ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಬೈಕ್ ಟೀಸರ್ ಬಿಡುಗಡೆ
ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ.

ಇದೀಗ ಡುಕಾಟಿ ಇಂಡಿಯಾ ಕಂಪನಿಯು ಮಲ್ಟಿಸ್ಟ್ರಾಡಾ ವಿ4 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಸ್ಟ್ಯಾಂಡರ್ಡ್, ವಿ4ಎಸ್ ಮತ್ತು ವಿ4 ಎಸ್ ಸ್ಪೋರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಅಡ್ವೆಂಚರ್ ಟೂರರ್ ಬೈಕ್ ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಅಡ್ವೆಂಚರ್ ಟೂರರ್ ಬೈಕುಗಳಲ್ಲಿ ಒಂದಾಗಿದೆ.

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ನ್ಯಾವಿಗೇಷನ್ ಸಿಸ್ಟಂ ಡೈರಕ್ಷನಲ್, ಟಾರ್ಗೆಟ್ ರಿಚ್ ಆಗಲು ಉಳಿದಿರುವ ದೂರ ಮತ್ತು ಇತರ ಡೇಟಾದ ನಡುವೆ ಬರುವ ಅಂದಾಜು ಸಮಯದಂತಹ ವಿವಿಧ ಮಾಹಿತಿಗಳು ಪ್ರದರ್ಶಿಸುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಫೀಚರ್ ದೂರ ಸೆಟ್ಟಿಂಗ್‌ಗಳನ್ನು ತೋರಿಸುತ್ತದೆ. ಇನ್ನು ಸ್ವಿಚ್‌ಗಿಯರ್ ಫೀಚರ್ ಅನ್ನು ಕೂಡ ಒಳಗೊಡಿರುತ್ತದೆ.

ಈ ಹೊಸ ಡುಕಾಟಿ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್‌ಗಳು, ಫ್ರೇಮ್ ಪ್ರೊಟೆಕ್ಟರ್‌ಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಮೇಲಿರುವ ಜಿಪಿಎಸ್ ಮೌಂಟ್ಸ್ ಜೊತೆಗೆ 12 ವಿ ಚಾರ್ಜಿಂಗ್ ಸಾಕೆಟ್, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ರಿಯರ್ ಲಗೇಜ್ ರ್ಯಾಕ್ ಮತ್ತು ಅಪ್-ಸ್ವೀಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ 1,158 ಸಿಸಿ, ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 168 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರೊಂದಿಗೆ ರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಅಲ್ಯೂಮಿನಿಯಂ ಫ್ರೇಮ್ ಎರಡು ಬದಿಯ ಸ್ವಿಂಗ್ ಆರ್ಮ್ ಅನ್ನು ಹೊಂದಿದೆ.

ಈ ಹೊಸ ಡುಕಾಟಿ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 170 ಎಂಎಂ ಟ್ರ್ಯಾವೆಲ್ ಮತ್ತು ಹಿಂಭಾಗದಲ್ಲಿ 180 ಎಂಎಂ ಸೆಟಪ್ ಅನ್ನು ಹೊಂದಿದೆ.

ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 20 ಎಂಎಂ ಡ್ಯುಯಲ್-ಸೆಮಿ-ಫ್ಲೋಟಿಂಗ್ ಡಿಸ್ಕ್ ಗಳ ಜೊತೆಗೆ ರೇಡಿಯಲ್ ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಫೋರ್-ಪಿಸ್ಟನ್ ಕಾಲಿಪರ್ಸ್ ಮತ್ತು ಮುಂಭಾಗದಲ್ಲಿ ರೇಡಿಯಲ್ ಮಾಸ್ಟರ್ ಸಿಲಿಂಡರ್ ಬ್ರೇಕಿಂಗ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಜೊತೆಗೆ ಬ್ರೆಂಬೊ ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಅನ್ನು ಹೊಂದಿದೆ.

ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಡುಕಾಟಿ ಕಂಪನಿಯು ತನ್ನ ಮಲ್ಟಿಸ್ಟ್ರಾಡಾ ವಿ4 ಬೈಕನ್ನು ಬಿಡುಗಡೆಗೊಳಿಸಲು ಮುಂದಾಗಿದೆ.


Click it and Unblock the Notifications








