ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ತನ್ನ ಪಾನಿಗಲೆ ವಿ4 ಸೂಪರ್‌ಬೈಕ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಡುಕಾಟಿ ಈ ಬಿಎಸ್6 ಪಾನಿಗಲೆ ವಿ4 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಡುಕಾಟಿ ಭಾರತೀಯ ಮಾರುಕಟ್ಟೆಯಲ್ಲಿ ಎಸ್6 ಪಾನಿಗಲೆ ವಿ4 ಜೊತೆ ಡಯಾವೆಲ್ 1260 ಬೈಕನ್ನು ಕೂಡ ಬಿಡುಗಡೆಗೊಳಿಸಲಿದೆ. ಎರಡು ಬೈಕ್ ಗಳು ಕೂಡ ಮುಂದಿನ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತದೆ. ಕೆಲವು ಡುಕಾಟಿಯ ಡೀಲರುಗಳು ಈಗಾಗಲೇ ಈ ಹೊಸ ಪಾನಿಗಲೆ ವಿ4 ಬೈಕಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ವಿ4 ಮತ್ತು ವಿ4 ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಅದೇ 1,103ಸಿಸಿ, ಡೆನಿಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 208 ಬಿಹೆಚ್‌ಪಿ ಪವರ್ ಮತ್ತು 9,500 ಆರ್‌ಪಿಎಂನಲ್ಲಿ 124 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಡುಕಾಟಿ ಪಾನಿಗಲೆ ವಿ4 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಓಹ್ಲಿನ್ಸ್ ಎನ್ಐಎಕ್ಸ್ 30 ಫೋರ್ಕ್ ಮತ್ತು ಹಿಂಭಾಗದಲ್ಲಿ ಟಿಟಿಎಕ್ಸ್ 36 ಶಾಕ್ ಮತ್ತು ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್ ಅನ್ನು ಸಹ ಪಡೆಯುತ್ತದೆ.

ಹೊಸ ಡುಕಾಟಿ ಪಾನಿಗಲೆ ಎಸ್‌ಪಿ ಫೈಬರ್ ರಿಮ್ಸ್ ಮತ್ತು ಇತರ ಕಾರ್ಬನ್ ಫೈಬರ್ ಬಿಟ್‌ಗಳನ್ನು ಸಹ ಪಡೆಯುತ್ತದೆ, ಇನ್ನು ಈ ಹೊಸ ಬೈಕ್ 30 ಕಿ.ಗ್ರಾಂ ಡೌನ್‌ಫೋರ್ಸ್ ಅನ್ನು 270 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ರೇಸಿಂಗ್ ವಿಂಡ್‌ಸ್ಕ್ರೀನ್' ಅನ್ನು ನೀಡುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳೊಂದಿಗೆ ಬ್ರೆಂಬೊ ಸ್ಟೈಲ್‌ಮಾ ಆರ್ ಕ್ಯಾಲಿಪರ್‌ಗಳನ್ನು ಹೊಂದಿವೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ನಲ್ಲಿ ಬಾಷ್ ಕಾರ್ನರಿಂಗ್ ಎಬಿಎಸ್, ವ್ಹೀಲಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್, ಬೈ-ಡೈರಕ್ಷನಲ್ ಕ್ವೀಕ್ ಶಿಪ್ಟರ್ ಮತ್ತು ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿವೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಇತ್ತೀಚೆಗೆ ಡುಕಾಟಿ ತನ್ನ ಹೊಸ ಡಯಾವೆಲ್ 1260 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿತು. ಬಿಎಸ್-6 ಡುಕಾಟಿ ಡಯಾವೆಲ್ ಬೈಕ್ ಸ್ಟ್ಯಾಂಡರ್ಡ್ ಮತ್ತು 'ಎಸ್' ಎರಡೂ ರೂಪಾಂತರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಹಿಂದಿನ ಮಾದರಿಗಿಂತ ದುಬಾರಿಯಾಗಿರುತ್ತದೆ. ಈ ಬಹುನಿರೀಕ್ಷಿತ ಡುಕಾಟಿ ಪಾನಿಗಲೆ ವಿ4 ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಸೂಪರ್‌ಬೈಕ್ ಗಳಲ್ಲಿ ಒಂದಾಗಿದೆ.


Click it and Unblock the Notifications








