ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ಯಾಕ್-ಟು-ಬ್ಯಾಕ್ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಟಿವಿಎಸ್ ಮೋಟಾರ್ ತನ್ನ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ(TVS Apache RTR 200 4V) ಬೈಕ್ ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬೆಲೆಗಳು ಹೆಚ್ಚು ಬದಲಾಗಿಲ್ಲ ಆದರೆ ತಯಾರಕರು ಡಿಆರ್‌ಎಲ್‌ (ಡೇಟೈಮ್ ರನ್ನಿಂಗ್ ಲೈಟ್) ನೊಂದಿಗೆ ಹೊಸ ಹೆಡ್‌ಲ್ಯಾಂಪ್ ಅನ್ನು ಸೇರಿಸಿದ್ದಾರೆ. ಈ ರೀತಿಯ ಕೆಲವು ಹೊಸ ನವೀಕರಣವನ್ನು ಪಡೆದುಕೊಂಡಿದೆ. ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ವಿನ್ಯಾಸ

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಅಪಾಚೆ ಆರ್‌ಟಿಆರ್ 160 4ವಿ ಮಾದರಿಗೆ ಹೋಲುತ್ತದೆ. ಈ ಬೈಕ್ ಒಟ್ಟಾರೆ ಸ್ಟೈಲಿಂಗ್ ಮತ್ತು ಎಂಜಿನ್ ವಿಶೇಷಣಗಳನ್ನು ಉಳಿಸಿಕೊಂಡಿದೆ. ಈ ಹೊಸ ಬೈಕಿನಲ್ಲಿ ಲೋ ಮತ್ತು ಹೈ ಬೀಮ್ ಗಳೊಂದಿಗೆ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಫ್ರಂಟ್ ಪೊಸಿಷನ್ ಲ್ಯಾಂಪ್ (ಎಫ್‌ಪಿಎಲ್) ಗೆ ತನ್ನ ನಿಲುವನ್ನು ಬದಲಾಯಿಸಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಫೀಚರ್ಸ್

ಈ ನೇಕೆಡ್ ಸ್ಟ್ರೀಟ್‌ಫೈಟರ್ ಈಗಾಗಲೇ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ. ಈ ಹೊಸ ಬೈಕ್ ಸ್ಪೋರ್ಟ್, ಅರ್ಬನ್ ಮತ್ತು ರೈನ್ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ಇನ್ನು ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಸವಾರರಿಗೆ ಹೆಚ್ಚುವರಿ ಹತೋಟಿ ನೀಡುತ್ತದೆ. ಈ ಹೊಸ ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಈ ಹೊಸ ಬೈಕ್ TVS SmartXonnect ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಬರುತ್ತದೆ ಅದು ರೇಸಿಂಗ್ ಶೈಲಿಯನ್ನು ಪರಿಶೀಲಿಸಲು ರೇಸ್ ಅನಾಲಿಟಿಕ್ಸ್ ಮತ್ತು ಡೇಟಾ ಸೇರಿದಂತೆ ಹಲವಾರು ಡೇಟಾವನ್ನು ನೀಡುತ್ತದೆ. ಇದರಲ್ಲಿ ಟ್ರ್ಯಾಕ್ ರೈಡಿಂಗ್ ಟೆಲಿಮೆಟ್ರಿ ಜೊತೆಗೆ ಟರ್ನ್ ಮೂಲಕ ನ್ಯಾವಿಗೇಷನ್, ಕರೆ ಮತ್ತು ಎಸ್ಎಂಎಸ್ ನೋಟಿಫಿಕೇಷನ್ ಮತ್ತು ಕ್ರ್ಯಾಶ್ ಅಲರ್ಟ್ ಸಿಸ್ಟಮ್ ಸೇರಿದಂತೆ ಇತರ ಮಾಹಿತಿಗಳು ನೀಡುತ್ತದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್ ಸೆಟಪ್

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಶೋವಾ ಸಸ್ಪೆಂಕ್ಷನ್ ಮತ್ತು ಇದು ಪ್ರಿ ಲೋಡ್ ಮಾಡಲಾದ ಹೊಂದಾಣಿಕೆಯನ್ನು ಹೊಂದಿದ್ದು ಬಳಕೆದಾರರಿಗೆ ವಿಭಿನ್ನ ರೈಡಿಂಗ್ ಪರಿಸ್ಥಿತಿಗಳ ನಡುವೆ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ಬೈಕ್ ಹೊಂದಾಣಿಕೆಯ ಬ್ರೇಕ್‌ಗಳು ಮತ್ತು 3-ಹಂತದ ಹೊಂದಾಣಿಕೆಯೊಂದಿಗೆ ಕ್ಲಚ್ ಲಿವರ್‌ಗಳನ್ನು ಒಳಗೊಂಡಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 270 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಪೆಟಲ್ ಡಿಸ್ಕ್ ಯುನಿಟ್ ಅನ್ನು ಹೊಂದಿದೆ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಆಯ್ಕೆಯನ್ನು ಕೂಡ ನೀಡಲಾಗಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಎಂಜಿನ್

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ 197.75 ಸಿಸಿ ಸಿಂಗಲ್-ಸಿಲಿಂಡರ್, ಫೋರ್-ಸ್ಟ್ರೋಕ್, 4ವಿ ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 20.53 ಬಿಹೆಚ್‍ಪಿ ಪವರ್ ಮತ್ತು 7,800 ಆರ್‌ಪಿಎಂನಲ್ಲಿ 17.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಬಣ್ಣಗಳು

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಗ್ಲೋಸ್ ಬ್ಲಾಕ್, ಪರ್ಲ್ ವೈಟ್ ಮತ್ತು ಮ್ಯಾಟ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಈ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಇದರಲ್ಲಿ ಮೆಚ್ಚಿನ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಅಯಾಮಗಳು

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ 2,050 ಎಂಎಂ ಉದ್ದ, 790 ಎಂಎಂ ಅಗಲ ಮತ್ತು 1,050 ಎಂಎಂ ಎತ್ತರವನ್ನು ಹೊಂದಿದೆ. ಈ ಬೈಕ್‌ನ ವ್ಹೀಲ್‌ಬೇಸ್ 1,050 ಎಂಎಂ ಉದ್ದವಿದೆ. ಇನ್ನು ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಟಿವಿಎಸ್ ಮೋಟಾರ್ ಕಂಪನಿಯು ವಿಶ್ವದ ಅತಿ ದೊಡ್ಡ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಲು ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ, ಕಂಪನಿಯು ತನ್ನ ದ್ವಿಚಕ್ರ ವಾಹನ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಲು ಉದ್ದೇಶಿಸಿದೆ ಎಂದು ಘೋಷಿಸಿದೆ. ಟಿವಿಎಸ್ ಮೋಟಾರ್ ಕಂಪನಿಯು ಸದ್ಯಕ್ಕೆ ಭಾರತದಲ್ಲಿ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗಾಗಿ ರೂ. 1,200 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಭವಿಷ್ಯದ ತಂತ್ರಜ್ಞಾನಗಳಲ್ಲಿ ಹಾಗೂ ಎಲೆಕ್ಟ್ರಿಕ್ ವಾಹನಗಳಲ್ಲಿ ಹೂಡಿಕೆ ಮಾಡುವ ಸಲುವಾಗಿ ಕಂಪನಿಯು ಈ ಬೃಹತ್ ಮೊತ್ತವನ್ನು ಮೀಸಲಿಟ್ಟಿದೆ.

ಹೊಸ TVS Apache RTR 200 4V ಬೈಕ್ ವಿಶೇಷತೆಗಳು

ಟಿವಿಎಸ್ ಮೋಟಾರ್ ಕಂಪನಿಯು ಸಹ ತನ್ನ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ತಮಿಳುನಾಡನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಕೇಂದ್ರ ಬಿಂದುವಾಗಿ ಪರಿವರ್ತಿಸಲು ಸಜ್ಜಾಗಿದೆ. ಇನ್ನು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಕೆಲವು ಹೊಸ ನವೀಕರಣವನ್ನು ಪಡೆದಿದೆ. ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ 200 ಸಿಸಿ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಹೊಸ ಬೈಕ್ ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Find here some top highlights of new tvs apache rtr 200 4v details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X