊಸ ಬೈಕ್ ಮಾದರಿಯು ಕ್ರೂಸರ್ ವಿನ್ಯಾಸದ ಜೊತೆಗೆ ಕ್ಲಾಸಿಕ್ ಮಾದರಿಗಳಿಂದಲೂ ಕೆಲವು ಫೀಚರ್ಸ್‌ಗಳನ್ನು ಎರವಲು ಪಡೆಯಬಹುದಾಗಿದೆ.

ಅತ್ಯಾಧುನಿಕ ರೈಡಿಂಗ್ ಸೌಲಭ್ಯದ ಜೊತೆ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿಲಿರುವ ಹೊಸ ಝೆಪ್ಲಿನ್ ಆರ್ ಬೈಕ್ ಮಾದರಿಯು ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಅರಾಮದಾಯಕ ರೈಡಿಂಗ್ ಸೌಲಭ್ಯವನ್ನು ಒದಗಿಸುವುದ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ.

ಬಿಎಸ್-6 ವೈಶಿಷ್ಟ್ಯತೆಯ 212 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಮಾದರಿಯನ್ನು ಹೊಂದಿರುವ ಝೆಪ್ಲಿನ್ ಆರ್ ಬೈಕ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಅವೆಂಜರ್ 220 ಬೈಕಿಗಿಂತೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಜೊತೆಗೆ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿರುವ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡಿಂಗ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್‌ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿರಲಿದೆ.

ಈ ಮೂಲಕ ಕ್ರೂಸರ್ ಮತ್ತು ಕ್ಲಾಸಿಕ್ ಬೈಕ್ ಮಾದರಿಯಲ್ಲೂ ರೈಡಿಂಗ್ ಅನುಭವ ಒದಗಿಸಲಿರುವ ಝೆಪ್ಲಿನ್ ಆರ್ ಬೈಕ್ ಮಾದರಿಯು 350 ಸಿಸಿ ಎಂಜಿನ್ ಪ್ರೇರಿತ ಕ್ಲಾಸಿಕ್ ಬೈಕ್‌ಗಳಿಂತಲೂ ಅತಿ ಕಡಿಮೆ ಬೆಲೆ ಹೊಂದಿದ್ದು, ಹೊಸ ಬೈಕ್ ಮಾದರಿಯು ಮುಂಬರುವ 2021ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಇನ್ನು ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್‌ಗಳಿಗೆ ಯುವ ಸಮುದಾಯವು ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್‌ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಕ್ಲಾಸಿಕ್ 350 ಬೈಕ್ ಆವೃತ್ತಿಗಿಂತಲೂ ಕಡಿಮೆ ಬೆಲೆಯ ಅಂತರದಲ್ಲಿ ಝೆಪ್ಲಿನ್ ಆರ್ ಕ್ರೂಸರ್ ಬೈಕ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ.


Click it and Unblock the Notifications