ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 400 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿಯು ತನ್ನ ಹೊಸ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕನ್ನು ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಜನಪ್ರಿಯ ಕವಾಸಕಿ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕ್ ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

ಹೊಸ ಕವಾಸಕಿ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕ್ ಮೆಟಲ್ ಟ್ವಿಲೈಟ್ ಬ್ಲೂ ಮತ್ತು ಮೆಟಲ್ ಡೀಪ್ ಗ್ರೇ ಎಂಬ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ. ಹೊಸ ಬಣ್ಣಗಳ ಸೇರ್ಪಡೆಯೊಂದಿಗೆ ನಿಂಜಾ 400 ಈಗ ಚೀನಾದಲ್ಲಿ ಒಟ್ಟು ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಹೊಸದಾಗಿ ಸೇರಿಸಲಾದ ಆಯ್ಕೆಗಳಲ್ಲದೆ ಬೈಕ್‌ಗೆ ಕೆಆರ್‌ಟಿ ಆವೃತ್ತಿ ಮತ್ತು ಮೆಟಲ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯ ಆವೃತ್ತಿಗಳು ಕೂಡ ಲಭ್ಯವಿದೆ.

ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಿದ ಕವಾಸಕಿ ನಿಂಜಾ 400 ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಗಳನ್ನು ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬಣ್ಣಗಳ ಆಯ್ಕೆಯು ಕವಾಸಕಿ ನಿಂಜಾ 400 ಬೈಕಿನ ಆಕರ್ಷಕ ಲುಕ್ ಅನ್ನು ಹೆಚ್ಚಿಸಿದೆ.

ಇನ್ನು ಹೊಸ ಕವಾಸಕಿ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್, ಸ್ಪ್ಲಿಟ್ ಸೀಟುಗಳು, ಏರೋಡೈನಾಮಿಕ್ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇನ್ನು ಈ ಬೈಕಿನಲ್ಲಿ 399 ಸಿಸಿ ಪ್ಯಾರೆಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 47.5 ಬಿಹೆಚ್‌ಪಿ ಪವರ್ ಮತ್ತು 37.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಳಾಗಿದೆ

2021ರ ನಿಂಜಾ 400 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಯುನಿ-ಟ್ರ್ಯಾಕ್ ಮೊನೊಶಾಕ್ ಸೆಟಪ್ ಸಸ್ಪಂಕ್ಷನ್ ಅನ್ನು ಅಳವಡಿಸಲಾಗಿದೆ.

ಇನ್ನು 2021ರ ನಿಂಜಾ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಕವಾಸಕಿ ನಿಂಜಾ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಪೋರ್ಟ್ಸ್ ಬೈಕುಗಳಲ್ಲಿ ಒಂದಾಗಿದೆ. ಇನ್ನು ಹೊಸ ನಿಂಜಾ 400 ಬೈಕನ್ನು ಕವಾಸಕಿ ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಕವಾಸಕಿ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕ್ ಮಾರಾಟವಾಗುತ್ತಿಲ್ಲ, ಕವಾಸಕಿ ಕಂಪನಿಯು ಈ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯನಿ ಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ.


Click it and Unblock the Notifications








