ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಯಮಹಾ ಕಂಪನಿಯು ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮ್ಯಾಕ್ಸಿ ಸ್ಕೂಟರ್ ಭಾರತದಲ್ಲಿಯೂ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಸ್ಕೂಟರ್‌ನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಭಾರತದಲ್ಲಿ ಆಟೋಮ್ಯಾಟಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ. ಹೆಚ್ಚು ಬಲಶಾಲಿಯಾದ ಎಂಜಿನ್ ಹಾಗೂ ದೊಡ್ಡ ಗಾತ್ರವನ್ನು ಹೊಂದಿರುವ ಮ್ಯಾಕ್ಸಿ ಎಂದು ಕರೆಯಲಾಗುವ ಸ್ಕೂಟರ್‌ಗಳ ಜನಪ್ರಿಯತೆಯು ಹೆಚ್ಚಾಗುತ್ತಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಜಪಾನ್‌ ಮೂಲದ ಯಮಹಾ ಕಂಪನಿಯು ಜಪಾನ್ ನಲ್ಲಿ ಮೆಜೆಸ್ಟಿ ಎಸ್ ಎಂಬ ಹೆಸರಿನ ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಆಕರ್ಷಕ ವಿನ್ಯಾಸದೊಂದಿಗೆ ಹಲವಾರು ವೈಶಿಷ್ಟ್ಯ ಹಾಗೂ ಶಕ್ತಿಯುತ ಎಂಜಿನ್ ಹೊಂದಿರುವ ಈ ಸ್ಕೂಟರ್ ಭಾರತೀಯರ ಗಮನ ಸೆಳೆದಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಯಮಹಾ ಸಹ ಒಂದು. ಭಾರತದಲ್ಲಿ ಯಮಹಾ ಕಂಪನಿಯು ಸಾಮಾನ್ಯ ವಿನ್ಯಾಸದ ವೈಶಿಷ್ಟ್ಯಗಳಿಗಿಂತ, ವಿಭಿನ್ನವಾದ ವಿನ್ಯಾಸದೊಂದಿಗೆ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ಯಮಹಾ ಸ್ಕೂಟರ್ ಯುವ ಜನರಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಯಮಹಾ ಕಂಪನಿಯು ಭಾರತದಲ್ಲಿಯೂ ಮೆಜೆಸ್ಟಿ ಎಸ್ ಸ್ಕೂಟರ್ ಅನ್ನು ಮಾರಾಟ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಮ್ಯಾಕ್ಸಿ ಈಗಾಗಲೇ ಭಾರತದಲ್ಲಿ ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಯಮಹಾ ಮೆಜೆಸ್ಟಿ ಎಸ್ ಸ್ಕೂಟರ್ ದೊಡ್ಡದಾದ ಏಪ್ರನ್ ಅನ್ನು ಹೊಂದಿದೆ. ಈ ಸ್ಕೂಟರ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲೈಟ್ ಹಾಗೂ ಎಲ್ಇಡಿ ಡೇಟೈಮ್ ಲೈಟಿಂಗ್ ಬಾರ್ ಗಳನ್ನು ಹೊಂದಿದೆ. ಈ ಸ್ಕೂಟರಿನ ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲೈಟ್ ಹಾಗೂ ರೇಲ್ ಹ್ಯಾಂಡಲ್ ಗಳಿವೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಈ ಸ್ಕೂಟರ್ ನಲ್ಲಿ ಅನಲಾಗ್ ಮೀಟರ್ ಹಾಗೂ ಡಿಜಿಟಲ್ ಡಿಸ್ ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ ಹೆಚ್ಚಿನ ಸ್ಪೇಸ್ ನೀಡಲಾಗಿದೆ. ಹೆಲ್ಮೆಟ್‌ಗಾಗಿ ದೊಡ್ಡ ಸ್ಟೋರೆಜ್ ಹಾಗೂ ವಾಟರ್ ಪ್ರೂಫ್ ಗಾಗಿ ಮುಂಭಾಗದಲ್ಲಿ ಪಾಕೆಟ್ ನೀಡಲಾಗಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಯಮಹಾ ಮೆಜೆಸ್ಟಿ ಎಸ್ ಸ್ಕೂಟರ್ ಮುಂಭಾಗದಲ್ಲಿ 267 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಇವುಗಳು ಈ ಬಲಶಾಲಿ ಸ್ಕೂಟರ್‌ಗೆ ಸಾಕಷ್ಟು ರಕ್ಷಣೆ ನೀಡುತ್ತವೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಈ ಸ್ಕೂಟರ್ ನಲ್ಲಿ 155 ಸಿಸಿ ಎಂಜಿನ್ ಅಳವಡಿಸಲಾಗಿದೆ. ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಈ ಎಂಜಿನ್ 13 ಬಿಹೆಚ್ ಪಿ ಪವರ್ ಹಾಗೂ 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್ ಪೆಟ್ರೋಲಿಗೆ 40 ಕಿ.ಮೀ ಮೈಲೇಜ್ ನೀಡಲಿದೆ ಎಂದು ವರದಿಯಾಗಿದೆ.

ಬಿಡುಗಡೆಯಾದ ಯಮಹಾ ಮ್ಯಾಕ್ಸಿ ಸ್ಕೂಟರ್

ಭಾರತದಲ್ಲಿ ಈ ಸ್ಕೂಟರ್ ಏಪ್ರಿಲಿಯಾ 160 ಎಸ್‌ಎಕ್ಸ್‌ಆರ್ ಸ್ಕೂಟರಿಗೆ ಪೈಪೋಟಿ ನೀಡಲಿದೆ. ಆದರೆ, ಯಮಹಾ ಮೆಜೆಸ್ಟಿ ಹೆಚ್ಚು ಶಕ್ತಿಶಾಲಿಯಾದ ಸ್ಕೂಟರ್ ಆಗಿದೆ.ಈ ಸ್ಕೂಟರ್ ಅನ್ನು ಫಿಲಿಪೈನ್ಸ್ ಹಾಗೂ ಮಲೇಷ್ಯಾದಲ್ಲಿಯೂ ಮಾರಾಟ ಮಾಡಲಾಗುತ್ತದೆ.

Article Published On: Tuesday, March 24, 2020, 16:39 [IST]
English summary
Yamaha Majesty S 155 CC Maxi scooter unveiled in Japan. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+