ಆಟೋ ಎಕ್ಸ್‌ಪೋ 2020: ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್ ಅನಾವರಣ
ವೆಸ್ಪಾ ಕಂಪನಿಯು ತನ್ನ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ 150 ಸಿಸಿಯ ಸ್ಕೂಟರ್ ಆಗಿದೆ.

ರೇಸಿಂಗ್ ಸಿಕ್ಸ್‌ಟೀಸ್ ಆಕರ್ಷಕ್ ಲುಕ್ ಅನ್ನು ಹೊಂದಿದೆ. ಈ ಸ್ಕೂಟರ್ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿದೆ. ಎಸ್‌ಎಕ್ಸ್‌ಎಲ್ 150 ಸ್ಕೂಟರ್ ಅನ್ನು ಆಧರಿಸಿ ರೇಸಿಂಗ್ ಸಿಕ್ಸ್‌ಟೀಸ್ ವೈಟ್‌ವಾಶ್ ಬೇಸ್ ಬಣ್ಣವನ್ನು ಹೊಂದಿದೆ. ಇದರೊಂದಿಗೆ ರೇಸಿಂಗ್ ಸ್ಟ್ರಿಪ್ಸ್ ಅನ್ನು ಹೊಂದಿದೆ. ಸೈಡ್ ಪ್ಯಾನೆಲ್‌ಗಳು ರೇಸ್ ಸ್ಟ್ರಿಪ್‌ಗಳನ್ನು ಒಳಗೊಂಡಿರುತ್ತವೆ.

ಈ ಸ್ಕೂಟರ್‍ನ ಟಯರ್‍ಗಳಲ್ಲಿ ಗೋಲ್ಡನ್ ಬಣ್ಣಗಳ ಅಂಶವಿದೆ. ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಸ್ಕೂಟರಿನ ಮಿರರ್ ಫ್ಲೋರ್‍ಬೋರ್ಡ್‍ನಲ್ಲಿ ರಬ್ಬರ್ ಮತ್ತು ಎಲ್‍ಇಡಿ ಲೈಟ್ ಸುತ್ತಲೂ ಕಪ್ಪು ಬಣ್ಣದ ಫಿನಿಶಿಂಗ್ ಹೊಂದಿದೆ.

ಈ ಸ್ಕೂಟರ್ 150 ಸಿಸಿ, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7600 ಆರ್‍ಪಿಎಂನಲ್ಲಿ 10.4 ಬಿಹೆಚ್‍ಪಿ ಪವರ್ ಮತ್ತು 10.60 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್‍ನಲ್ಲಿ ಹಲವಾರು ನೂತನ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಹೊಂದಿರುವ ಬೂಟ್ ಲೈಟ್ ಮತ್ತು ಫುಲ್ ಎಲ್‍ಇಡಿ ಹೆಡ್‍ಲೈಟ್ ಅನ್ನು ಹೊಂದಿದೆ.

ಈ ಸ್ಕೂಟರ್ ಮುಂಭಾಗದಲ್ಲಿ ಟ್ರೈಲಿಂಗ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೂಂದಿದೆ. ಈ ಸ್ಕೂಟರ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಇನ್ನೂ ಎರಡೂ ತುದಿಯಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದೆ.

ವೆಸ್ಪಾ ರೇಸಿಂಗ್ ಸಿಕ್ಸ್‌ಟೀಸ್ ಸ್ಕೂಟರ್‍ನ ಬೆಲೆಯನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಈ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,25,107 ಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








