ಬೇಡಿಕೆಯನ್ವಯ ಬಿಡುಗಡೆಯಾಗಲಿದೆ ಯಮಹಾದ ಹೊಸ 300ಸಿಸಿ ಅಡ್ವೆಂಚರ್ ಬೈಕ್
ಯಮಹಾ ಕಂಪನಿಯ ಅಡ್ವೆಂಚರ್ ಬೈಕುಗಳ ಸರಣಿಯಲ್ಲಿ ಟೆನೆರೆ 700 ಜನಪ್ರಿಯ ಮಾದರಿಯಾಗಿದೆ. ಈ ಯಮಹಾ ಟೆನೆರೆ 700 ಅಡ್ವೆಂಚರ್ ಬೈಕ್ ಭಾರತದಲ್ಲಿ ಲಭ್ಯವಿಲ್ಲದಿದ್ದರೂ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ.

ಇತ್ತೀಚೆನ ಕೆಲವು ವರದಿಗಳ ಪ್ರಕಾರ ಯಮಹಾ ಕಂಪನಿಯು ಟೆನೆರೆ 700 ಆಧಾರಿತ 300ಸಿಸಿ ಅಡ್ವೆಂಚರ್ ಬೈಕನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೆ ಬಿಡುಗಡೆಗೊಳಿಸಲಿದೆ. 300 ಸಿಸಿ ಅಡ್ವೆಂಚರ್ ಬೈಕುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಾಗುತ್ತಿದೆ. ಕೆಟಿಎಂ ಮತ್ತು ಬಿಎಂಡಬ್ಲ್ಯು ಮೋಟರ್‌ರಾಡ್‌ನಂತಹ ಬ್ರ್ಯಾಂಡ್‌ಗಳು ಕೈಗೆಟುಕುವ ಬೆಲೆಯಲ್ಲಿ 390 ಅಡ್ವೆಂಚರ್ ಮತ್ತು ಜಿ 310 ಜಿಎಸ್ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

ಇತ್ತೀಚೆಗೆ ಡ್ಯುಯಲ್-ಸ್ಪೋರ್ಟ್ ಬೈಕುಗಳ ಬಗ್ಗೆ ಜನರು ಹೆಚ್ಚಿನ ಆಸಕ್ತಿಯನ್ನು ಬೆಳಸುತ್ತಿದ್ದಾರೆ, ಈ 390 ಅಡ್ವೆಂಚರ್ ಮತ್ತು ಜಿ 310 ಜಿಎಸ್ ಅಡ್ವೆಂಚರ್ ಬೈಕುಗಳು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದೆ.
MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಯಮಹಾ ಕಂಪನಿಯು 300 ಸಿಸಿ ಅಡ್ವೆಂಚರ್ ಬೈಕುಗಳಿಗೆ ಬೇಡಿಕೆ ಇದ್ದರೆ ಅದನ್ನು ಬಿಡುಗಡೆಗೊಳಿಸಲು ಸಿದ್ಧವಾಗಲಿದೆ ಎಂದು ಯಮಹಾ ಬಹಿರಂಗಪಡಿಸಿದೆ. ಇತ್ತೀಚೆಗೆ ಕೆಟಿಎಂ ಮತ್ತು ಬಿಎಂಡಬ್ಲ್ಯು 300 ಸಿಸಿ ಅಡ್ವೆಂಚರ್ ಬೈಕುಗಳು ಗ್ರಾಹಕರ ಗಮನವನ್ನು ಸೆಳೆಯುಯಲ್ಲಿ ಯಶ್ವಸಿಯಾಗಿದೆ.

ಇದರಿಂದ ಯಮಹಾ ಕಂಪನಿಯು ಕೂಡ ಬೇಡಿಕೆಯನ್ನು ಅನುಸರಿಸಿ 300 ಸಿಸಿ ಅಡ್ವೆಂಚರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಚಿಂತಿಸಿದೆ ಎಂದು ವರದಿಗಳಾಗಿದೆ. ಆದರೆ ಇದು ಇನ್ನು ಚಿಂತನೆಯ ಹಂತದಲ್ಲಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇನ್ನು ಯಮಹಾ ಕಂಪನಿಯು ತನ್ನ ಹೊಸ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕ್ ಹೆರಿಟೇಜ್ ಡಾಕರ್ ರ‍್ಯಾಲಿ ಬಣ್ಣಗಳನ್ನು ಒಳಗೊಂಡಂತೆ ಹಲವಾರು ಆಫ್-ರೋಡ್ ಫೋಕಸ್ಡ್ ಅಕ್ಸೆಸರೀಸ್ ಅನ್ನು ಹೊಂದಿದೆ.

ಈ ಹೊಸ ಬೈಕಿನಲ್ಲಿ ಅಪ್‌ಗ್ರೇಡ್ ಸ್ಕಿಡ್-ಪ್ಲೇಟ್, ರ‍್ಯಾಲಿ ಸೀಟ್, ಅಕ್ರಾಪೊವಿಕ್ ಎಂಡ್ ಕ್ಯಾನ್, ಮತ್ತು ಚೈನ್ ಮತ್ತು ರೇಡಿಯೇಟರ್‌ಗಾಗಿ ಗಾರ್ಡ್‌ಗಳಂತಹ ಪರ್ಫಾಮೆನ್ಸ್ ಉಪಕರಣಗಳನ್ನು ಸಹ ನೀಡಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಈ ಹೊಸ ಯಮಹಾ ಟೆನೆರೆ 700 ರ‍್ಯಾಲಿ ಎಡಿಷನ್ ಬೈಕಿನಲ್ಲಿ 689 ಸಿಸಿ ಟ್ವಿನ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 72.4 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 68 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಯಮಹಾ ಟೆನೆರೆ 300 ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಿದರೆ ಅದರಲ್ಲಿ ಎಂಟಿ-03 ಮಾದರಿಯಲ್ಲಿರುವಂತಹ ಎಂಜಿನ್ ಅನ್ನು ಅಳವಡಿಸಬಹುದು. ಈ ಯಮಹಾ ಟೆನೆರೆ 300 ಅಡ್ವೆಂಚರ್ ಬೈಕ್ ಬಿಡುಗಡೆಯಾದರೆ ಕೆಟಿಎಂ ಮತ್ತು ಬಿಎಂಡಬ್ಲ್ಯು ಮೋಟೊರಾಡ್ ಬ್ರ್ಯಾಂಡ್‌ಗಳ 300 ಸಿಸಿ ಅಡ್ವೆಂಚರ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications