ಭಾರತದಲ್ಲಿ ಬಿಡುಗಡೆಯಾಯ್ತು 2021ರ ಕವಾಸಕಿ ಝಡ್ ಹೆಚ್2, ಝಡ್ ಹೆಚ್2 ಎಸ್ಇ ಬೈಕುಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ 2021ರ ಸೂಪರ್ಚಾರ್ಜ್ಡ್ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳನ್ನು ಬಿಡುಗಡೆಗೊಳಿಸಿವೆ. ಕವಾಸಕಿಯು ಈ ಎರಡು ಬೈಕುಗಳನ್ನು ಕೆಲವು ನವೀಕರಿಣಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಹೊಸ ಸೂಪರ್ಚಾರ್ಜ್ಡ್ ಕವಾಸಕಿ ಬೈಕುಗಳ ಬೆಲೆಯ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ಝಡ್ ಹೆಚ್2 ಬೈಕಿನ ಬೆಲೆಯು ರೂ.21.90 ಲಕ್ಷ ಗಳಾಗಿದೆ. ಇನ್ನು ಕವಾಸಕಿ ಝಡ್ ಹೆಚ್2 ಎಸ್ಇ ಬೈಕಿನ ಬೆಲೆ ರೂ.25.90 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಎರಡು ಐಷಾರಾಮಿ ಬೈಕುಗಳು ಕಂಪನಿಯ ಹೊಸ ಸುಗೋಮಿ ವಿನ್ಯಾಸ ಶೈಲಿಯನ್ನು ಹೊಂದಿರುವುದು ವಿಶೇಷವಾಗಿದೆ.

ಹೊಸ ಕವಾಸಕಿ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿದೆ. ಈ ಬೈಕುಗಳಲ್ಲಿ ಟ್ರಿಲ್ಸ್ ಫ್ರೇಮ್, ಅಗ್ರೇಸಿವ್ ರೈಡಿಂಗ್ ಪೋಷಿಸನ್ ಮತ್ತು ಮುಂಭಾಗದಲ್ಲಿ ರಾಮ್-ಏರ್ ಇನ್ ಟೆಕ್ ಅನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಎರಡು ಬೈಕುಗಳು ಹೆಡ್‌ಲ್ಯಾಂಪ್ ಕೌಲ್‌ನಲ್ಲಿ ‘ಕವಾಸಕಿ ರಿವರ್ ಮಾರ್ಕ್' ಅನ್ನು ಸಹ ಹೊಂದಿವೆ ಇನ್ನು ಈ ಹೊಸ ಬೈಕುಗಳಲ್ಲಿ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ಗಳನ್ನು ಕೂಡ ಒಳಗೊಂಡಿರುತ್ತವೆ.

ಹೊಸ ಕವಾಸಕಿ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಡಿಆರ್ಎಲ್ ಗಳು, ಬ್ಲೂಟೂತ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯೊಂದಿಗೆ ಕಲರ್ ಟಿಎಫ್ಟಿ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ‘ರೈಡಾಲಜಿ' ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಇನ್ನು ಇದರೊಂದಿಗೆ ಫ್ಯಾಟ್-ಮಾದರಿಯ ಹ್ಯಾಂಡಲ್‌ಬಾರ್‌ಗಳು ಮತ್ತು ಸ್ವಿಚ್‌ಗಳು ಮತ್ತು ಇತರ ಫೀಚರ್ ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಬೈಕುಗಳ ಹೃದಯ ಭಾಗ ಎಂದು ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳಲ್ಲಿ ಒಂದೇ ರೀತಿಯ 998ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಸೂಪರ್ಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 11,000 ಆರ್‌ಪಿಎಂನಲ್ಲಿ 200 ಬಿಹೆಚ್‌ಪಿ ಮತ್ತು 8,500 ಆರ್‌ಪಿಎಂನಲ್ಲಿ 137 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಐಷಾರಾಮಿ ಮತ್ತು ದುಬಾರಿ ಕವಾಸಕಿ ಬೈಕುಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಇನವರ್ಡಡ್ ಫೋರ್ಕ್‌ಗಳ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ನೀಡಲಾಗಿದೆ.

ಹೊಸ ಕವಾಸಕಿ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದನ್ನು ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಬೆಂಬಲಿಸುತ್ತದೆ.

2021ರ ಕವಾಸಕಿ ಸೂಪರ್ಚಾರ್ಜ್ಡ್ ಝಡ್ ಹೆಚ್2 ಮತ್ತು ಝಡ್ ಹೆಚ್2 ಎಸ್ಇ ಬೈಕುಗಳು ಅತ್ಯಾಧುನಿಕ ಫೀಚರ್ ಗಳು ಮತ್ತು ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಕವಾಸಕಿ ಸೂಪರ್ ಬೈಕುಗಳು ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.


Click it and Unblock the Notifications








