ನಮ್ಮ ಬೆಂಗಳೂರಿನಲ್ಲಿ ಮೊದಲ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ದೇಶದಾದ್ಯಂತ ಇಂಧನ ಬೆಲೆಗಳು ದಿನಂಪ್ರತಿ ಹೆಚ್ಚಳವಾಗುತ್ತಿದ್ದು, ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಪ್ರಾಮುಖ್ಯತೆ ಕೂಡಾ ಹೆಚ್ಚಳವಾಗುತ್ತಿದೆ. ಹೀಗಾಗಿ ಇವಿ ವಾಹನಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇವಿ ವಾಹನಗಳ ಮಾರಾಟ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಗ್ರೀವ್ ಕಾಟನ್ ಕಂಪನಿಯು ಕೂಡಾ ಬೃಹತ್ ಯೋಜನೆ ರೂಪಿಸಿದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್‌ಗಳಲ್ಲಿ ಒಂದಾಗಿರುವ ನಮ್ಮ ಬೆಂಗಳೂರಿನಲ್ಲೂ ಇವಿ ವಾಹನಗಳ ಬಳಕೆಯು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಅನೇಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಇವಿ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬೆಂಗಳೂರು ಇದೀಗ ಅನೇಕ ಇವಿ ಸ್ಟಾರ್ಟ್-ಅಪ್‌ಗಳಿಗೆ ಪ್ರಮುಖ ನೆಲೆಯಾಗಿದ್ದು, ಪ್ರಮುಖ ಕಂಪನಿಗಳು ವಿವಿಧ ಹೊಸ ಇವಿ ಮಾರಾಟ ಮಾರಾಟ ಮಳಿಗೆಗಳನ್ನು ತೆರೆಯುತ್ತಿವೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಪ್ರಮುಖ ಇವಿ ಕಂಪನಿಗಳು ಈಗಾಗಲೇ ನಗರದಾದ್ಯಂತ ದೊಡ್ಡ ಮಟ್ಟದ ಮಾರಾಟ ಮಳಿಗೆಗಳ ಜಾಲ ವಿಸ್ತರಿಸುತ್ತಿದ್ದು, ಗ್ರಾಹಕರಿಗೆ ಸರಿಯಾದ ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಅರಿತಿರುವ ಭಾರತದ ಪ್ರಮುಖ ಎಂಜಿನಿಯರಿಂಗ್ ಕಂಪನಿ ಗ್ರೀವ್ಸ್ ಕಾಟನ್ ಒಂದೇ ಸೂರಿನಡಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಹೊಸ ಮಾದರಿಯ ಇವಿ ವಾಹನ ಮಾರಾಟ ಮಳಿಗೆಗಳನ್ನು ಆರಂಭಿಸಿದೆ.

ಗ್ರೀವ್ಸ್ ಕಾಟನ್ ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ವಿವಿಧ ಬ್ರಾಂಡ್‌ ಇವಿ ವಾಹನಗಳನ್ನು ಮಾರಾಟ ಮಾಡಲು ಆಟೋಇವಿಮಾರ್ಟ್(AtoEVMart) ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಬೆಂಗಳೂರಿನ ಕಲ್ಯಾಣ ನಗರದ 1ನೇ ಹಂತತದಲ್ಲಿರುವ ಹೆಚ್ಆರ್‌ಬಿಆರ್ ಲೇಔಟ್‌‌ನಲ್ಲಿ ಸುಮಾರು 8000 ಚದರ ಅಡಿಯಲ್ಲಿ ಹೊಸ ಮಾರಾಟ ಮಳಿಗೆ ಆರಂಭಗೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಆಟೋಇವಿಮಾರ್ಟ್ ಮಲ್ಟಿ ಬ್ರಾಂಡ್ ಮಾರಾಟ ಮಳಿಗೆಯಲ್ಲಿ ಪ್ರಮುಖ ಇವಿ ಉತ್ಪಾದನಾ ಕಂಪನಿಗಳಾದ ಆಂಪಿಯರ್, ಆಟೋ ಲೈನ್, ಬಾಲನ್ ಇಂಜಿನಿಯರಿಂಗ್, ಕ್ರೇಯಾನ್ ಮೋಟಾರ್ಸ್, ಡಿಟೆಲ್, ಹೀರೋ ಲೆಕ್ಟ್ರೋ, ಗೋ ಝೀರೋ, ಕೈನೆಟಿಕ್, ಎಂಎಲ್‌ಆರ್, ಒಮೆಗಾ ಸೀಕಿ ಮೊಬಿಲಿಟಿ, ರೋವೀಟ್ ಮತ್ತು ವೋಲ್ಟ್ರಾನ್ ನಿರ್ಮಾಣದ ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಸೈಕಲ್‌ಗಳು, ಇವಿ ಲೋಡರ್‌ಗಳು, ಇವಿ ಆಟೋಗಳ ವ್ಯಾಪಕ ಶ್ರೇಣಿ ಇಲ್ಲಿ ಖರೀದಿಗೆ ಲಭ್ಯವಿರಲಿದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಹೊಸ ಮಾರಾಟ ಮಳಿಗೆಯ ಮೂಲಕ ಗ್ರಾಹಕರಿಗೆ ವಿವಿಧ ವಾಹನಗಳ ಆಯ್ಕೆ ಮತ್ತು ಅನುಕೂಲತೆಯ ಸ್ವಾತಂತ್ರ್ಯ ನೀಡಲಾಗಿದ್ದು, ಹೊಸ ಮಾರಾಟ ಮಳಿಗೆಯಲ್ಲಿ ಆದ್ಯತೆ ಖರೀದಿಯ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಪಡೆದ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯದೊಂದಿಗೆ ವರ್ಧಿತ ಮೌಲ್ಯಗಳನ್ನು ಖಾತ್ರಿಗೊಳಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಹೆಚ್ಚುವರಿಯಾಗಿ ಆಟೋಇವಿಮಾರ್ಟ್ ಕಂಪನಿಯು ಗ್ರಾಹಕರಿಗೆ ರಸ್ತೆಬದಿಯ ನೆರವು, ಸಮಗ್ರ ಸೇವಾ ಪ್ಯಾಕೇಜ್‌ಗಳು ಮತ್ತು ಇ-ಮೊಬಿಲಿಟಿ ಬಿಡಿಭಾಗಗಳನ್ನು ಜಗಳ-ಮುಕ್ತ ಮಾಲೀಕತ್ವ ಖಾತ್ರಿಪಡಿಸಿಲಿದ್ದು, ಆಟೋಇವಿಮಾರ್ಟ್ ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗಾಗಿ ವರ್ಧಿತ ಸೇವೆಗಳು, ರೆಟ್ರೋಫಿಟ್ ಪರಿಕರಗಳ ಮೇಲೆ ಕೇಂದ್ರೀಕರಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಆಟೋಇವಿಮಾರ್ಟ್ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗಳ ಆರಂಭ ಕುರಿತಂತೆ ಮಾತನಾಡಿದ ಗ್ರೀವ್ ಆಟೋ ರಿಟೆಲ್ ಸಿಇಒ ವೈವಿಎಸ್ ವಿಜಯ್‌ಕುಮಾರ್ ಅವರು 'ನಮ್ಮ ಬೆಂಗಳೂರಿನಲ್ಲಿ ಮೊದಲ ಆಟೋಇವಿಮಾರ್ಟ್ ಮಾರಾಟ ಮಳಿಗೆಗಳ ಆರಂಭಿಸಿರುವುದಕ್ಕೆ ಸಾಕಷ್ಟು ಉತ್ಸುಕರಾಗಿದ್ದು, ಬೆಂಗಳೂರು ತಂತ್ರಜ್ಞಾನ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅಷ್ಟೇ ಮಹತ್ವದ ಪಾತ್ರವನ್ನು ವಹಿಸಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರೋತ್ಸಾಹಿಸುವುದು ಮತ್ತು ಕ್ಲೀನ್ ಮೊಬಿಲಿಟಿ ಪರಿಹಾರಗಳೊಂದಿಗೆ ಮುಂದುವರಿಯಲು ಇತರೆ ನಗರಗಳಿಗೆ ಇದು ಉದಾಹರಣೆಯಾಗಿದೆ' ಎಂದಿದ್ದಾರೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಗ್ರೀವ್ ಕಾಟನ್ ಕಂಪನಿಯು ಆಟೋಇವಿಮಾರ್ಟ್ ಮಳಿಗೆಯಲ್ಲಿ ಇ-ಸೈಕಲ್ ಮಾದರಿಗಳನ್ನು ರೂ. 23,299 ರಿಂದ ರೂ.54,999 ಬೆಲೆ ಅಂತರದಲ್ಲಿ ಮಾರಾಟ ಮಾಡುತ್ತಿದ್ದು, ಖರೀದಿಗೆ ಲಭ್ಯವಿರುವ ಹೊಸ ಇವಿ ಸೈಕಲ್ ಮಾದರಿಗಳು ಪ್ರತಿ ಚಾರ್ಜ್‌ಗೆ 25 ರಿಂದ 80 ಕಿ.ಮೀ ಮೈಲೇಜ್ ರೇಂಜ್ ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಕ್ರೇಯಾನ್ ಮೋಟಾರ್ಸ್, ಡಿಟೆಲ್, ರೋವೀಟ್ ಉತ್ಪನ್ನಗಳು ಪ್ರಮುಖವಾಗಿದ್ದು, ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 60 ರಿಂದ 120 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಹೊಸ ಇವಿ ಸ್ಕೂಟರ್‌ಗಳು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ರೂ.48 ಸಾವಿರದಿಂದ ರೂ. 1.38 ಲಕ್ಷ ಬೆಲೆ ಹೊಂದಿರಲಿವೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಆಟೋಇವಿಮಾರ್ಟ್ ಮಲ್ಟಿ ಬ್ರಾಂಡ್ ಮಾರಾಟ ಮಳಿಗೆಯಲ್ಲಿ ಇವಿ ವಾಣಿಜ್ಯ ವಾಹನಗಳ ಕೂಡಾ ಹೆಚ್ಚಿನ ಮಾದರಿಗಳನ್ನು ಒಳಗೊಂಡಿದ್ದು, ವಾಣಿಜ್ಯ ಬಳಕೆಯ ಇವಿ ತ್ರಿ ಚಕ್ರವಾಹನಗಳು ರೂ.1.83 ಲಕ್ಷದಿಂದ ರೂ. 8.17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಗ್ರೀವ್ಸ್ ಕಾಟನ್ಸ್ ಕಂಪನಿಯು ಸದ್ಯ ನಮ್ಮ ಬೆಂಗಳೂರಿನಲ್ಲಿ ಮಾತ್ರವೇ ಆಟೋಇವಿಮಾರ್ಟ್ ಮಲ್ಟಿ ಬ್ರಾಂಡ್ ಮಾರಾಟ ಮಳಿಗೆಯನ್ನು ಹೊಂದಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.

ನಮ್ಮ ಬೆಂಗಳೂರಿನಲ್ಲಿ ಮಲ್ಟಿ ಬ್ರಾಂಡ್ ಇವಿ ಮಾರಾಟ ಮಳಿಗೆಗೆ ಚಾಲನೆ ನೀಡಿದ ಆಟೋಇವಿಮಾರ್ಟ್

ಮಲ್ಟಿ ಬ್ರಾಂಡ್ ಮಾರಾಟ ಮಳಿಗೆಗಳಿಂದಾಗಿ ಸ್ಟಾರ್ಟ್ ಅಪ್ ಇವಿ ಕಂಪನಿಗಳು ದೇಶಾದ್ಯಂತ ಖರೀದಿಗೆ ಲಭ್ಯವಾಗಲು ಸಹಕಾರಿಯಾಗಿದ್ದು, ಗ್ರಾಹಕರಿಗೂ ಒಂದೇ ಸೂರಿನಡಿ ವಿವಿಧ ಮಾದರಿಗಳ ಖರೀದಿಗೆ ಸಹಕಾರಿಯಾಗಲಿದೆ.

Most Read Articles

Kannada
English summary
Autoevmart multi brand electric vehicle showroom opens in bengaluru details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X