ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
ಟಿವಿಎಸ್ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಸ್ಟಾರ್ ಸಿಟಿ ಪ್ಲಸ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಟಾರ್ ಪ್ಲಸ್ ಸಿಟಿ ಬೈಕ್ ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62,034 ಗಳಾಗಿದೆ. ಡ್ಯುಯಲ್ ಟೋನ್ ಬಣ್ಣದ ಆಯ್ಕೆಯ ಬೈಕಿಗೆ ಹೆಚ್ಚುವರಿ ರೂ.500 ನೀಡಬೇಕು. ಟಿವಿಎಸ್ 110 ಸಿಸಿ ಕಮ್ಯೂಟರ್ ಬೈಕ್ ದೀರ್ಘಕಾಲದಿಂದ ಮಾರಾಟದಲ್ಲಿದೆ. ಆದರೆ ಇದೀಗ ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ಬಿಡುಗಡೆಗೊಳಿಸಿದೆ.

ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 109.7 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,350 ಆರ್‍ಪಿಎಂನಲ್ಲಿ 8.08 ಬಿಹೆಚ್‍ಪಿ ಪವರ್ ಮತ್ತು 7,350 ಆರ್‍ಪಿಎಂನಲ್ಲಿ 8.7 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಎಂಜಿನ್ ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ. ಈ ಎಂಜಿನ್ ಉತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ. ಟಿವಿಎಸ್ ತನ್ನ ಇಟಿಎಫ್ಐ ಅಥವಾ ಇಕೋ-ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಸ್ಟಾರ್ ಸಿಟಿ ಪ್ಲಸ್‍ನಲ್ಲಿ ಹೊಂದಿದೆ. ಇದು ಇಂಧನ ದಕ್ಷತೆಯನ್ನು ಶೇ.15ರಷ್ಟು ಹೆಚ್ಚಿಸಲು ಸಹಯವಾಗುತ್ತದೆ.

ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಕೆರ್ಬ್ ತೂಕ 116 ಕೆಜಿಯಾಗಿದೆ. ಬಿಎಸ್-6 ಸ್ಟಾರ್ ಸಿಟಿ ಪ್ಲಸ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-4 ಆವೃತ್ತಿಗಿಂತ 7 ಕೆಜಿ ಹೆಚ್ಚಾಗಿದೆ.

ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಹೊಚ್ಚ ಹೊಸ ಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ಬಿಕಿನಿ ಫೇರಿಂಗ್ ಅನ್ನು ಅಳವಡಿಸುವ ಮೂಲಕ ಸ್ಟಾರ್ ಸಿಟಿ ಪ್ಲಸ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಕೌಲ್ ಹಿಂದಿನ ಬಿಎಸ್-4 ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ಮತ್ತು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.

ಹೊಸ ಸ್ಟಾರ್ ಸಿಟಿ ಪ್ಲಸ್ ಬೈಕ್ ಹೊಸ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಹಿಂದಿನ ಮಾದರಿ ಮತ್ತು ಹೊಸ ಬಿಎಸ್-6 ಮಾದರಿಯನ್ನು ಸುಲಭವಾಗಿ ಗುರುತಿಸಲು ಹೊಸ ಗ್ರಾಫಿಕ್ಸ್ ಸಹಾಯ ಮಾಡುತ್ತದೆ. ಉಳಿದಂತೆ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಯುಎಸ್‍ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದು ಗ್ರಾಮಿಣ ಭಾಗದ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ. ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಬುಕ್ಕಿಂಗ್ ಭಾರತದಾದ್ಯಂತ ಪ್ರಾರಂಭವಾಗಿದೆ.

ಟಿವಿಎಸ್ ಕಂಪನಿಯ ಬೈಕ್‍ಗಳ ಸರಣಿಯಲ್ಲಿ ಜನಪ್ರಿಯ ಬೈಕ್‍ಗಳಲ್ಲಿ ಸ್ಟಾರ್ ಸಿಟಿ ಪ್ಲಸ್ ಕೂಡ ಒಂದಾಗಿದೆ. ಈ ಬೈಕ್ ಉತ್ತಮ ಮೈಲೇಜ್ ಮತ್ತು ಪ್ರಯಾಣಿಸಲು ಆರಾಮದಾಯಕವಾಗಿದೆ. ಆಕರ್ಷಕ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪ್ಲಾಟಿನಾ 110 ಮತ್ತು ಹೀರೋ ಹೆಚ್‍ಎಫ್ ಡಿಲಕ್ಸ್ ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications