ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್ ಸಂಸ್ಥೆಯು ಈಗಾಗಲೇ ತನ್ನ ಪ್ರಮುಖ ಬೈಕ್ ಆವೃತ್ತಿಗಳನ್ನು ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಗುಣವಾಗಿ ಬಿಡುಗಡೆಗೊಳಿಸಿದ್ದು, ಇದೀಗ ಎನ್‌ಟಾರ್ಕ್ 125 ಸ್ಕೂಟರ್ ಆವೃತ್ತಿಯನ್ನು ಸಹ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಹೊಸ ಎಮಿಷನ್ ನಿಯಮ ಅನುಸಾರ ಅಭಿವೃದ್ದಿಗೊಂಡಿರುವ ಹೊಸ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 65,975 ಬೆಲೆ ಹೊಂದಿದ್ದು, ಬಿಎಸ್-4 ಮಾದರಿಗಿಂತಲೂ ಹೊಸ ಸ್ಕೂಟರ್ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಂಡಿದೆ. ಬಿಎಸ್-4 ಮಾದರಿಗಿಂತ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 6,513ರಿಂದ ರೂ. 9,980 ರಷ್ಟು ಹೆಚ್ಚುವರಿ ಬೆಲೆ ಹೊಂದಿರುವ ಹೊಸ ಸ್ಕೂಟರ್ ಈ ಬಾರಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ರೇಸ್ ಎಡಿಷನ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕಾರ್ಬ್ಯುಟರ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ನೀಡಲಾಗಿದ್ದು, ಇದರಿಂದ ಹೊಸ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಮಾಲಿನ್ಯ ಉತ್ಪತ್ತಿ ಪ್ರಮಾಣದಲ್ಲೂ ಕೂಡಾ ಸುಧಾರಣೆಯಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಇದರೊಂದಿಗೆ ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದೆ. ಇನ್ನುಳಿದಂತೆ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಬಿಎಸ್-6 ಎಂಜಿನ್ ಜೊತೆ ಉನ್ನತೀಕರಣಗೊಂಡಿರುವ 125ಸಿಸಿ ಪ್ರತಿಸ್ಪರ್ಧಿ ಸ್ಕೂಟರ್‌ಗಳಿಗೆ ಇದು ಪ್ರಬಲ ಪೈಪೋಟಿ ನೀಡುವ ತವಕದಲ್ಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.4-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್ ಖರೀದಿಸಬಹುದು.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ರೇಸ್ ಎಡಿಷನ್ ಸಹ ಖರೀದಿಗೆ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಇದು ಹಲವಾರು ಕಾಸ್ಮೆಟಿಕ್ ಹಾಗೂ ಪ್ರೀಮಿಯಂ ಫೀಚರ್ಸ್ ಅಪ್‌ಡೇಟ್‌ಗಳನ್ನು ಹೊಂದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಸ್ಮಾರ್ಟ್‌ಕನೆಕ್ಟ್ ಫೀಚರ್ಸ್ ನೀಡಲಾಗಿದ್ದು, ಬ್ಲೂಟೂತ್ ಮೂಲಕ ಸ್ಕೂಟರ್ ಚಾಲನೆ ವೇಳೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ಮೂಲಕ ಕಾಲ್, ಮೆಸೇಜ್ ಹಾಗೂ ಇನ್ನಿತರ ನೋಟಿಫಿಕೇಶನ್‍‍ಗಳ ಮಾಹಿತಿಯನ್ನು ಪಡೆಯುವಂತಹ ಸೌಲಭ್ಯ ನೀಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಈ ಮೂಲಕ ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳಾದ ಹೋಂಡಾ ಆಕ್ಟಿವಾ 125 ಎಫ್ಐ, ಸುಜುಕಿ ಆಕ್ಸೆಸ್ 125, ಯಮಹಾ ರೇ ಜೆಡ್ಆರ್ 125 ಆವೃತ್ತಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Article Published On: Thursday, February 13, 2020, 11:53 [IST]
English summary
TVS NTorq BS6 launched in India price features details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+