ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಹಾರ್ಲೆ-ಡೇವಿಡ್ಸನ್ ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಹೊಸ ಸ್ಪೋರ್ಟ್‌ಸರ್ ಎಸ್ ಬೈಕಿನ ಹೆಸರನ್ನು ಪಟ್ಟಿ ಮಾಡಿದೆ. ಈ ಬಹುನಿರೀಕ್ಷಿತ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಸುಧಾರಿತ ತಂತ್ರಜ್ಙಾನವನ್ನು ಹೊಂದಿರುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ. ಈ ಐಷಾರಾಮಿ ಬೈಕನ್ನು ಭಾರತದಲ್ಲಿ ಸುಮಾರು ರೂ.15 ಲಕ್ಷಗಳಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಹೊಸ ಸ್ಪೋರ್ಟ್‌ಸರ್ ಎಸ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನಲ್ಲಿ 1250 ಸಿಸಿ ರೆವಲ್ಯೂಷನ್ ಮ್ಯಾಕ್ಸ್ 1250 ಟಿ ವಿ-ಟ್ವಿನ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಐಷಾರಾಮಿ ಬೈಕಿನಲ್ಲಿ ರೋಡ್, ಸ್ಪೋರ್ಟ್ಸ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಈ ಬೈಕಿನಲ್ಲಿ ಆಯತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಇಂಧನ ಟ್ಯಾಂಕ್, ವಿಶಾಲ ಹ್ಯಾಂಡಲ್‌ಬಾರ್‌ಗಳು ಮತ್ತು ಫ್ಲಾಟ್ ಸೀಟ್. ಕಂಚಿನ ಎಂಜಿನ್ ಹೆಡ್, ಬಾಬ್ ಕಟ್ ಫೆಂಡರ್‌ಗಳು ಮತ್ತು ಟೈಲ್-ಪೈಪ್ ಅನ್ನು ಹೊಂದಿದೆ. ಈ ಪ್ರೀಮಿಯಂ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಶೋವಾ ಪಿಗ್ಗಿಬ್ಯಾಕ್ ಪ್ರಿ ಲೊಡ್ ಸೆಟಪ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಇನ್ನು ಈ ಐಷಾರಾಮಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬ್ರೆಂಬೊ ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಬಿಡುಗಡೆಯಾಗಲಿರುವ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಕ್ರೂಸರ್ ಬೈಕ್ ಸ್ಟೋನ್ ವಾಶ್ಡ್ ವೈಟ್ ಪರ್ಲ್, ಮಿಡ್ನೈಟ್ ಕ್ರಿಮ್ಸನ್ ಮತ್ತು ವಿವಿದ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಜೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್

ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನಲ್ಲಿ ಕಾರ್ನೆರಿಂಗ್ ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಂ, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಸಿ-ಎಬಿಎಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ( ಫ್ರಂಟ್-ವೀಲ್ ಲಿಫ್ಟ್ ತಗ್ಗಿಸುವಿಕೆ (ಎಫ್‌ಎಲ್‌ಎಂ) ಯೊಂದಿಗೆ ಟಿಪಿಎಂಎಸ್) ಮತ್ತು ಕಾರ್ನರಿಂಗ್ ಟ್ರ್ಯಾಕ್ಷನ್ ಕಂಟ್ರೋಲ್ (ಸಿ-ಟಿಸಿಎಸ್) ಅನ್ನು ಹೊಂದಿದೆ.

More from DriveSpark

Article Published On: Monday, July 19, 2021, 9:57 [IST]
English summary
Harley-Davidson Sportster S Listed On Website.. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+