ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ಮೊಬಿಲಿಟಿ ಪ್ಲಾಟ್ ಫಾರಂ ಆದ eBikeGo, ಸ್ಪ್ಯಾನಿಷ್ ಮೂಲದ ಸ್ಮಾರ್ಟ್ ಎಲೆಕ್ಟ್ರಿಕ್ ಕಂಪನಿಯ Velocipedo ಟ್ರೈಕ್'ನ ಉತ್ಪಾದನಾ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಪಾಲುದಾರಿಕೆಯ ನಂತರ eBikeGo ಭಾರತದಲ್ಲಿ Velocipedo ಎಲೆಕ್ಟ್ರಿಕ್ ಮೂರು ಚಕ್ರ ವಾಹನದ ಉತ್ಪಾದನೆಯನ್ನು ಆರಂಭಿಸಲಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

eBikeGo ಮೊಬಿಲಿಟಿ ಭಾರತದಲ್ಲಿಯೇ ತ್ರಿಚಕ್ರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುವ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದೆ. ವೆಲೋಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪರ್ಯಾಯ ಆಯ್ಕೆಯಾಗಿದ್ದು, ಇತರ ದ್ವಿಚಕ್ರ ವಾಹನಗಳಿಗಿಂತ ಸುರಕ್ಷಿತವಾಗಿದೆ. ವೆಲೋಸಿಪೆಡೊ ಟ್ರೈಕ್‌ ತನ್ನ ವಿನ್ಯಾಸ ಹಾಗೂ ಪ್ರಾಯೋಗಿಕತೆಗಾಗಿ ಅಂತರಾಷ್ಟ್ರೀಯವಾಗಿ ಪ್ರಸಿದ್ಧವಾಗಿರುವ ರೆಡ್ಡಾಟ್ ಡಿಸೈನ್ ಅವಾರ್ಡ್ ಅನ್ನು ಸಹ ಪಡೆದಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ವೆಲೋಸಿಪಿಡೊ, ಸ್ಪ್ಯಾನಿಷ್ ಆಟೋಮೊಬೈಲ್ ಕಂಪನಿಯಾದ ಟೊರೊಟ್ ಉತ್ಪಾದಿಸಿರುವ ಮೂರು ಚಕ್ರಗಳ ಸ್ಮಾರ್ಟ್ ಟ್ರೈಸಿಕಲ್ ಆಗಿದೆ. ಈ ಟ್ರೈಕ್ ಮುಂಭಾಗದಲ್ಲಿ ಎರಡು ವ್ಹೀಲ್ ಹಾಗೂ ಹಿಂಭಾಗದಲ್ಲಿ ಒಂದು ವ್ಹೀಲ್ ಹೊಂದಿದೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ಟ್ರೈಕ್‌ನ ಸಂಪೂರ್ಣ ಬಾಡಿಯನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಇದು ಪ್ರಯಾಣಿಕರನ್ನು ಬಿಸಿಲಿನಿಂದ ರಕ್ಷಿಸುತ್ತದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಎರಡು ಸೀಟುಗಳ ಈ ತ್ರಿಚಕ್ರ ವಾಹನದಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಕಂಪನಿಯು ಇದನ್ನು ನಗರ ಪ್ರದೇಶಗಳ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಈ ಟ್ರೈಕ್ ಯಾವುದೇ ಬೈಕು ಅಥವಾ ಸ್ಕೂಟರ್‌ಗಿಂತ ಕಾರ್ಯನಿರ್ವಹಿಸಲು ಸುಲಭ ಹಾಗೂ ಸುರಕ್ಷಿತವಾಗಿದ್ದು, ಪ್ರತಿದಿನ ಬಳಸಬಹುದು. ಈ ವಾಹನವನ್ನು ನಗರದ ಟ್ರಾಫಿಕ್‌ನಲ್ಲಿ ಸುಲಭವಾಗಿ ಚಾಲನೆ ಮಾಡುವಂತೆ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಬಹಳ ಕಡಿಮೆ ಜಾಗವನ್ನು ತೆಗೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ವೆಲೋಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ಸುಧಾರಿತ ತಂತ್ರಜ್ಞಾನದ ಉದಾಹರಣೆಯಾಗಿದ್ದು, ಇದನ್ನು ಕಾರಿನ ಸೌಕರ್ಯ ಹಾಗೂ ಸುರಕ್ಷತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದೇ ವೇಳೆ ಈ ವಾಹನವು ಮೋಟಾರ್‌ಬೈಕ್‌ನಂತಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮುಂಭಾಗದಲ್ಲಿ ಎರಡು ವ್ಹೀಲ್'ಗಲಿರುವುದರಿಂದ ಈ ವಾಹನವು ರಸ್ತೆಯಲ್ಲಿ ಸಾಮಾನ್ಯ ಸ್ಕೂಟರ್‌ಗಿಂತ ಹೆಚ್ಚು ಬ್ಯಾಲೆನ್ಸ್ ಆಗಿರುತ್ತದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಈ ಮೂರು ಚಕ್ರಗಳ ಸ್ಕೂಟರ್ ಯಾವುದೇ ರಸ್ತೆಯಲ್ಲೂ ಸುಲಭವಾಗಿ ಸಾಗುತ್ತದೆ. ಮೂಲಗಳ ಪ್ರಕಾರ, ವೆಲೋಸಿಪಿಡೊ ಎಲೆಕ್ಟ್ರಿಕ್ ಟ್ರೈಕ್ ಅನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ ವೈಯಕ್ತಿಕ ವಾಹನ, ಕ್ಯಾಬ್ ಹಾಗೂ ಕಾರ್ಗೋ ವಾಹನಗಳು ಸೇರಿವೆ. eBikeGo ಮುಂದಿನ ವರ್ಷದ ಆರಂಭದಲ್ಲಿ ಪುಣೆಯಲ್ಲಿ ಈ ವಾಹನದ ಉತ್ಪಾದನೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಈ ಮೂರು ಚಕ್ರಗಳ ಎಲೆಕ್ಟ್ರಿಕ್ ಸ್ಕೂಟರ್‌ನ ಮೂಲ ಮಾದರಿಯು ಇಬ್ಬರು ಕುಳಿತುಕೊಳ್ಳುವಂತೆ, ಎರಡು ಸೀಟ್ ಬೆಲ್ಟ್‌ ಹಾಗೂ ಪೂರ್ಣ ಕ್ಯಾಬ್‌ ಹೊಂದಿರಲಿದೆ. ಈ ಟ್ರೈಕ್ ಚಾಲನೆ ಮಾಡಲು ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ. ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಟ್ರೈಕ್ ಸುಮಾರು 200 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 95 ಕಿ.ಮೀಗಳಾಗಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

180 ಕೆ.ಜಿ ತೂಕವನ್ನು ಹೊಂದಿರುವ ವೆಲೋಸಿಪಿಡೊ ಟ್ರೈಕ್ ಒಂದೂವರೆ ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ವಾಹನದಲ್ಲಿ ಕಂಪನಿಯು ರಿಜೆನೆರೇಟಿವ್ ಬ್ರೇಕ್ ತಂತ್ರಜ್ಞಾನವನ್ನು ಬಳಸಿದೆ. ಇದರಿಂದ ಈ ಟ್ರೈಕ್ ಚಾಲನೆಯಲ್ಲಿದ್ದಾಗಲೂ ಚಾರ್ಜ್ ಆಗುತ್ತಲೇ ಇರುತ್ತದೆ. ವಾಣಿಜ್ಯ ಬಳಕೆಯ ಕಾರ್ಗೋ ಮಾದರಿಯು 150 ಕೆ.ಜಿ ತೂಕವನ್ನು ಹೊಂದಿದ್ದು, 70 ಕೆ.ಜಿ ಸರಕನ್ನು ಸಾಗಿಸಬಹುದು.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಭರದಿಂದ ಸಾಗುತ್ತಿದೆ. ಪೆಟ್ರೋಲ್, ಡೀಸೆಲ್ ಎಂಜಿನ್ ಗಳಿಂದ ಚಲಿಸುವ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮವನ್ನು ತೆಗೆದುಕೊಳ್ಳುತ್ತಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ನಿರ್ದಿಷ್ಟವಾಗಿ ಹೇಳುವುದಾದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರವು ಕೆಲಸ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು ಸಬ್ಸಿಡಿ, ತೆರಿಗೆ ವಿನಾಯಿತಿಯಂತಹ ಹಲವು ಕೊಡುಗೆಗಳನ್ನು ನೀಡಲಾಗುತ್ತಿದೆ. ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ಮೇಲೆ ವಿಧಿಸಲಾಗುತ್ತಿದ್ದ ಬಡ್ಡಿ ದರವನ್ನು ಯೂನಿಯನ್ ಬ್ಯಾಂಕ್ ಕಡಿತಗೊಳಿಸಿದೆ. ಬ್ಯಾಂಕ್ ಈ ವಾಹನಗಳ ಮೇಲೆ ವಿಧಿಸುತ್ತಿದ್ದ ಬಡ್ಡಿ ದರವನ್ನು 6.95% ಗೆ ನಿಗದಿಪಡಿಸಿದೆ. ಯೂನಿಯನ್ ಗ್ರೀನ್ ಮೈಲ್ ಯೋಜನೆಯಡಿ ಈ ಸಾಲ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆ ಬಡ್ಡಿ ದರವನ್ನು ಕಡಿಮೆ ಮಾಡುವುದಲ್ಲದೆ, ಸಾಲದ ಸಂಸ್ಕರಣಾ ಶುಲ್ಕವನ್ನು ತೆಗೆದು ಹಾಕುತ್ತದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಎಲೆಕ್ಟ್ರಿಕ್ ವಾಹನ ಪ್ರಿಯರನ್ನು ಸೆಳೆಯಲು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಎಲೆಕ್ಟ್ರಿಕ್ ಕಾರಿನ ಮೇಲೆ ಯಾವುದೇ ಸೀಲಿಂಗ್ ಅನ್ನು ವಿಧಿಸಲಾಗಿಲ್ಲ. ಇದರಿಂದ ಎಲೆಕ್ಟ್ರಿಕ್ ಕಾರು ಎಷ್ಟೇ ದುಬಾರಿಯಾದರೂ ಬ್ಯಾಂಕ್ ಸಾಲ ನೀಡಲಿದೆ. ಆದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಕ್ರೆಡಿಟ್ ಮೊತ್ತವನ್ನು ನಿಗದಿಪಡಿಸಲಾಗಿದೆ. ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳಿಗೆ ಕೇವಲ ರೂ. 10 ಲಕ್ಷಗಳವರೆಗೆ ಮಾತ್ರ ಸಾಲ ನೀಡಲಾಗುತ್ತದೆ.

ಭಾರತದಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲಿದೆ eBikeGo

ಇವುಗಳ ಬಡ್ಡಿ ದರವನ್ನು 6.95% ಗೆ ನಿಗದಿಪಡಿಸಲಾಗಿದೆ. ಇದು ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಆಧರಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಾಲ ನೀಡುವ ಯೋಜನೆಯ ನಂತರ ಬ್ಯಾಂಕ್ ರೂಫ್ ಸೋಲಾರ್ ಸಿಸ್ಟಂ ಸ್ಥಾಪಿಸಲು ಸಾಲ ಯೋಜನೆಯನ್ನು ಪರಿಚಯಿಸಿದೆ. ಈ ಸಾಲಕ್ಕೆ ವಿಶೇಷ ಬಡ್ಡಿ ರಿಯಾಯಿತಿಯ ಕೊಡುಗೆಯನ್ನೂ ಸಹ ಬ್ಯಾಂಕ್ ಪ್ರಕಟಿಸಿದೆ. ಎಲ್ಲಾ ನಿವಾಸಿಗಳಿಗೆ ಸಾಲ ನೀಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Article Published On: Tuesday, November 23, 2021, 18:58 [IST]
English summary
Ebikego to manufacture velocipedo electric trike in india soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+