ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ಇಂಡಿಯಾ ಹೊಸ ಮತ್ತು ನವೀಕರಿಸಿದ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿವೆ. ಈ ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಬೆಲೆಯು ರೂ. 1.07 ಲಕ್ಷಗಳಾದರೆ, ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಬೆಲೆಯು ರೂ.1.17 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಪುಣೆಯ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಎರಡು ಸ್ಕೂಟರ್‌ಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಿಗೆ ತೆರಳಿ ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ದೇಶಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿವೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಸಾಕಷ್ಟು ಸ್ಟೈಲಿಂಗ್ ನವೀಕರಣಗಳನ್ನು ಪಡೆಯುತ್ತವೆ ಆದರೆ ಒಟ್ಟಾರೆ ವಿನ್ಯಾಸವು ಸಾಕಷ್ಟು ಹೋಲುತ್ತದೆ. ಪ್ರಿ-ಫೇಸ್‌ಲಿಫ್ಟ್ ಮಾದರಿಯಂತೆ, ಹೊಸ ಎಪ್ರಿಲಿಯಾ ಎಸ್ಆರ್ 160ಸ್ಟ್ಯಾಂಡರ್ಡ್, ಕಾರ್ಬನ್ ಮತ್ತು ರೇಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ವಿನ್ಯಾಸವು RSV4 ಸೂಪರ್‌ಬೈಕ್‌ನಿಂದ ಪ್ರೇರಿತವಾಗಿದೆ. ಸ್ಕೂಟರ್‌ಗಳ 'ರೇಸ್' ಟ್ರಿಮ್ ಆರ್‌ಎಸ್-ಜಿಪಿ-ಪ್ರೇರಿತ ಬಾಡಿ ಗ್ರಾಫಿಕ್ಸ್ ಮತ್ತು ಹ್ಯಾಂಡ್ ಗಾರ್ಡ್‌ಗಳನ್ನು ಹೊಂದಿದೆ. ಈ ಎರಡೂ ಎರಡೂ ಮಾದರಿಗಳು ಹೊಸ ವಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ನಂತಹ ಅಂಶಗಳೊಂದಿಗೆ ಅಗ್ರೇಸಿವ್ ಆಗಿ ಕಾಣುತ್ತವೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಈ ಸ್ಕೂಟರ್‌ಗಳಲ್ಲಿ ಗ್ರ್ಯಾಬ್ ರೈಲ್‌ಗಳು ಮತ್ತು ಏಪ್ರನ್‌ಗಳನ್ನು ಸಹ ಪರಿಷ್ಕರಿಸಲಾಗಿದೆ. ಹಳೆಯ ಎಂಆರ್ಎಫ್ ಟೈರ್‌ಗಳನ್ನು CEAT ಯುನಿಟ್‌ಗಳೊಂದಿಗೆ ಬದಲಾಯಿಸಲಾಗಿದ್ದರೆ, ಸೀಟ್ ಸ್ಪ್ಲಿಟ್ ವಿನ್ಯಾಸವನ್ನು ಪಡೆಯುತ್ತದೆ. ಸ್ಕೂಟರ್‌ಗಳಿಗೆ ನಕಲ್ ಗಾರ್ಡ್‌ಗಳೂ ಇರುತ್ತವೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ನವೀಕರಿಸಿದ ಎಪ್ರಿಲಿಯಾ ಎಸ್‌ಆರ್ ಸ್ಕೂಟರ್‌ಗಳು ಬ್ಲೂ, ಮ್ಯಾಟ್ ಬ್ಲ್ಯಾಕ್, ಗ್ರೇ, ವೈಟ್ ಮತ್ತು ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿವೆ. ಎರಡೂ ಮಾದರಿಗಳು 14-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 6-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿವೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಸೀಟಿನ ಕೆಳಗಿರುವ ಸ್ಟೋರೇಜ್ ಸ್ಪೇಸ್ 11-ಲೀಟರ್ ಆಗಿದೆ. 2022 ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಅನ್ನು ಹೊಂದಿದ್ದರೆ, ಎಸ್ಆರ್ 160 ಸ್ಕೂಟರ್ CBS (ಕಾಂಬೈಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ, ಈ ಸ್ಕೂಟರ್‌ಗಳು SXR 160 ನಿಂದ ಎರವಲು ಪಡೆದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತವೆ. ಈ ಕ್ಲಸ್ಟರ್ ಟ್ಯಾಕೋಮೀಟರ್ ಜೊತೆಗೆ ಸ್ಫೀಡ್, ಪ್ರಯಾಣ ಮತ್ತು ಇಂಧನ ಬಳಕೆಗಾಗಿ ರೀಡ್‌ಔಟ್‌ಗಳನ್ನು ಪ್ರದರ್ಶಿಸುತ್ತದೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಈ ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಿಂದ ಯಾಂತ್ರಿಕ ವಿಶೇಷಣಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಮೊದಲಿಗೆ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ನಲ್ಲಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟ್ 160 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಈ ಎಂಜಿನ್ 7600 ಆರ್‌ಪಿಎಂನಲ್ಲಿ 10.9 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಹೊಸ ಎಸ್‌ಆರ್ 160 ಯುವ ಪೀಳಿಗೆಯ ಖರೀದಿದಾರರನ್ನು ಆಕರ್ಷಿಸುವಂತೆ ಆಗ್ರೇಸಿವ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇನ್ನು ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ನಲ್ಲಿ ಅದೇ 125 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 9.8 ಬಿಹೆಚ್‍ಪಿ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಬಿಡುಗಡೆಯ ಕುರಿತು ಪಿಯಾಜಿಯೊ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿಯಾಗೋ ಗ್ರಾಫಿ ಮಾತನಾಡಿ, ಹೊಸ ಎಪ್ರಿಲಿಯಾ ಎಸ್‌ಆರ್ ಶ್ರೇಣಿಯ ಬಿಡುಗಡೆಯನ್ನು ಘೋಷಿಸಲು ನನಗೆ ಅಪಾರ ಸಂತೋಷವಾಗಿದೆ. ಸ್ಕೂಟರ್‌ಗಳಲ್ಲಿ ದೊಡ್ಡ ವ್ಹೀಲ್ ಗಳ ನವೀನ ವಿನ್ಯಾಸವಾಗಿ ಎಪ್ರಿಲಿಯಾ ಎಸ್‌ಆರ್ ಈಗಾಗಲೇ ಎಪ್ರಿಲಿಯಾ ಅನುಭವವನ್ನು ಹುಡುಕುವವರ ವಿಭಾಗವನ್ನು ರಚಿಸಿದೆ ಎಂದು ಹೇಳಿದರು.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಎಪ್ರಿಲಿಯಾ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಆರ್‍ಎಸ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಈಗಾಗಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ಸಿಬಿಯು ಆಗಿ ಭಾರತಕ್ಕೆ ಬರುತ್ತಿದೆ ಮತ್ತು ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಆಸಿಡ್ ಗೋಲ್ಡ್ಮ್ ಅಪೆಕ್ಸ್ ಬ್ಲ್ಯಾಕ್ ಮತ್ತು ಲಾವಾ ರೆಡ್ ಆಗಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತದಲ್ಲಿ ಹೊಸ Aprilia SR 125, SR 160 ಸ್ಕೂಟರ್‌ಗಳು ಬಿಡುಗಡೆ

ಹೊಸ ಎಪ್ರಿಲಿಯಾ ಎಸ್ಆರ್ 160 ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಪ್ರೀಮಿಯಂ ಸ್ಕೂಟರ್ ಆಗಿದೆ. ಇನ್ನು ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಟ್ಟೆಯನ್ನು ಪ್ರವೇಶಿಸಿದೆ.

Most Read Articles

Kannada
English summary
Aprilia launched new sr 160 and sr 125 in india find here details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X