ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ Aprilia India ತನ್ನ ಬಹುನಿರೀಕ್ಷಿತ Tuono 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ Aprilia Tuono 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.09 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ ಹೊಸ Aprilia Tuono 660 ಬೈಕ್ ಕಾನ್ಸೆಪ್ಟ್ ಬ್ಲ್ಯಾಕ್, ಇರಿಡಿಯಮ್ ಗ್ರೇ ಮತ್ತು ಆಸಿಡ್ ಗೋಲ್ಡ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಶೀಘ್ರದಲ್ಲೇ ಈ ಹೊಸ ಬೈಕಿನ ವಿತರಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಹೊಸ Aprilia Tuono 660 ಈಗಾಗಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ ಹೊಸ Aprilia Tuono 660 ಬೈಕಿನಲ್ಲಿ ಲಿಕ್ವಿಡ್ ಕೂಲ್ಡ್, DOHC, ಪ್ಯಾರಲಲ್ ಟ್ವಿನ್ ಸಿಲಿಂಡರ್ 659 ಸಿಸಿ ಇಂಜಿನ್ ಅನು ಅಳವಡಿಸಲಾಗಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 94 ಬಿಹೆಚ್‍ಪಿ ಪವರ್ ಮತ್ತು 8,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಲಿಪ್-ಅಸಿಸ್ಟ್ ಕ್ಲಚ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ ಹೊಸ Aprilia Tuono 660 ಬೈಕ್ ವಿನ್ಯಾಸದಲ್ಲಿ ತನ್ನ ಸಹೋದರ RS 660 ಮಾದರಿಯನ್ನು ಆಧರಿಸಿದೆ. ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ದೊಡ್ಡ ಒಡಹುಟ್ಟಿದವರಾದ ಆರ್‌ಎಸ್‌ವಿ 4 ನಿಂದ ಅದರ ವಿನ್ಯಾಸ ಸ್ಫೂರ್ತಿ ಪಡೆದುಕೊಂಡಿದೆ, ಇದು ಬ್ರ್ಯಾಂಡ್‌ನ ವಿಶಿಷ್ಟವಾದ ಮೂರು-ಪಾಡ್ ಹೆಡ್‌ಲ್ಯಾಂಪ್ ಸೆಟಪ್ ನಿಂದ ಅಗ್ರೇಸಿವ್ ಮುಂಭಾಗದ ಫಾಸಿಕವನ್ನು ಹೊಂದಿದೆ,

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ Tuono 660 ಬೈಕ್ ಅಗ್ರೇಸಿವ್ ಆಗಿ ಕಾಣುವ ಸಂಪೂರ್ಣ ಫೇರಿಂಗ್ ಮತ್ತು ಆರ್‌ಎಸ್‌ವಿ 4 ನಲ್ಲಿ ಕಾಣುವಂತೆ ಏರೋ ವಿಂಗ್‌ಲೆಟ್‌ಗಳನ್ನು ಹೊಂದಿದೆ. ರೇಸ್-ಸ್ಪೆಕ್ ಶೈಲಿಯ ವಿಂಗ್‌ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಏರೋಡೈನಾಮಿಕ್ ಸ್ಥಿರತೆಯನ್ನು ನೀಡುತ್ತದೆ. ರಸ್ತೆ ಸವಾರಿ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ಸವಾರನು ನೇರವಾಗಿ ಕುಳಿತುಕೊಳ್ಳಬಹುದು.,

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ ಬೈಕಿನಲ್ಲಿ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ವಿಂಡ್‌ಸ್ಕ್ರೀನ್, ಅಂಡರ್‌ಬೆಲ್ಲಿ ಎಕ್ಸಾಸ್ಟ್, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಮತ್ತು ಈ ಬೈಕಿನಲ್ಲಿ 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ,

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

Aprilia Tuono 660 ಬೈಕ್ ಮತ್ತು RS 660 ಕೂಡ ಒಂದು ಟನ್ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಒಳಗೊಂಡಿದೆ, ಇದು 5 ರೈಡ್ ಮೋಡ್‌ಗಳನ್ನು ಒಳಗೊಂಡಿದೆ, ಅದರಲ್ಲಿ ಮೂರು ರೋಡ್ ಮೋಡ್ ಗಳು ಮತ್ತು ಎರಡು ಟ್ರ್ಯಾಕ್ ಬಳಕೆಗಾಗಿ ಮೀಸಲಾಗಿವೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಇತರ ರೈಡರ್ ಏಡ್ಸ್: ಎಪ್ರಿಲಿಯಾ ಟ್ರಾಕ್ಷನ್ ಕಂಟ್ರೋಲ್ (ಎಟಿಸಿ) ಎಪ್ರಿಲಿಯಾ ವೀಲೀ ಕಂಟ್ರೋಲ್ (ಎಡಬ್ಲ್ಯೂಸಿ) ಎಪ್ರಿಲಿಯಾ ಕ್ರೂಸ್ ಕಂಟ್ರೋಲ್ (ಎಸಿಸಿ) ಎಪ್ರಿಲಿಯಾ ಇಂಜಿನ್ ಬ್ರೇಕ್ (ಎಇಬಿ) ಎಪ್ರಿಲಿಯಾ ಎಂಜಿನ್ ಮ್ಯಾಪ್ (ಎಇಎಂ) ಮತ್ತು ಎಬಿಎಸ್ ಕಾರ್ನರ್ ಫಂಕ್ಷನ್ ಅನ್ನು ಒಳಗೊಂಡಿದೆ,

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಇದು 5-ಇಂಚಿನ TFT ಸ್ಪ್ಲಿಟ್-ಸ್ಕ್ರೀನ್ ಲೇಔಟ್ ಅನ್ನು ಸಹ ಒಳಗೊಂಡಿದೆ, ಇದು ಬೈಕಿನ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಂಪನಿಯು ಆಯ್ಕೆಯಾಗಿ Aprilia MIA ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿತ ತಂತ್ರಜ್ಞಾನಕ್ಕಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ನೀಡುತ್ತಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಹೊಸ Aprilia Tuono 660 ಬೈಕ್ ಡ್ಯುಯಲ್ ಬೀಮ್ ಚಾಸಿಸ್ ಹೊಂದಿದೆ. ಈ ಬೈಕಿನ ಆಯಾಮಗಳು, 1370 ಎಂಎಂ ಉದ್ದ: 1995 ಎಂಎಂ ಅಗಲ: 805 ಎಂಎಂ ಸೀಟ್ ಎತ್ತರವನ್ನು ಹೊಂದಿದೆ, ಇನ್ನು ಈ ಬೈಕ್ 183 ಕೆಜಿ ಕರ್ಬ್ ತೂಕವನ್ನು ಹೊಂದಿದೆ, ಹೊಸ Aprilia Tuono 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪರ್ಫಾಮೆನ್ಸ್ ಪ್ರಿಯರನ್ನು ಮತ್ತು ಯುವ ಗ್ರಾಹಕರನ್ನು ಸೆಳೆಯಬಹುದು.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ ಹೊಸ Aprilia RS 660 ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಕಯಾಬಾದ ಯುಎಸ್ಡಿ ಫೋರ್ಕ್ಸ್ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಈ ಎರಡು ಯುನಿಟ್ ಗಳು ಕಂಪ್ರೆಷನ್, ರೀಬೌಂಡ್ ಮತ್ತು ಪ್ರಿಲೋಡ್‌ಗಾಗಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಇನ್ನು ಪ್ರಮುಖವಾಗಿ ಈ ಹೊಸ ಪರ್ಫಾಮೆನ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಮುಂಭಾಗದಲ್ಲಿ 320 ಎಂಎಂ ಡ್ಯುಯಲ್-ಡಿಸ್ಕ್ ಬ್ರೇಕ್ ಬ್ರೋಮೊ ಫೋರ್-ಪಾಟ್ ರೇಡಿಯಲ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಬ್ರೆಂಬೊ ಕ್ಯಾಲಿಪರ್ಸ್ ನೀಡಲಾಗಿದೆ. ಇನ್ನು ಈ Aprilia Tuono 660 ಬೈಕಿನಲ್ಲಿ ಟೈರುಗಳು, ಮುಂಭಾಗ: 17-ಇಂಚಿನ ಅಲಾಯ್ ವ್ಹೀಲ್ ಗಳ ಜೊತೆ 120/70 ವಿಭಾಗ ಟೈರ್ ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳ ಜೊತೆ 180/55 ವಿಭಾಗದ ಟೈರ್ ಹೊಂದಿದೆ.

ಭಾರತದಲ್ಲಿ ಹೊಸ Aprilia Tuono 660 ಬೈಕ್ ಬಿಡುಗಡೆ: ಬೆಲೆ ರೂ.13.09 ಲಕ್ಷ

ಈ Aprilia Tuono 660 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಹೊಸ Aprilia RS 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪರ್ಫಾಮೆನ್ಸ್ ಪ್ರಿಯರನ್ನು ಮತ್ತು ಯುವ ಗ್ರಾಹಕರನ್ನು ಸೆಳೆಯಬಹುದು. ಈ Aprilia Tuono 660 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ CB650R, ಕವಾಸಕಿ Z650, ಟ್ರಯಂಫ್ ಟ್ರೈಡೆಂಟ್ 660 ಮತ್ತು KTM ಡ್ಯೂಕ್ 790 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, September 2, 2021, 20:13 [IST]
English summary
Aprilia launched new tuono 660 middle weight motorcycle in india price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+