ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ದುಬಾರಿ ಇಂಧನ ದರ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಮುಂಬೈ ಮೂಲದ ಅರ್ಥ್ ಎನರ್ಜಿ(Earth Energy) ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಇವಿ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಕಂಪನಿಯು ಇವಿ ವಾಹನ ಮಾರಾಟ ಆರಂಭಿಸಿದ ಕೆಲವೇ ತಿಂಗಳಿನಲ್ಲಿ ಸಾಕಷ್ಟು ಪ್ರಮಾಣದ ಬೇಡಿಕೆ ದಾಖಲಿಸಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಅರ್ಥ್ ಎನರ್ಜಿ ಕಂಪನಿಯು ಇವಿ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಮಾರಾಟ ಆರಂಭಿಸಿದ ನಂತರ ಸುಮಾರು 37 ಸಾವಿರ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಿದ್ದು, ಸದ್ಯಕ್ಕೆ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ಕೆಲವು ಕೆಲವು ಮಾರಾಟ ಮಳಿಗೆಗಳನ್ನು ಹೊಂದಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಸೀಮಿತವಾದ ಮಾರುಕಟ್ಟೆ ಸೌಲಭ್ಯದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಅರ್ಥ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗುತ್ತಿದ್ದು, 2022ರ ವೇಳೆಗೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಮುಂಬೈನಲ್ಲಿಯೇ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿರುವ ಅರ್ಥ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಂದು ಸ್ಕೂಟರ್ ಮತ್ತು ಎರಡು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಅರ್ಥ್ ಎನರ್ಜಿ ಕಂಪನಿಯು ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಪ್ರೀಮಿಯಂ ಸೌಲಭ್ಯ ಹೊಂದಿರುವ ಎರಡು ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಪರಿಚಯಿಸಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಗರಿಷ್ಠ ಶೇ.96 ರಷ್ಟು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಂಡ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಅರ್ಥ್ ಎನರ್ಜಿ ಕಂಪನಿಯು ಗ್ಲೆಡೆ ಪ್ಲಸ್ ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮತ್ತು ಇವೊಲ್ವೆ ಎನ್ನುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ್ದು, ಇವೊಲ್ವೆ ಮೋಟಾರ್‌ಸೈಕಲ್ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಇವೊಲ್ವೆ ಜೆಡ್ ಮತ್ತು ಇವೊಲ್ವೆ ಆರ್ ಎನ್ನುವ ಎರಡು ಮಾದರಿಗಳನ್ನು ಹೊಂದಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಗ್ಲೆಡೆ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.4 W ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 92 ಸಾವಿರ ಬೆಲೆ ಹೊಂದಿರುವ ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್ ಆದಲ್ಲಿ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಇವೊಲ್ವೆ ಜೆಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯು ಸ್ಟೋರ್ಟಿ ವಿನ್ಯಾಸದೊಂದಿಗೆ 96 ಎಹೆಚ್ ಲೀ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.1.30 ಲಕ್ಷ ಬೆಲೆ ಹೊಂದಿರುವ ಈ ಬೈಕ್ 95 ಕಿಮಿ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಇನ್ನು ಟಾಪ್ ಎಂಡ್ ಮಾದರಿಯಾದ ಇವೊಲ್ವೆ ಆರ್ ಮೋಟಾರ್‌ಸೈಕಲ್ ಆವೃತ್ತಿಯು ಪ್ರೀಮಿಯಂ ಸೌಲಭ್ಯಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ.1.42 ಲಕ್ಷ ಬೆಲೆ ಹೊಂದಿದ್ದು, 105 ಕಿಮಿ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಸದ್ಯಕ್ಕೆ ಮೂರು ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡಿರುವ ಅರ್ಥ್ ಎನರ್ಜಿಯು 2022ರ ಅಂತ್ಯಕ್ಕೆ ಒಟ್ಟು ಆರು ದ್ವಿಚಕ್ರ ವಾಹನಗಳ ಮಾರಾಟ ಹೊಂದಿರಲಿದ್ದು, 15 ಸಾವಿರ ಯುನಿಟ್ ಇವಿ ವಾಹನ ಮಾರಾಟ ಗುರಿಹೊಂದಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ಹೊಸ ವಾಹನಗಳಲ್ಲಿ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಬಿ ಟು ಬಿ ಉದ್ದೇಶಗಳಿಗೆ ಪೂರೈಕೆ ಮಾಡುವ ಯೋಜನೆ ಹೊಂದಿರುವ ಅರ್ಥ್ ಎನರ್ಜಿ ಕಂಪನಿಯು ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಜಾಲ ವಿಸ್ತರಿಸುವ ಯೋಜನೆ ಹೊಂದಿದೆ.

ಇಂಧನ ದರ ಏರಿಕೆ ಪರಿಣಾಮ Earth Energy ಇವಿ ಮಾದರಿಗಳಿಗೆ ಭರ್ಜರಿ ಬೇಡಿಕೆ

ದೇಶಾದ್ಯಂತ ಇವಿ ವಾಹನ ಮಾರಾಟವು ಹೆಚ್ಚುತ್ತಿರುವುದರಿಂದ ದೇಶಾದ್ಯಂತ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿರುವ ಅರ್ಥ್ ಎನರ್ಜಿ ಕಂಪನಿಯು ಹೊಸ ಯೋಜನೆಗಾಗಿ ಹೂಡಿಕೆದಾರರನ್ನು ಎದುರು ನೋಡುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಬಂಡವಾಳದೊಂದಿಗೆ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡಲಿದೆ.

More from DriveSpark

Article Published On: Monday, October 18, 2021, 17:00 [IST]
English summary
Earth energy ev received huge number of pre order for electric vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+