Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಫ್ಜೆಡ್ಎಸ್ ಡಾರ್ಕ್ ನೈಟ್ ಎಡಿಷನ್‌ನಲ್ಲಿ ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿದ ಯಮಹಾ
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಫ್‌ಜೆಡ್ಎಸ್ ಬೈಕಿನಲ್ಲಿ ನೈಟ್ ಎಡಿಷನ್ ಮಾದರಿಯ ಬಿಡುಗಡೆ ಮೂಲಕ ಮೊದಲ ಬ್ಲೂಟೂತ್ ಟೆಕ್ನಾಲಜಿ ಹೊಂದಿರುವ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಎಫ್ಜೆಡ್ಎಸ್ ಡಾರ್ಕ್ ನೈಟ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.07 ಲಕ್ಷ ಬೆಲೆ ಹೊಂದಿದ್ದು, ಯಮಹಾ ಕಂಪನಿಯು ಬಿಡುಗಡೆಗೊಳಿಸಿರುವ ಬ್ಲೂಟೂತ್ ಟೆಕ್ನಾಲಜಿಯನ್ನು 'ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ಎಂದು ಕರೆಯಲಾಗಿದೆ. ಯಮಹಾ ಕಂಪನಿಯು ಬ್ಲ್ಯೂಟೂತ್ ತಂತ್ರಜ್ಞಾನ ಹೊಂದಿರುವ ಎಫ್‌ಜೆಡ್ಎಸ್ ಡಾರ್ಕ್ ನೈಟ್ ಮಾದರಿಯನ್ನು ನವೆಂಬರ್ 1ರಿಂದ ಮಾರಾಟ ಮಾಡಲಿದ್ದು, ಹೊಸ ಬೈಕ್ ಖರೀದಿಗೆ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ.

ಮಧ್ಯಮ ಕ್ರಮಾಂಕದ ಬೈಕ್ ಮಾದರಿಗಳಲ್ಲಿ ಈಗಾಗಲೇ ಬಹುತೇಕ ಬೈಕ್ ಉತ್ಪಾದನಾ ಕಂಪನಿಗಳು ಕನೆಕ್ಟೆಡ್ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಇದೀಗ ಯಮಹಾ ಕಂಪನಿಯು ಕೂಡಾ ಎಫ್‍ಜೆಡ್ಎಸ್ ಮಾದರಿಯಲ್ಲಿ ಅಳವಡಿಸಿದೆ.

ಬ್ಲ್ಯೂಟೂತ್ ಟೆಕ್ನಾಲಜಿ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಮಾಡಿಕೊಳ್ಳುವ ಬೈಕ್ ಸವಾರರು ಸ್ಮಾರ್ಟ್ ಫೋನ್ ಮೂಲಕ ಬೈಕಿನ ಪ್ರಮುಖ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ನ್ಯಾವಿಗೇಷನ್ ಬಳಕೆಗೂ ಇದು ಸಾಕಷ್ಟು ಸಹಕಾರಿಯಾಗಿದೆ.

ಹೊಸ ಬ್ಲೂಟೂತ್ ಟೆಕ್ನಾಲಜಿ ನಂತರ ಎಫ್‌ಜೆಡ್ಎಸ್ ಬೈಕ್ ಮಾದರಿಯ ಬೆಲೆಯಲ್ಲಿ ರೂ. 2,500 ದಷ್ಟು ಹೆಚ್ಚಳವಾಗಿದ್ದು, ಬ್ಲೂಟೂತ್ ಇಲ್ಲದ ಸಾಮಾನ್ಯ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1,05,200 ಮತ್ತು ಹೊಸ ಬ್ಲೂಟೂಥ್ ಹೊಂದಿರುವ ಮಾದರಿಯು 1,07,700 ಬೆಲೆ ಹೊಂದಿದೆ.

ಬ್ಲೂಟೂತ್ ಟೆಕ್ನಾಲಜಿಯನ್ನು ಬಳಕೆ ಮಾಡುವ ಗ್ರಾಹಕರು 'ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ಮೊಬೈಲ್ ಆ್ಯಪ್ ಹೊಂದಿರಬೇಕಿದ್ದು, ಆ್ಯಪ್ ಮೂಲಕವೇ ಬೈಕಿನ ತಾಂತ್ರಿಕ ಅಂಶಗಳ ಡೇಟಾ ಸಂಗ್ರಹಿಸಿಕೊಳ್ಳಬಹುದಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಆ್ಯಪ್ ಮೂಲಕ ಬಳಕೆದಾರರು ಬೈಕ್ ನಿರ್ವಹಣೆ, ರೈಡಿಂಗ್ ಹಿಸ್ಟರಿ, ಬೈಕ್ ನಿಲುಗಡೆಯ ಸ್ಥಳ, ಇ-ಲಾಕ್ ಸೌಲಭ್ಯ, ಪಾರ್ಕಿಂಗ್ ರೆಡಾರ್ಡ್ ಜೊತೆಗೆ ರೈಡಿಂಗ್ ವೇಳೆ ಅಪಾಯದ ಮುನ್ಸೂಚನೆಗಳನ್ನು ತಿಳಿಸುವ ಫೀಚರ್ಸ್‌ಗಳಿವೆ.

ಆದರೆ ಹೊಸ ಬೈಕಿನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಫೀಚರ್ಸ್ ಜೋಡಿಸಿಲ್ಲವಾದರೂ ಕನೆಕ್ಟೆಡ್ ಫೀಚರ್ಸ್‌ಗಳಲ್ಲಿ ಬಹುತೇಕ ಸೌಲಭ್ಯಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಜೋಡಣೆ ಮಾಡಿದ್ದು, ಹೊಸ ಕನೆಕ್ಟ್ ಫೀಚರ್ಸ್ ಅನ್ನು ಎಫ್‌ಜೆಡ್ ಸರಣಿ ಬೈಕ್‌ಗಳನ್ನು ಜೋಡಣೆ ಮಾಡಬಹುದಾಗಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಸದ್ಯ ಎಫ್‌ಜೆಡ್ಎಸ್ ಮಾದರಿಯಲ್ಲಿ ಮಾತ್ರ ಜೋಡಣೆ ಮಾಡಿರುವ ಯಮಹಾ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಬಹುತೇಕ ದ್ವಿಚಕ್ರ ವಾಹನಗಳಲ್ಲಿ ಕನೆಕ್ಟೆಡ್ ಫೀಚರ್ಸ್ ಜೋಡಣೆ ಮಾಡುವ ಗುರಿಹೊಂದಿದ್ದು, ದೀಪಾವಳಿ ಹಿನ್ನಲೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಎಫ್‌ಜೆಡ್ಎಸ್ ಮೊದಲ ಹಂತವಾಗಿ ಜೋಡಣೆ ಮಾಡಿದೆ.