ಭಾರತದಲ್ಲಿ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಬಿಡುಗಡೆ: ಬೆಲೆ ರೂ.23.50 ಲಕ್ಷ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ತನ್ನ ಪಾನಿಗಲೆ ವಿ4 ಸೂಪರ್‌ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.23.50 ಲಕ್ಷ ಮತ್ತು ಹೈ-ಸ್ಪೆಕ್ ವಿ4 ಎಸ್ ರೂಪಾಂತರದ ಬೆಲೆಯು ರೂ.28.40 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಸೂಪರ್‌ಬೈಕ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಅದೇ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿವೆ. ಈ ಪಾನಿಗಲೆ ವಿ4 ಬೈಕ್ ವಿಂಗ್ಲೆಟ್ ಅನ್ನು ಪಡೆಯುತ್ತವೆ. ಇನ್ನು ಈ ಬೈಕ್ ಪ್ಲೆಕ್ಸಿಗ್ಲಾಸ್ ಹೆಡ್‌ಲ್ಯಾಂಪ್ ಮತ್ತು ಸೈಡ್ ಫೇರಿಂಗ್‌ಗಳನ್ನು ಸಹ ಪಡೆಯುತ್ತವೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಅದೇ 1,103ಸಿಸಿ, ಡೆನಿಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 214 ಬಿಹೆಚ್‌ಪಿ ಪವರ್ ಮತ್ತು 9,500 ಆರ್‌ಪಿಎಂನಲ್ಲಿ 124 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಟ್ರ್ಯಾಕ್‌ನಲ್ಲಿ ಸ್ಫೀಡ್ ಮತ್ತು ರೆಸ್ಪಾನ್ಸ್ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಏರೋಡೈನಾಮಿಕ್ ಮತ್ತು ಎಲೆಕ್ಟ್ರಾನಿಕ್ ಬದಲಾವಣೆಗಳ ಸರಣಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಡುಕಾಟಿ ಪಾನಿಗಲೆ ವಿ4 ಬೈಕಿನ ಏರೋಡೈನಾಮಿಕ್ ವಿ4 ಆರ್ ನಂತಹ ಪ್ಲೆಕ್ಸಿಗ್ಲಾಸ್ ಹೆಡ್‌ಲೈಟ್ ಫೇರಿಂಗ್ ಮತ್ತು ಸೈಡ್ ಫೇರಿಂಗ್‌ಗಳು, ರೇಡಿಯೇಟರ್ ಮೇಲೆ ಸಮರ್ಥ ಏರ್ ಫ್ಲೊ ಲ್ಯಾಟರಲ್ ಎಕ್ಸ್‌ಟ್ರಾಕ್ಟರ್‌ಗಳು ಮತ್ತು ವಿಂಗ್‌ಲೆಟ್‌ಗಳ ಪರಿಚಯದೊಂದಿಗೆ ನವೀಕರಿಸಲಾಯಿತು.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕ್ ಪ್ರೀಡೆಕ್ಟಿವ್ ಕಂಟ್ರೋಲ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ. ಇದನ್ನು ಸಿಕ್ಸ್-ಆಕ್ಸಿಸ್ ಐಎಂಯು ಯುನಿಟ್ ನೊಂದಿಗೆ ಲಿಂಕ್ ಮಾಡಲಾಗಿದೆ. ಈ ಸಿಸ್ಟಂ ಉತ್ತಮ ಸಹಕಾರಿಯಾಗಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಓಹ್ಲಿನ್ಸ್ ಎನ್ಐಎಕ್ಸ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟಿಟಿಎಕ್ಸ್ ಶಾಕ್ ಮತ್ತು ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್ ಅನ್ನು ಸಹ ಪಡೆಯುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳೊಂದಿಗೆ ಬ್ರೆಂಬೊ ಸ್ಟೈಲ್‌ಮಾ ಆರ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ನಲ್ಲಿ ಬಾಷ್ ಕಾರ್ನರಿಂಗ್ ಎಬಿಎಸ್, ವ್ಹೀಲಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್, ಬೈ-ಡೈರಕ್ಷನಲ್ ಕ್ವೀಕ್ ಶಿಪ್ಟರ್ ಮತ್ತು ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿವೆ.

ಹೊಸ ಡುಕಾಟಿ ಪಾನಿಗಲೆ ವಿ4 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ ಝಡ್ಎಕ್ಸ್ -10 ಆರ್, ಸುಜುಕಿ ಹಯಾಬುಸಾ ಮತ್ತು ಬಿಎಂಡಬ್ಲ್ಯು ಎಸ್ 1000 ಆರ್ಆರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








