ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 650 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ತನ್ನ 2021ರ ನಿಂಜಾ 650 ಬೈಕನ್ನು ಜಪಾನ್ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ. ಈ ಹೊಸ ಕವಾಸಕಿ ನಿಂಜಾ 650 ಬೈಕ್ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿವೆ.

2021ರ ಕವಾಸಕಿ ನಿಂಜಾ 650 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್/ಮೆಟಾಲಿಕ್ ಇಂಪೀರಿಯಲ್ ರೆಡ್ ಮತ್ತು ಕೆಆರ್ಟಿ ಆವೃತ್ತಿಯ ಲೈಮ್ ಗ್ರೀನ್/ಎಬೊನಿ ಎಂಬ ಹೊಸ ಬಣ್ಣಗಳನ್ನು ಪಡೆದುಕೊಂಡಿವೆ. ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 650 ಬೈಕ್ ಲೈಮ್ ಗ್ರೀನ್, ಲೈಮ್ ಗ್ರೀನ್/ಎಬೊನಿ, ಮತ್ತು ಪರ್ಲ್ ಫ್ಲಾಟ್ ಸ್ಟಾರ್‌ಡಸ್ಟ್ ವೈಟ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಕವಾಸಕಿ ನಿಂಜಾ 650 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕಿನ ಫ್ಯೂಯಲ್ ಟ್ಯಾಂಕ್, ಫ್ರಂಟ್ ಫೆಂಡರ್ ಮತ್ತು ಇತರ ಕೆಲವು ಭಾಗಗಳಲ್ಲಿ ಲೈಮ್ ಗ್ರೀನ್ ಬಣ್ಣವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಕವಾಸಕಿ ನಿಂಜಾ 650 ಬೈಕ್ ಲೈಮ್ ಗ್ರೀನ್/ಎಬೊನಿ ಕೆಆರ್ಟಿ ಬಣ್ಣದ ಆಯ್ಕೆಯು ಸೂಪರ್ ಬೈಕ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ರೇಸಿಂಗ್ ಮಾಡಲು ಬಳಸಲಾಗುವ ಕವಾಸಕಿ ನಿಂಜಾ ಝಾಡ್‌ಎಕ್ಸ್ -10 ಆರ್‌ಆರ್ ಮಾದರಿಗೆ ಹೋಲುತ್ತದೆ.

ಇನ್ನು ಹೊಸ ಕವಾಸಕಿ ನಿಂಜಾ 650 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಆಗ್ರೇಸಿವ್ ಲುಕ್ ಹೊಂದಲು ಫೇರಿಂಗ್ ಅನ್ನು ನವೀಕರಿಸಲಾಗಿದೆ. ಇದು ಸ್ವಲ್ಪ ನವೀಕರಿಸಿದ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯನ್ನು ಹೊರತುಪಡಿಸಿ ಇತರ ಬದಲಾವಣೆಗಳಲ್ಲಿ. ಈ ಹೊಸ ನಿಂಝಾ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 8,000 ಆರ್‍ಪಿಎಂನಲ್ಲಿ 68 ಬಿಹೆಚ್‍ಪಿ ಪವರ್ ಹಾಗೂ 6,700 ಆರ್‍ಪಿಎಂನಲ್ಲಿ 65.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಬೈಕಿನಲ್ಲಿ ಎಲ್‍ಇಡಿ ಹೆಡ್‍ಲೈಟ್, 4.3 ಇಂಚಿನ ಟಿಎಫ್‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍ಸ್ಪೋರ್ಟ್ ಟಯರ್‍ಗಳಿವೆ.

ಈ ಬೈಕಿನಲ್ಲಿರುವ ಎಲ್‍ಇಡಿ ಹೆಡ್‍ಲೈಟ್ ಹಾಗೂ ಟಿಎಫ್‍ಟಿ ಇನ್ಸ್ ಟ್ರೂಮೆಂಟೆಷನ್ ಸ್ಕ್ರೀನ್‍ಗಳು ಈ ಬೈಕಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.

ಸಸ್ಪೆಂಷನ್‍ಗಳಿಗಾಗಿ 2021ರ ಕವಾಸಕಿ ನಿಂಜಾ 650 ಬೈಕಿನಲ್ಲಿ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ಗಳಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.


Click it and Unblock the Notifications








