ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೊಸ ಸ್ಕ್ರ್ಯಾಂಬ್ಲರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟಿಸರ್ ನಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್ ಇದೇ ತಿಂಗಳ 10ರಂದು ಅನಾವರಣವಾಗಲಿದೆ ಎಂದು ತಿಳಿಸಿದೆ.

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಟೀಸರ್ ಚಿತ್ರದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್ ಆಫ್-ರೋಡಿಂಗ್ ಸಾಮರ್ಥ್ಯ ಪ್ರದರ್ಶಿಸುವಂತಿದೆ. ಇದು ಮರಭೂಮಿಯಲ್ಲಿ ಬೈಕ್ ಮರಳನ್ನು ಆರಿಸುತ್ತ ಮುನ್ನುಗುವ ಚಿತ್ರವಾಗಿದೆ. ಡುಕಾಟಿ ಈಗಾಗಲೇ 2021ರ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ 800 ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಅನಾವರಣಗೊಳಿಸಿದ್ದರು. ಹೊಸ ಮಾದರಿಯು ಈಗಿರುವ ಬೈಕ್ ಗಿಂತ ಹೆಚ್ಚಿನ ಆಫ್-ರೋಡ್ ಫೋಕಸ್ಡ್ ಆವೃತ್ತಿಯಾಗಿದೆ.

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸ ಬೈಕಿನ ಮುಂಭಾಗದಲ್ಲಿ ದೊಡ್ಡ ವ್ಹೀಲ್ ಮತ್ತು ಹೆಚ್ಚಿನ ಸಸ್ಪೆಂಕ್ಷನ್ ಟ್ರ್ಯಾವೆಲ್ ಹೊಂದಿದೆ. ಡುಕಾಟಿ ಡಸರ್ಟ್ ಸ್ಲೆಡ್‌ನ ಟಾಪ್ ಸ್ಪೆಕ್ ಅನ್ನು ಆವೃತ್ತಿಯನ್ನು ಅನಾವರಣಗೊಳಿಸುವ ಸಾಧ್ಯತೆಯೂ ಇದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಡುಕಾಟಿ ಕಂಪನಿಯು ಹೊಸ ಸ್ಕ್ರ್ಯಾಂಬ್ಲರ್ ಬೈಕನ್ನು 1100ಸಿ ವಿಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ, ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಮಾದರಿಯು ಬಿಡುಗಡೆಯಾದ ಬಳಿಕ ಟ್ರಯಂಫ್ ಸ್ಕ್ರ್ಯಾಂಬ್ಲರ್ 1200 ಮತ್ತು ಬಿಎಂಡಬ್ಲ್ಯು ಆರ್ ನೈನ್ ಟಿ ಸ್ಕ್ರ್ಯಾಂಬ್ಲರ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಡುಕಾಟಿ ಕಂಪನಿಯು ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಬೈಕಿನ ಟಾಪ್ ಸ್ಪೆಕ್ ಬಿಡುಗಡೆಗೊಳಿಸಿದರೆ, ಅದು ಕಂಪನಿಯ ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಆದರೆ ಆಫ್-ರೋಡ್ ಬಯಾಸ್ಡ್ ಮಾದರಿಯು ಸ್ಕ್ರ್ಯಾಂಬ್ಲರ್ 1100 ಗಿಂತ ಹೆಚ್ಚಿನ ಸಸ್ಪೆಂಕ್ಷನ್ ಟ್ರ್ಯಾವೆಲ್ ಅನ್ನು ಹೊಂದಿರುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಡುಕಾಟಿ ತನ್ನ ಸ್ಕ್ರ್ಯಾಂಬ್ಲರ್ ಸರಣಿಯ ಹೊಸ ವೆರಿಯೆಂಟ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದನ್ನು ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಎಂದು ಕರೆಯಲಾಗುತ್ತದೆ. ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣಗಳನ್ನು ಒಳಗೊಂಡಿದೆ.

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಕೆಫೆ ರೇಸರ್ ಮತ್ತು ಫುಲ್ ಥ್ರೊಟಲ್ ವೆರಿಯೆಂಟ್ ಗಳನ್ನು ಬದಲಾಯಿಸಿ ನೈಟ್‌ಶಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಈ ಎರಡು ರೂಪಾಂತರಗಳ ಮಿಶ್ರಣ ನೈಟ್‌ಶಿಫ್ಟ್ ವೆರಿಯೆಂಟ್ ಎಂದು ಹೇಳಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಇನ್ನು ಡುಕಾಟಿ ಸ್ಕ್ರ್ಯಾಂಬ್ಲರ್ 1100 ಡಾರ್ಕ್ ಪ್ರೊ ಬೈಕುಗಳಲ್ಲಿ 1079 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 85 ಬಿಹೆಚ್‌ಪಿ ಮತ್ತು 4,750 ಆರ್‌ಪಿಎಂನಲ್ಲಿ 88 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅನಾವರಣವಾಗಲಿದೆ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್

ಡುಕಾಟಿ ಕಂಪನಿಯು ಮಾರುಕಟ್ಟೆಗೆ ತನ್ನ ಹೊಸ ಸ್ಕ್ರ್ಯಾಂಬ್ಲರ್ ಬೈಕನ್ನು ಪರಿಚಯಿಸಲು ಸಜ್ಜಾಗಿದೆ. ಇದೇ ತಿಂಗಳ 10ರಂದು ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್ ಅನಾವರಣವಾಗಲಿದೆ. ಆಫ್-ರೋಡ್ ಪ್ರಿಯರು ಸಾಕಷ್ಟು ಕುತೂಹಲದಿಂದ ಈ ಬೈಕಿಗಾಗಿ ಕಾಯುತ್ತಿದ್ದಾರೆ.

More from DriveSpark

Article Published On: Monday, March 8, 2021, 20:18 [IST]
English summary
New Ducati Scrambler To Be revealed On March 10. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+