ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ ಏರಿಕೆಯು ವಾಹನ ಸವಾರರನ್ನು ಪರದಾಡುವಂತೆ ಮಾಡಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಭಾರತದಲ್ಲಿ ಸದ್ಯಕ್ಕೆ ಎರಡು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇನ್ನುಳಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತವೆ. ಬಜಾಜ್ ಆಟೋ ಹಾಗೂ ಟಿವಿಎಸ್ ಮೋಟಾರ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮಾರಾಟ ಮಾಡಿದರೆ, ಟಿವಿಎಸ್ ಮೋಟಾರ್ ಕಂಪನಿಯು ಐಕ್ಯೂಬ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮಾರಾಟ ಮಾಡುತ್ತದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಇದರ ಜೊತೆಗೆ ಎಥರ್ ಎನರ್ಜಿಯಂತಹ ವಿವಿಧ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಆದರೆ ಬಜಾಜ್ ಹಾಗೂ ಟಿವಿಎಸ್ ಕಂಪನಿಗಳು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾಗಿದ್ದು, ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಮಾರಾಟ ಮಾಡುತ್ತಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಲೇಖನದಲ್ಲಿ ಈ ಎರಡು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದ ಅಂಕಿ ಅಂಶಗಳನ್ನು ನೋಡೋಣ. ಬಜಾಜ್ ಕಂಪನಿಯು ಜೂನ್ ತಿಂಗಳಿನಲ್ಲಿ ಒಟ್ಟು 452 ಯುನಿಟ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಕಂಪನಿಯು ಮೇ ತಿಂಗಳಿನಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಕೇವಲ 31 ಯುನಿಟ್'ಗಳನ್ನು ಮಾತ್ರ ಮಾರಾಟ ಮಾಡಿತ್ತು. ಇದೇ ವೇಳೆ ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನ 639 ಯುನಿಟ್'ಗಳನ್ನು ಮಾರಾಟ ಮಾಡಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಮೇ ತಿಂಗಳಿನಲ್ಲಿ ಈ ಪ್ರಮಾಣವು ಶೂನ್ಯವಾಗಿತ್ತು ಎಂಬುದು ಗಮನಾರ್ಹ. ಮೇ ತಿಂಗಳಿನಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಮಾರಾಟ ಮಾಡಲಿಲ್ಲ. ಬಜಾಜ್ ಹಾಗೂ ಟಿವಿಎಸ್ ಕಂಪನಿಗಳು ಜೂನ್‌ ತಿಂಗಳಿನಲ್ಲಿ ಒಟ್ಟಾರೆಯಾಗಿ ಒಟ್ಟು 1,091 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳ ಒಟ್ಟು ಮಾರಾಟವು ಒಂದು ಸಾವಿರ ಯುನಿಟ್ ಗಡಿ ದಾಟಿರುವುದು ಇದೇ ಮೊದಲು. ಭಾರತದಲ್ಲಿ ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈ ಎರಡು ಪ್ರಮುಖ ಕಂಪನಿಗಳ ಸ್ಕೂಟರ್‌ಗಳನ್ನು ಹೊರತುಪಡಿಸಿ ಬೇರೆ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಪ್ರಮಾಣವೂ ಸಹ ಹೆಚ್ಚಾಗುವ ಸಾಧ್ಯತೆಗಳಿವೆ. ಓಲಾ ಎಲೆಕ್ಟ್ರಿಕ್ ಶೀಘ್ರದಲ್ಲಿಯೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಬಜಾಜ್, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಈಗಾಗಲೇ ಓಲಾ ಎಲೆಕ್ಟ್ರಿಕ್ ಸ್ಕೂಟರಿನ ಬುಕ್ಕಿಂಗ್ ಆರಂಭವಾಗಿದೆ. ಈ ಸ್ಕೂಟರಿನ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಗಳಿವೆ.

More from DriveSpark

Article Published On: Wednesday, July 21, 2021, 15:56 [IST]
English summary
Bajaj Chetak and TVS iqube electric scooter sales increases in June-2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+