ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ವಿಶೇಷತೆಗಳು
ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಮಲ್ಟಿಸ್ಟ್ರಾಡಾ ವಿ4 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಮಲ್ಟಿಸ್ಟ್ರಾಡಾ ವಿ4 ಮತ್ತು ಮಲ್ಟಿಸ್ಟ್ರಾಡಾ ವಿ4 ಎಸ್ ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಅಡ್ಬೆಂಚರ್ ಟೂರರ್ ಬೈಕ್ ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಈ ಅಡ್ವೆಂಚರ್ ಟೂರರ್ ಬೈಕ್ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಹೊಂದಿದೆ. ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಎಂಜಿನ್
ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನಲ್ಲಿ 1,158 ಸಿಸಿ ವಿ-ಟ್ವಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‍ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್&ಡೌನ್ ಸಿಸ್ಟಂ ಅನ್ನು ಹೊಂದಿದೆ. ವಿ4 ಗ್ರ್ಯಾಂಟುರಿಸ್ಮೊ ಎಂಜಿನ್ ಅತಿ ಮುಖ್ಯ ಬದಲಾವಣೆಯೆಂದರೆ ಇದು ಡೆಸ್ಮೋಡ್ರೊಮಿಕ್ ವಾಲ್ವ್ ಆಕ್ಟಿವೇಷನ್ ಬಳಸುವುದಿಲ್ಲ

ವಿನ್ಯಾಸ
ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ವಿನ್ಯಾಸವು ವಿ-ಟ್ವಿನ್ ಬೈಕ್ ಗಳಿಗೆ ಸ್ವಲ್ಪಮಟ್ಟಿಗೆ ಹೋಲುವಂತಿದೆ. ಇನ್ನು ಈ ಬೈಕಿನಲ್ಲಿ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದ್ದು, ಬಾಡಿವರ್ಕ್ ಲೇಯರ್ಡ್ ಏರ್ ವೆಂಟ್ ಸಿಲ್ಟ್‌ಗಳನ್ನು ಸುಧಾರಿತ ಏರೋಡೈನಾಮಿಕ್ ಮತ್ತು ಉತ್ತಮ ಸೌಕರ್ಯಕಗಳನ್ನು ಒಳಗೊಂಡಿದೆ. ಈ ಬೈಕಿನ ಸೀಟಿನ ಎತ್ತರವು 840 ಎಂಎಂ ಮತ್ತು 860 ಎಂಎಂ ಎರಡು ಎರಡು ಸ್ಥಾನಗಳಿವೆ.

ಫೀಚರ್ಸ್
ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನಲ್ಲಿ 4 5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯೊಂದಿಗೆ ಎಲ್ಇಡಿ ಲೈಟಿಂಗ್ ಸಿಸ್ಟಂ ಹೊಂದಿದ್ದು, ವಿ4 ಎಸ್ ಕಾರ್ನರಿಂಗ್ ಲ್ಯಾಂಪ್ ಗಳೊಂದಿಗೆ ಪೂರ್ಣ-ಎಲ್ಇಡಿ ಸಿಸ್ಟಂ ಅನ್ನು ಹೊಂದಿದೆ.

ಇನ್ನು ಈ ಬೈಕಿನಲ್ಲಿ 6.5-ಇಂಚಿನ ಟಿಎಪ್ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳಿಗಾಗಿ ಮೀಸಲಾದ ಕನೆಕ್ಟಿವಿಟಿ ಅಪ್ಲಿಕೇಶನ್ ವಿವಿಧ ಫೋನ್ ಅಪ್ಲಿಕೇಶನ್‌ಗಳನ್ನು ಸಿಸ್ಟಂಗಳೊಂದಿಗೆ ಸಂಯೋಜಿಸಲಾಗಿದೆ. ಇದರೊಂದಿಗೆ ಇದರಲ್ಲಿ ಟರ್ನ್-ಬೈ ನ್ಯಾವಿಗೇಷನ್ ಅನ್ನು ಸಹ ಒಳಗೊಂಡಿದೆ, ಇದು ನೇರವಾಗಿ ಬೈಕ್‌ನ ಡ್ಯಾಶ್‌ನಲ್ಲಿ ಗೋಚರಿಸುತ್ತದೆ.

ಈ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಕಾರ್ನರಿಂಗ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ವ್ಹೀಲಿ ಕಂಟ್ರೋಲ್ ಮತ್ತು ಟ್ರ್ಯಾಕ್ಷನ್ ಕಂಟ್ರೋಳ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಟಾಪ್ ಎಸ್ ರೂಪಾಂತರದಲ್ಲಿ ಕಾರ್ನರಿಂಗ್ ಲೈಟ್ಸ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಸ್ಪೋರ್ಟ್, ಟೂರಿಂಗ್, ಅರ್ಬನ್ ಮತ್ತು ಎಂಡ್ಯೂರೋ ಎಂಬ ನಾಲ್ಕು ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ವೆಹಿಕಲ್ ಹೋಲ್ಡ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆಯುತ್ತದೆ.

ಸಸ್ಪೆಂಕ್ಷನ್ ಸೆಟಪ್
ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ಮುಂಭಾಗದಲ್ಲಿ 170 ಎಂಎಂ ವ್ಹೀಲ್ ಟ್ರ್ಯಾವೆಲ್ ಮತ್ತು ಹಿಂಭಾಗದಲ್ಲಿ 180 ಎಂಎಂ ಹೊಂದಿದೆ, ಮಲ್ಟಿಸ್ಟ್ರಾಡಾ ವಿ4 ಮಾರ್ಜೋಚಿ ಮೆಕ್ಯಾನಿಕಲ್ ಸಸ್ಪೆಂಕ್ಷನ್ ಸ್ಟ್ಯಾಂಚಿಯನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಪಡೆದುಕೊಂಡದೆ.

ಬ್ರೇಕಿಂಗ್ ಸಿಸ್ಟಂ
ಈ ಮಲ್ಟಿಸ್ಟ್ರಾಡಾ ವಿ4 ಬೈಕಿನ ಮುಂಭಾಗದಲ್ಲಿ ಎಂ 4.32 ಕ್ಯಾಲಿಪರ್‌ಗಳನ್ನು ಟ್ವಿನ್ 320 ಎಂಎಂ ಡಿಸ್ ಬ್ರೇಕ್ ಮತ್ತು ಹಿಂಭಾಗದಲ್ಲಿ 330 ಎಂಎಂ ಡಿಸ್ಕ್ ಬ್ರೇಕ್ ನೊಂದಿಗೆ ಬ್ರೆಂಬೊ ಸ್ಟೈಲ್ಮಾ ಕ್ಯಾಲಿಪರ್‌ಗಳನ್ನು ಹೊಂದಿದೆ.


Click it and Unblock the Notifications








