2021ರ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಟೀಸರ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಅಪಾಚೆ ಆರ್‌ಆರ್ 310 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಟಿವಿಎಸ್ ಕಂಪನಿಯು ನವೀಕರಿಸಿದ ಹೊಸ ಅಪಾಚೆ ಆರ್‌ಆರ್ 310 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟಿವಿಎಸ್ ಕಂಪನಿಯು ಈ ಹೊಸ ಅಪಾಚೆ ಆರ್‌ಆರ್ 310 ಬೈಕಿನ ಬಿಡುಗಡೆಯ ದಿನಾಂಕದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಹೊಸ ಟಿವಿಎಸ್ ಬೈಕ್ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಕಂಪನಿಯು ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ ವಿನ್ಯಾಸಗೊಳಿಸಲಾದ ರೀತಿಯ ಹೆಡ್‌ಲ್ಯಾಂಪ್‌ನೊಂದಿಗೆ ಬರಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಈ ಬೈಕಿನಲ್ಲಿ ಕೆಲವು ಹೊಸ ಫೀಚರ್ ಗಳನ್ನು ಮತ್ತು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದೆ. ಈ ಅಪಾಚೆ ಆರ್‌ಆರ್ 310 ಬೈಕಿನಲ್ಲಿ ಅದೇ 312 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎಂಜಿನ್ 33.5 ಬಿಹೆಚ್‍ಪಿ ಪವರ್ ಮತ್ತು 27.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲಿ ಟಿವಿಎಸ್ ಸ್ಮಾರ್ಟ್ ತಂತ್ರಜ್ಞಾನ, ಥ್ರೊಟಲ್-ಬೈ-ವೈರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿರಲಿದೆ. ಈ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲಿ 5-ಇಂಚಿನ ಟಿಎಫ್‌ಟಿ ಕಲರ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಒಳಗೊಂಡಿದೆ. ಈ ಬೈಕಿನಲ್ಲಿ ಮೈಕೆಲಿನ್ ರೋಡ್5 ಟಯರುಗಳನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಬೈಕಿನಲ್ಲಿ ರೈನ್, ಅರ್ಬನ್, ಸ್ಪೋರ್ಟ್ ಮತ್ತು ಟ್ರ್ಯಾಕ್ ಎಂಬ ನಾಲ್ಕು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿಡೆ. ಈ ಬೈಕ್ 2.93 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ಪಡೆದುಕೊಳುತ್ತದೆ. ಇನ್ನು 0 ದಿಂದ 100 ಕಿ.ಮೀ ವೇಗವನ್ನು ಪಡೆಯಲು ಈ ಬೈಕ್ 7.17 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ಬೈಕಿನ ಫೀಚರ್ ಗಳನ್ನು ಇದರ ಹಿಂದಿನ ಮಾದರಿಗೆ ಹೋಲಿಸಿದರೆ, ಕೆಲವು ಹೊಸ ಫೀಚರ್ ಗಳನ್ನು ನೀಡಬಹುದು. ಈ ಬೈಕಿನಲ್ಲಿ ಆರ್‌ಟಿ-ಸ್ಲಿಪ್ಪರ್ ಕ್ಲಚ್, ಬೈ-ಎಲ್ಇಡಿ ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆರ್‌ಟಿ-ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

2021ರ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ.

ಇನ್ನು ಸುರಕ್ಷತೆಗೆ ಈ ಹೊಸ ಅಪಾಚೆ ಆರ್‌ಆರ್ 310 ಬೈಕಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿರುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ

2021ರ ಟಿವಿಎಸ್ ಅಪಾಚೆ ಆರ್‌ಆರ್ 310 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಬಳಿಕ ಕೆಟಿಎಂ ಆರ್‍ಸಿ 390, ಯಮಹಾ ಆರ್3 ಮತ್ತು ಕವಾಸಕಿ ನಿಂಜಾ 400 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications