ಪಾನಿಗಲೆ ವಿ4 ಸೂಪರ್‌ಬೈಕ್‌ಗಾಗಿ ಪರ್ಫಾಮೆನ್ಸ್ ಅಕ್ಸೆಸರೀಸ್ ಪರಿಚಯಿಸಿದ ಡುಕಾಟಿ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ತನ್ನ ಪಾನಿಗಲೆ ವಿ4 ಸೂಪರ್‌ಬೈಕ್‌ಗಾಗಿ ಪರ್ಫಾಮೆನ್ಸ್ ಅಕ್ಸೆಸರೀಸ್ ಅನ್ನು ಪರಿಚಯಿಸಿದೆ. ಡುಕಾಟಿ ಪಾನಿಗಲೆ ವಿ4 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಂತ್ಯತ ಜನಪ್ರಿಯ ಸೂಪರ್‌ಬೈಕ್‌ಗಳಲ್ಲಿ ಒಂದಾಗಿದೆ.

ಡುಕಾಟಿ ಪಾನಿಗಲೆ ವಿ4 ಪರ್ಫಾಮೆನ್ಸ್ ಅಕ್ಸೆಸರೀಸ್ ಗಳನ್ನು ಸೆಂಟ್ರೊ ಸ್ಟೈಲ್ ಡುಕಾಟಿ ವಿನ್ಯಾಸಗೊಳಿಸಿದ್ದು, ಗರಿಷ್ಠ ಪರ್ಫಾಮೆನ್ಸ್ ಖಚಿತಪಡಿಸಿಕೊಳ್ಳಲು ಮತ್ತು ಬೈಕಿಗೆ ವಿಶಿಷ್ಟ ರೇಸಿಂಗ್ ಲುಕ್ ಅನ್ನು ನೀಡಿದೆ. ಈ ಪರ್ಫಾಮೆನ್ಸ್ ಅಕ್ಸೆಸರೀಸ್ ಪಟ್ಟಿಯಲ್ಲಿ ಸೂಪರ್‌ಬೈಕ್ ವಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಕಾಟ್ ರೆಡ್ಡಿಂಗ್ ಮತ್ತು ಮೈಕೆಲ್ ರಿನಾಲ್ಡಿ ಬಳಸಿದ ಪ್ಯಾನಿಗಲೆ ವಿ4 ಆರ್ ಮೇಲೆ ಅಳವಡಿಸಲಾಗಿರುವ ಎಕ್ಸಾಸ್ಟ್ ಅನ್ನು ಆಧರಿಸಿ ಡುಕಾಟಿ ಕಾರ್ಸ್ ತಂತ್ರಜ್ಞರು ಅಭಿವೃದ್ಧಿಪಡಿಸಿದ ಸಂಪೂರ್ಣ ಟೈಟಾನಿಯಂ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ ಸಹ ಸೇರಿದೆ.

ಇನ್ನು ಹೊಂದಾಣಿಕೆ ರಿಜೋಮಾ ಅಲ್ಯೂಮಿನಿಯಂ ಫುಟ್‌ಪೆಗ್‌ಗಳು, ಇದು ಸವಾನಿಗೆ ತಮ್ಮ ಎಲ್ಲಾ ರೀತಿಯ ರೈಡಿಂಗ್ ಶೈಲಿಗೆ ನೆರವಾಗುತ್ತಿದೆ. ರೈಡಿಂಗ್ ಮಾಡುವಾಗ ಸ್ಥಿರತೆಯನ್ನು ಹೆಚ್ಚಿಸಲು ಆರಾಮದಾಯಕ ಅನುಭವ ನೀಡುವ ಸೀಟ್ ಅನ್ನು ಹೊಂದಿದೆ.

ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕಿನ ಪರ್ಫಾಮೆನ್ಸ್ ಅಕ್ಸೆಸರೀಸ್ ತನ್ನ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಡೀಲರುಗಳಿಂದ ಖರೀದಿಸಬಹುದು ಎಂದು ಡುಕಾಟಿ ಹೇಳಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಡುಕಾಟಿ ಶೋರೂಂಗಳಿಗೆ ಭೇಟಿ ನೀಡಬಹುದು.

ಡುಕಾಟಿ ತನ್ನ ಪಾನಿಗಲೆ ವಿ4 ಸೂಪರ್‌ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಅದೇ 1,103ಸಿಸಿ, ಡೆನಿಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 214 ಬಿಹೆಚ್‌ಪಿ ಪವರ್ ಮತ್ತು 9,500 ಆರ್‌ಪಿಎಂನಲ್ಲಿ 124 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಟ್ರ್ಯಾಕ್‌ನಲ್ಲಿ ಸ್ಫೀಡ್ ಮತ್ತು ರೆಸ್ಪಾನ್ಸ್ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಏರೋಡೈನಾಮಿಕ್ ಮತ್ತು ಎಲೆಕ್ಟ್ರಾನಿಕ್ ಬದಲಾವಣೆಗಳ ಸರಣಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಡುಕಾಟಿ ಪಾನಿಗಲೆ ವಿ4 ಬೈಕಿನ ಏರೋಡೈನಾಮಿಕ್ ವಿ4 ಆರ್ ನಂತಹ ಪ್ಲೆಕ್ಸಿಗ್ಲಾಸ್ ಹೆಡ್‌ಲೈಟ್ ಫೇರಿಂಗ್ ಮತ್ತು ಸೈಡ್ ಫೇರಿಂಗ್‌ಗಳು, ರೇಡಿಯೇಟರ್ ಮೇಲೆ ಸಮರ್ಥ ಏರ್ ಫ್ಲೊ ಲ್ಯಾಟರಲ್ ಎಕ್ಸ್‌ಟ್ರಾಕ್ಟರ್‌ಗಳು ಮತ್ತು ವಿಂಗ್‌ಲೆಟ್‌ಗಳ ಪರಿಚಯದೊಂದಿಗೆ ನವೀಕರಿಸಲಾಗಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕ್ ಪ್ರೀಡೆಕ್ಟಿವ್ ಕಂಟ್ರೋಲ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ. ಇದನ್ನು ಸಿಕ್ಸ್-ಆಕ್ಸಿಸ್ ಐಎಂಯು ಯುನಿಟ್ ನೊಂದಿಗೆ ಲಿಂಕ್ ಮಾಡಲಾಗಿದೆ. ಈ ಸಿಸ್ಟಂ ಉತ್ತಮ ಸಹಕಾರಿಯಾಗಿದೆ.

ಈ ಹೊಸ ಡುಕಾಟಿ ಪಾನಿಗಲೆ ವಿ4 ಸೂಪರ್‌ಬೈಕ್ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ನಲ್ಲಿ ಬಾಷ್ ಕಾರ್ನರಿಂಗ್ ಎಬಿಎಸ್, ವ್ಹೀಲಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್, ಬೈ-ಡೈರಕ್ಷನಲ್ ಕ್ವೀಕ್ ಶಿಪ್ಟರ್ ಮತ್ತು ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿವೆ.


Click it and Unblock the Notifications








